Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸತತ 7 ವಿಶ್ವಕಪ್ ಪಂದ್ಯಗಳಲ್ಲಿ ಗೋಲು ಗಳಿಸಿ ಲಿಯೋನೆಲ್ ಮೆಸ್ಸಿ ಐತಿಹಾಸಿಕ ದಾಖಲೆ

ವಿಶ್ವ ಫುಟ್ಬಾಲ್ ಲೋಕದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ಫಿಫಾ ವಿಶ್ವಕಪ್‌ನಲ್ಲಿ ತಮ್ಮ ಕಾಲ್ಚಳಕದ ಕಮಾಲ್‌ ಮುಂದುವರೆಸಿದ್ದಾರೆ. ಭಾನುವಾರ ಬೆಳಗ್ಗೆ ಜೋರ್ಡನ್‌ ವಿರುದ್ಧದ ಪಂದ್ಯದಲ್ಲಿ ಎರಡನೇ ಅವಧಿಯಲ್ಲಿ ಅಂಗಳಕ್ಕೆ ಬಂದ ಮೆಸ್ಸಿ ಮ್ಯಾಜಿಕ್ ಮಾಡಿದರು. ಅದಾಗಲೇ ಅರ್ಜೆಂಟೀನಾ ಪಂದ್ಯದಲ್ಲಿ ಪುರ್ಣ ಹಿಡಿತ ಸಾಧಿಸಿತ್ತು. ಮೆಸ್ಸಿ ಬಾರಿಸಿದ ಗೋಲು ಪಂದ್ಯದ ಮೇಲೆ ಅರ್ಜೆಂಟೀನಾ ಹಿಡಿತವನ್ನು ಮತ್ತಷ್ಟು ಬಲ ಪಡಿಸಿತು.

ಫಿಫಾ ವಿಶ್ವಕಪ್‌ ಜೆ ಗುಂಪಿನ ಪಂದ್ಯದಲ್ಲಿ ಅರ್ಜೆಂಟೀನಾ 3-1 ಗೋಲುಗಳಿಂದ ಜೋರ್ಡಾನ್‌ ತಂಡವನ್ನು ಮಣಿಸಿತು. ಈ ಮೂಲಕ ಲಿಯೋನೆಲ್ ಮೆಸ್ಸಿ ಹೊಸ ದಾಖಲೆ ಬರೆದರು. ಫುಟ್‌ಬಾಲ್ ವಿಶ್ವಕಪ್ ಇತಿಹಾಸದಲ್ಲೇ ಸತತ ಏಳು ಪಂದ್ಯಗಳಲ್ಲಿ ಗೋಲು ಗಳಿಸಿದ ವಿಶ್ವದ ಮೊದಲ ಹಾಗೂ ಏಕೈಕ ಆಟಗಾರ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಅರ್ಜೆಂಟೀನಾದ ಮಾಂತ್ರಿಕ ಮೆಸ್ಸಿ ಪಾತ್ರರಾಗಿದ್ದಾರೆ. ಈ ಜಯದೊಂದಿಗೆ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಟೂರ್ನಿಯಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದೆ.

Messi

ಕ್ರೀಡಾಂಗಣದಲ್ಲಿ ಸೇರಿದ್ದ ಲಕ್ಷಾಂತರ ಅಭಿಮಾನಿಗಳಿಗೆ ಈ ರೋಮಾಂಚಕ ಪಂದ್ಯವು ವಿಶ್ವದ ಶ್ರೇಷ್ಠ ಆಟಗಾರನ ತಾಂತ್ರಿಕ ಕೌಶಲ್ಯವನ್ನು ಹತ್ತಿರದಿಂದ ಕಣ್ಣಾರೆ ಸವಿಯುವ ಅತ್ಯುತ್ತಮ ಅವಕಾಶವಾಗಿತ್ತು. ಪಂದ್ಯ ನಡೆದ ಡಲ್ಲಾಸ್‌ನ ಕ್ರೀಡಾಂಗಣ ಪೂರ್ಣ ಪ್ರಮಾಣದಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಅರ್ಜೆಂಟೀನಾ ಜೆರ್ಸಿಗಳಿಂದ ತುಂಬಿತ್ತು. ಮೆಸ್ಸಿ ಅವರ ಕಮಾಲ್‌ ನೋಡಿದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಮೆಸ್ಸಿ ಅವರ ಈ ನೂತನ ದಾಖಲೆ ನಿರ್ಮಾಣವು ಅಲ್ಲಿನ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನೇ ಬರೆದಿದೆ.

