For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಭಾರತಕ್ಕೆ ಮತ್ತೆ ಮೆಸ್ಸಿ ಭೇಟಿ: ಜೆರ್ಸಿ ಉಡುಗೊರೆ ನೀಡಿದ ಐಸಿಸಿ ಅಧ್ಯಕ್ಷ ಜಯ್ ಶಾ

ಫುಟ್ಬಾಲ್‌ ಲೋಕದ ಸ್ಟಾರ್ ಆಟಗಾರ ಲಿಯೋನೆಲ್‌ ಮೆಸ್ಸಿ ಅವರ ಭಾರತದ ಪ್ರವಾಸದ ಮೂರನೇ ದಿನವಾದ ಸೋಮವಾರ ದೆಹಲಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಮೆಸ್ಸಿ ಅವರ ಕಾರ್ಯಕ್ರಮ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಐಸಿಸಿ ಅಧ್ಯಕ್ಷ ಜಯ್‌ ಶಾ, ಡಿಡಿಸಿಎ ಅಧ್ಯಕ್ಷೆ ರೋಹನ್ ಜೇಟ್ಲಿ ಮತ್ತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹಾಜರಿದ್ದರು. ಮೆಸ್ಸಿ ಅವರಿಗೆ ಜಯ್‌ ಶಾ ಭಾರತ ತಂಡದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು.

ಮಸ್ಸಿ ಅವರಿಗೆ ಜಯ್‌ ಶಾ ಅವರು ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ಗೂ ಆಹ್ವಾನವನ್ನು ನೀಡಿದರು. ಅಲ್ಲದೆ ಅವರಿಗೆ ಶಾ ಟೂರ್ನಮೆಂಟ್‌ಗೆ ಟಿಕೆಟ್ ನೀಡಿದರು. ಇದೇ ವೇಳೆ ಮೆಸ್ಸಿ ಅವರಿಗೆ ಆಟಗಾರರ ಹಸ್ತಾಕ್ಷರವಿರುವ ಕ್ರಿಕೆಟ್‌ ಬ್ಯಾಟ್ ಉಡುಗೊರೆಯಾಗಿ ನೀಡಿದರು. ಇನ್ನು ಇದೇ ಪ್ರವಾಸದಲ್ಲಿ ಮೆಸ್ಸಿ ಜೊತೆಗಿರುವ ಸುವಾರೆಜ್‌ಗೆ 7 ನೇ ಸಂಖ್ಯೆಯ ಜೆರ್ಸಿಯನ್ನು, ಡಿ ಪಾಲ್‌ಗೆ 9 ನೇ ಸಂಖ್ಯೆಯ ಜೆರ್ಸಿ ನೀಡಿ ಗೌರವಿಸಿದರು.

Messi Promises India Return Gets T20 World Cup Invite amp amp Jay Shah s Jersey Gift

ಈ ಸುಂದರ ಕಾರ್ಯಕ್ರಮಕ್ಕೂ ಮುನ್ನ ಲಿಯೋನೆಲ್‌ ಮೆಸ್ಸಿ ಕ್ರೀಡಾಂಗಣದಲ್ಲಿ ನೆರೆದಿದ್ದ ಯುವ ಆಟಗಾರರೊಂದಿಗೆ ಮಾತುಕತೆ ನಡೆಸಿದರು. ಅಲ್ಲದೆ ಅವರೊಂದಿಗೆ ಫೋಟೋಗಳನ್ನು ತೆಗೆಸಿಕೊಂಡರು. ಇದೇ ವೇಳೆ ಪ್ರೀಮಿಯರ್ ಲೀಗ್‌ನಲ್ಲಿ ವೆಸ್ಟ್ ಹ್ಯಾಮ್ ತಂಡವನ್ನು ಪ್ರತಿನಿಧಿಸಿದ್ದ ಭಾರತದ ಮಾಜಿ ಆಟಗಾರ ಅದಿತಿ ಚೌಹಾಣ್ ಅವರನ್ನು ಸಹ ಇದೇ ವೇಳೆ ಮೆಸ್ಸಿ ತಂಡ ಭೇಟಿ ಮಾಡಿತು.

ಮೆಸ್ಸಿ ಹೇಳಿದ್ದೇನು?

ಇದೇ ವೇಳೆ ಮೆಸ್ಸಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಭಾರತದಲ್ಲಿ ನನಗೆ ಸಿಕ್ಕ ಪ್ರೀತಿಗೆ ಧನ್ಯವಾದಗಳು. ಈ ಪ್ರವಾಸ ನನಗೆ ಅದ್ಭುತ ಅನುಭವ. ನಾವು ನಿಮ್ಮ ಪ್ರೀತಿಯನ್ನು ನಮ್ಮೊಂದಿಗೆ ಒಯ್ಯುತ್ತಿದ್ದೇವೆ. ನಾವು ಅವಕಾಶ ಸಿಕ್ಕಾಗ ಮತ್ತೆ ಭಾರತಕ್ಕೆ ಬರುತ್ತೇವೆ. ಪಂದ್ಯವನ್ನು ಆಡಲು ಆದರೂ ಆಗಲಿ ಅಥವಾ ಬೇರೆ ಕಾರ್ಯಕ್ರಮಗಳಿಗಾದರೂ ಆಗಲಿ ಮತ್ತೊಮ್ಮೆ ಭಾರತಕ್ಕೆ ಭೇಟಿ ನೀಡುವೆ ಎಂದು ಆಶಿಸುವೆ ಎಂದು ತಿಳಿಸಿದರು. ಮತ್ತೊಮ್ಮೆ ಭಾರತಕ್ಕೆ ಭೇಟಿ ನೀಡುವ ಆಸೆಯನ್ನು ಮೆಸ್ಸಿ ಬಹಿರಂಗ ಪಡಿಸಿದರು.

Messi Promises India Return Gets T20 World Cup Invite amp amp Jay Shah s Jersey Gift

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪ್ರದರ್ಶನ ಪಂದ್ಯ ನಡೆಯಿತು. ಈ ಪಂದ್ಯವನ್ನು ನೋಡಲು 22 ಸಾವಿರಕ್ಕೂ ಹೆಚ್ಚು ಜನರು ಕ್ರೀಡಾಂಗಣದಲ್ಲಿ ಹಾಜರಿದ್ದರು. ಇದೇ ವೇಳೆ ಮೆಸ್ಸಿ ಪರ ಘೋಷಣೆಗಳು ಮುಗಿಲು ಮಟ್ಟಿತ್ತು. ಮೆಸ್ಸಿ ಜೊತೆಗೆ ಭಾರತದ ಪ್ರವಾಸವನ್ನು ಬೆಳೆಸಿದ್ದ ಸುವಾರೆಜ್ ಮತ್ತು ಡಿ ಪಾಲ್ ಮೈದಾನದ ಸುತ್ತಲ ತಿರುಗಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. ಅಲ್ಲದೆ ಫುಟ್ಬಾಲ್‌ ಚೆಂಡನ್ನು ಜನ ಸಮೂಹದತ್ತ ಎಸೆದರು. ಸೋಮವಾರ ಮೆಸ್ಸಿ ಭಾರತದ ಪ್ರವಾಸದ ಕೊನೆಯ ದಿನ. ಈ ವರೆಗೆ ಮೆಸ್ಸಿ ಕೊಲ್ಕತ್ತಾ, ಹೈದರಾಬಾದ್, ಮುಂಬೈ, ದೆಹಲಿಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

Story first published: Monday, December 15, 2025, 21:00 [IST]
Other articles published on Dec 15, 2025
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+