ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಹಿರಿಯ ಹ್ಯಾಟ್ರಿಕ್ ಹೀರೋ: ಇಲ್ಲಿದೆ ಮೆಸ್ಸಿ ನಿರ್ಮಿಸಿದ ಟಾಪ್ 5 ದಾಖಲೆಗಳು
ಫಿಫಾ ವಿಶ್ವಕಪ್ ಆರಂಭವಾಗಿದೆ. ಈ ಮೆಗಾ ಇವೆಂಟ್ ಕ್ರೇಜ್ ಬುಧವಾರದಿಂದ ಇನ್ನು ಹೆಚ್ಚಾಗಿದೆ. ವಿಶ್ವದ ಸ್ಟಾರ್ ಆಟಗಾರರು ಕಣಕ್ಕೆ ಇಳಿಯುತ್ತಿದ್ದು ಅಭಿಮಾನಿಗಳನ್ನು ರಂಜಿಸಲು ತಯಾರಾಗಿದ್ದಾರೆ. ಬುಧವಾರ ಅರ್ಜೆಂಟೀನಾ, ಅಲ್ಜೇರಿಯಾ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಪಂದ್ಯದಲ್ಲಿ ತಂಡದ ಸೂಪರ್ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅಮೋಘ ಕಾಲ್ಚಳಕ ಪ್ರದರ್ಶಿಸಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಇವರು ಬರೆದಿರುವ ದಾಖಲೆಗಳ ಪಟ್ಟಿ ಇಲ್ಲಿದೆ.
ಫಿಫಾ ವಿಶ್ವಕಪ್‌ನ 'ಜೆ' ಗುಂಪಿನ ಪಂದ್ಯದಲ್ಲಿ ಅರ್ಜೆಂಟೀನಾ ತಂಡವು ಲಿಯೋನೆಲ್ ಮೆಸ್ಸಿ ಅವರ ಆಕರ್ಷಕ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಅಲ್ಜೀರಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ತಂಡದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು 17, 60 ಮತ್ತು 79ನೇ ನಿಮಿಷಗಳಲ್ಲಿ ಅಮೋಘ ಕಾಲ್ಚಳಕದೊಂದಿಗೆ ಹ್ಯಾಟ್ರಿಕ್ ಗೋಲು ಬಾರಿಸಿ ಇತಿಹಾಸ ನಿರ್ಮಿಸಿದರು. ಮೆಸ್ಸಿ ಅವರ ಈ ಸ್ಮರಣೀಯ ಪ್ರದರ್ಶನದಿಂದ ಅರ್ಜೆಂಟೀನಾ ಸುಲಭ ಜಯ ಸಾಧಿಸಿತು.

ಮಿರೋಸ್ಲಾವ್ ದಾಖಲೆಯ ಸಮಕ್ಕೆ
ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಜರ್ಮನಿ ತಂಡದ ಸ್ಟಾರ್ ಆಟಗಾರ ಮಿರೋಸ್ಲಾವ್ ಕ್ಲೋಸ್ ಅಧಿಕ ಗೋಲು ಬಾರಿಸಿದ ದಾಖಲೆಯನ್ನು ಹೊಂದಿದ್ದರು. ಇವರು ಫಿಫಾ ವಿಶ್ವಕಪ್‌ನಲ್ಲಿ ಒಟ್ಟು 16 ಗೋಲು ದಾಖಲಿಸಿದ್ದಾರೆ. ಬುಧವಾರ ಅಲ್ಜೇರಿಯಾದ ವಿರುದ್ಧದ ಪಂದ್ಯದಲ್ಲಿ ಮೆಸ್ಸಿ ಮೂರು ಗೋಲು ದಾಖಲಿಸುತ್ತಲೇ, ಈ ದಾಖಲೆಯ ಸಮಕ್ಕೆ ನಿಂತರು. ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ಮೆಸ್ಸಿ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ.