ಆರಂಭದಲ್ಲಿ ಆಕ್ರಮಣಕಾರಿ ಆಟ

ಪಂದ್ಯದ ಮೊದಲನೇ ನಿಮಿಷದಿಂದಲೇ ಮೈದಾನದಲ್ಲಿ ಅರ್ಜೆಂಟೀನಾ ತಂಡದ ಆಕ್ರಮಣಕಾರಿ ತಂತ್ರಗಳು ಎದ್ದು ಕಾಣುತ್ತಿದ್ದವು. ಜೋರ್ಡಾನ್ ಪಡೆಯ ರಕ್ಷಣಾ ವಿಭಾಗದಲ್ಲಿದ್ದ ತೀರಾ ಸಣ್ಣ ತಪ್ಪುಗಳನ್ನು ಅರ್ಜೆಂಟೀನಾ ಸಮರ್ಥವಾಗಿ ಬಳಸಿಕೊಂಡಿತು. ಅರ್ಜೆಂಟೀನಾ ತಂಡದ ಸಾಂಘಿಕ ಆಟ ಮತ್ತು ಪರಸ್ಪರ ನಿಖರವಾದ ಪಾಸ್‌ಗಳು ಜೋರ್ಡಾನ್ ಆಟಗಾರರನ್ನು ಒತ್ತಡಕ್ಕೆ ಸಿಲುಕಿಸಿದವು.

FIFA World Cup: ಪನಾಮ ಮಣಿಸಿದ ಇಂಗ್ಲೆಂಡ್‌, ಕೇನ್‌ ದಾಖಲೆಯ ಗೋಲು; ಕೊಲಂಬಿಯಾ ವಿರುದ್ಧ ಪೋರ್ಚುಗಲ್‌ ಡ್ರಾ

FIFA World Cup: ಪನಾಮ ಮಣಿಸಿದ ಇಂಗ್ಲೆಂಡ್‌, ಕೇನ್‌ ದಾಖಲೆಯ ಗೋಲು; ಕೊಲಂಬಿಯಾ ವಿರುದ್ಧ ಪೋರ್ಚುಗಲ್‌ ಡ್ರಾ

ಪಂದ್ಯದ 19ನೇ ನಿಮಿಷದಲ್ಲೇ ಅರ್ಜೆಂಟೀನಾದ ಚತುರ ಮಿಡ್‌ಫೀಲ್ಡರ್ ಜಿಯೋವಾನಿ ಲೋ ಸೆಲ್ಸೊ ಅವರು ಜೋರ್ಡಾನ್ ರಕ್ಷಣಾ ದಳದ ಕಣ್ಣು ತಪ್ಪಿಸಿ ಅದ್ಭುತವಾಗಿ ಗೋಲ್ ಪೆಟ್ಟಿಗೆಯೊಳಗೆ ಚೆಂಡನ್ನು ಬಾರಿಸಿದರು. ಈ ಗೋಲು ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.

Messi

ಮೊದಲ ಗೋಲಿನ ಸಂಭ್ರಮದ ಬೆನ್ನಲ್ಲೇ ಜೋರ್ಡಾನ್ ಮೇಲೆ ಇನ್ನಷ್ಟು ಒತ್ತಡ ಹೇರಿದ ಅರ್ಜೆಂಟೀನಾ 31ನೇ ನಿಮಿಷದಲ್ಲಿ ಮತ್ತೊಂದು ಭರ್ಜರಿ ಯಶಸ್ಸು ಕಂಡಿತು. ತಂಡದ ಮತ್ತೊಬ್ಬ ಪ್ರಮುಖ ಸ್ಟ್ರೈಕರ್ ಲೌಟಾರೊ ಮಾರ್ಟಿನೆಜ್ ಅವರು ಜೋರ್ಡಾನ್ ರಕ್ಷಣಾ ಕೋಟೆಯನ್ನು ಬೇಧಿಸಿ ಅಮೋಘ ಗೋಲು ಬಾರಿಸಿ ಮಿಂಚಿದರು. ಈ ಅವಧಿಯಲ್ಲಿ ಅರ್ಜೆಂಟೀನಾ 2-0 ಮುನ್ನಡೆ ಸಾಧಿಸಿತು.

ಫುಟ್ಬಾಲ್ ಸ್ಟಾರ್ ರೊನಾಲ್ಡಿನೊ ಭೇಟಿಯಾದ ಶುಭಮನ್‌ ಗಿಲ್‌; ಫೋಟೋ ವೈರಲ್

ಫುಟ್ಬಾಲ್ ಸ್ಟಾರ್ ರೊನಾಲ್ಡಿನೊ ಭೇಟಿಯಾದ ಶುಭಮನ್‌ ಗಿಲ್‌; ಫೋಟೋ ವೈರಲ್

ಎರಡನೇ ವಿಭಾಗದ ಆರಂಭದಲ್ಲಿ ಜೋರ್ಡಾನ್ ತಂಡಕ್ಕೆ ಯಶಸ್ಸು ದೊರೆಯಿತು. ಅವರ ಖ್ಯಾತ ಆಟಗಾರ ಮೂಸಾ ಅಲ್ತಾಮರಿ ಅರ್ಜೆಂಟೀನಾದ ಬಲಿಷ್ಠ ರಕ್ಷಣಾ ವಲಯವನ್ನು ಬೇಧಿಸಿ ಅದ್ಭುತವಾದ ಗೋಲು ಬಾರಿಸಿದರು. ಈ ಗೋಲಿನಿಂದಾಗಿ ಪಂದ್ಯದ ರೋಚಕತೆ ಮತ್ತಷ್ಟು ಹೆಚ್ಚಿತು.

ಮೆಸ್ಸಿ ಮ್ಯಾಜಿಕ್

ಪಂದ್ಯ ಮುಗಿಯಲು ಇನ್ನು ಕೆಲವೇ ನಿಮಿಷಗಳು ಬಾಕಿ ಇದ್ದಾಗ ಅಂದರೆ 80ನೇ ನಿಮಿಷದಲ್ಲಿ ಚೆಂಡನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡ ಮೆಸ್ಸಿ, ಫ್ರೀ ಕಿಕ್‌ ಅವಕಾಶದಲ್ಲಿ ಮೂರನೇ ಗೋಲು ದಾಖಲಿಸಿದರು.

ಡಲ್ಲಾಸ್‌ನಲ್ಲಿ ನಡೆದ ಜೋರ್ಡಾನ್ ವಿರುದ್ಧದ ಗೆಲುವಿನ ಸಿಹಿ ಅರ್ಜೆಂಟೀನಾ ತಂಡದ ಮುಂದಿನ ವಿಶ್ವಕಪ್ ಕನಸಿಗೆ ಪುಷ್ಠಿ ನೀಡಿದೆ. ಸತತ 7 ವಿಶ್ವಕಪ್ ಪಂದ್ಯಗಳಲ್ಲಿ ಗೋಲು ಗಳಿಸಿ ವಿಶ್ವ ದಾಖಲೆ ಬರೆದ ಲಿಯೋನೆಲ್ ಮೆಸ್ಸಿ ಅವರ ನಾಯಕತ್ವವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.

Story first published: Sunday, June 28, 2026, 11:36 [IST]
Other articles published on Jun 28, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+