6ನೇ ವಿಶ್ವಕಪ್
ಅರ್ಜೆಂಟೀನಾ ತಂಡದ ಸೂಪರ್ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ಆರನೇ ಫಿಫಾ ವಿಶ್ವಕಪ್ ಫುಟ್ಬಾಲ್ ಆಡುತ್ತಿದ್ದು, ದಾಖಲೆ ಬರೆದಿದ್ದಾರೆ. ಇದಕ್ಕೂ ಮೊದಲು ಇವರು 2006, 2010, 2014, 2018 ಮತ್ತು 2022 ಸಹ ಈ ಮೊದಲು ಆಡಿದ್ದರು. ಇಷ್ಟೇ ಸಂಖ್ಯೆಯ ವಿಶ್ವಕಪ್‌ಗಳನ್ನು ಪೋರ್ಚುಗಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಸಹ ಆಡಿದ್ದು, ಅವರು ಈ ಬಾರಿ ವಿಶ್ವಕಪ್‌ನಲ್ಲಿ ಕಣಕ್ಕೆ ಇಳಿಯಲಿದ್ದಾರೆ.
1 ಹ್ಯಾಟ್ರಿಕ್
ಈಗಾಗಲೇ ಐದು ಫಿಫಾ ವಿಶ್ವಕಪ್ ಫುಟ್ಬಾಲ್ ಆಡಿರುವ ಮೆಸ್ಸಿ ಈ ವರೆಗೆ ಒಂದೇ ಒಂದು ಬಾರಿ ಹ್ಯಾಟ್ರಿಕ್ ಸಾಧನೆಯನ್ನು ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಇವರು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
200 ಪಂದ್ಯ
ಲಿಯೋನೆಲ್ ಮೆಸ್ಸಿ ಅರ್ಜೆಂಟೀನಾ ರಾಷ್ಟ್ರೀಯ ತಂಡದ ಪರವಾಗಿ 200 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಮೂಲಕ ವಿಶ್ವ ಫುಟ್‌ಬಾಲ್ ಇತಿಹಾಸದಲ್ಲಿ ಮತ್ತೊಂದು ಮಹತ್ತರ ಮೈಲಿಗಲ್ಲು ತಲುಪಿದ್ದಾರೆ. 2005ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಪದಾರ್ಪಣೆ ಮಾಡಿದ ಮೆಸ್ಸಿ, ತಮ್ಮ ಕಠಿಣ ಪರಿಶ್ರಮ ಮತ್ತು ಮ್ಯಾಜಿಕಲ್ ಆಟದ ಮೂಲಕ ಅರ್ಜೆಂಟೀನಾವನ್ನು ಫಿಫಾ ವಿಶ್ವಕಪ್ (2022) ಸೇರಿದಂತೆ ಹಲವು ಐತಿಹಾಸಿಕ ಚಾಂಪಿಯನ್‌ಶಿಪ್‌ಗಳತ್ತ ಮುನ್ನಡೆಸಿದ್ದಾರೆ. ದೇಶಕ್ಕಾಗಿ 200 ಪಂದ್ಯಗಳನ್ನು ಪೂರೈಸಿರುವುದು ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.
ಹ್ಯಾಟ್ರಿಕ್ ಬಾರಿಸಿದ ಹಿರಿಯ ಆಟಗಾರ
ಲಿಯೋನೆಲ್ ಮೆಸ್ಸಿ ಅವರು ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರು 2018ರ ಫಿಫಾ ವಿಶ್ವಕಪ್‌ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೋ ದಾಖಲೆಯನ್ನು ಅಳಿಸಿ ಹಾಕಿದರು. ಮೆಸ್ಸಿ ಈ ಸಾಲಿನ ಫಿಫಾ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಅಲ್ಜೇರಿಯಾ ವಿರುದ್ಧ ಹ್ಯಾಟ್ರಿಕ್ ಗೋಲು ಬಾರಿಸಿ ಈ ದಾಖಲೆ ಬರೆದಿದ್ದಾರೆ.
ಮೆಸ್ಸಿ ಈ ಬಾರಿಯ ವಿಶ್ವಕಪ್‌ನಲ್ಲಿ ಮತ್ತೆ ಯಾವೆಲ್ಲಾ ದಾಖಲೆ ಬರೆಯುತ್ತಾರೆ ಕುತೂಹಲ ಹೆಚ್ಚಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

