Messi vs Ronaldo: ಶತಕೋಟಿಗಳ ಒಡೆಯರಿಗೆ ಇದು ಲಾಸ್ಟ್ ಚಾನ್ಸ್
ಅಮೆರಿಕ, ಮೆಕ್ಸಿಕೊ, ಕೆನಡಾದಲ್ಲಿ 23ನೇ ಆವೃತ್ತಿಯ ಫಿಫಾ ವಿಶ್ವಕಪ್ ಆರಂಭವಾಗಿದೆ. ಈ ಮೆಗಾ ಇವೆಂಟ್‌ನಲ್ಲಿ ವಿಶ್ವದ 48 ದೇಶಗಳು ಭಾಗವಹಿಸುತ್ತಿವೆ. ಆದರೆ ಎಲ್ಲರ ಕಣ್ಣುಗಳು ಮಾತ್ರ ಆ ಇಬ್ಬರು ಸೂಪರ್ ಸ್ಟಾರ್ ಆಟಗಾರರ ಮೇಲೆ ನೆಟ್ಟಿದೆ. ಒಬ್ಬರು ಅರ್ಜೆಂಟೀನಾ ತಂಡವನ್ನು ಮುನ್ನಡೆಸುತ್ತಿರುವ ಲಿಯೋನೆಲ್ ಮೆಸ್ಸಿ ಹಾಗೂ ಇನ್ನೊಬ್ಬರು ಪೋರ್ಚುಗಲ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ.
ಮೆಸ್ಸಿ ಹಾಗೂ ರೊನಾಲ್ಡೊಗೆ ವಿಶ್ವದಲ್ಲೇ ಅವರದ್ದೇ ಆದ ಅಭಿಮಾನಿಗಳ ಬಳಗ ಇದೆ. ಈ ಬಾರಿಯ ವಿಶ್ವಕಪ್ ಇಬ್ಬರು ಸ್ಟಾರ್ ಆಟಗಾರರಿಗೂ ಸ್ಮರಣೀಯವಾಗಿರಲಿದೆ. ಏಕೆಂದರೆ ಇಬ್ಬರೂ ತಮ್ಮ ವೃತ್ತಿ ಜೀವನದ ಅಂಚಿನಲ್ಲಿದ್ದಾರೆ. ರೊನಾಲ್ಡೊ ಹಾಗೂ ಮೆಸ್ಸಿ ಆರನೇ ಬಾರಿಗೆ ಫಿಫಾ ವಿಶ್ವಕಪ್‌ನಲ್ಲಿ ಕಣಕ್ಕೆ ಇಳಿಯುತ್ತಿದ್ದಾರೆ. ಅದರಲ್ಲೂ ಈ ಬಾರಿ ಇಬ್ಬರೂ ಆಟಗಾರರು ಅಖಾಡ ಪ್ರವೇಶಿಸುತ್ತಿದ್ದಂತೆ ದೊಡ್ಡ ದಾಖಲೆ ಬರೆಯಲಿದ್ದಾರೆ.

ಫುಟ್‌ಬಾಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಇಬ್ಬರು ಬಿಲಿಯನೇರ್ (ಶತಕೋಟಿ ಅಧಿಪತಿ) ಆಟಗಾರರಾದ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಲಿಯೋನೆಲ್ ಮೆಸ್ಸಿ ಮೆಗಾ ಈವೆಂಟ್‌ನಲ್ಲಿ ಕಣಕ್ಕೆ ಇಳಿಯುತ್ತಿದ್ದಾರೆ. ಕಳೆದ ಎರಡು ದಶಕಗಳಿಂದ ವಿಶ್ವ ಫುಟ್‌ಬಾಲ್ ಆಳುತ್ತಿರುವ ಈ ದಿಗ್ಗಜರು, ಕೇವಲ ಶ್ರೇಷ್ಠ ಆಟಗಾರರಾಗಿ ಮಾತ್ರವಲ್ಲದೆ ಕ್ರೀಡಾ ಪ್ರಪಂಚದ ಅತ್ಯಂತ ಶ್ರೀಮಂತ ಕ್ರೀಡಾಪಟುಗಳಾಗಿ ಬೆಳೆದಿದ್ದಾರೆ. ಪೋರ್ಚುಗಲ್ ಮತ್ತು ಅರ್ಜೆಂಟೀನಾ ತಂಡಗಳು ತಮ್ಮ ವಿಶ್ವಕಪ್ ಅಭಿಯಾನವನ್ನು ಆರಂಭಿಸುತ್ತಿದ್ದಂತೆ, ಎಲ್ಲರ ಕಣ್ಣುಗಳು ಈ ಇಬ್ಬರು ಐಕಾನಿಕ್ ಪ್ಲೇಯರ್ ಮೇಲೆ ನೆಟ್ಟಿರುತ್ತದೆ.
ರೊನಾಲ್ಡೊ ಗಳಿಕೆ ಎಷ್ಟು?
ಫುಟ್ಬಾಲ್ ಪಂಡಿತರ ಪ್ರಕಾರ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವದ ಅತ್ಯಂತ ದುಬಾರಿ ಆಟಗಾರ ಎಂದು ಹೇಳಲಾಗುತ್ತದೆ. ಇವರು ವಾರ್ಷಿಕ ಗಳಿಕೆ $300 ಮಿಲಿಯನ್ ಡಾಲರ್ ಇರುವುದಾಗಿ ತಿಳಿದು ಬಂದಿದೆ. ಇನ್ನು ಇವರ ನಿವ್ವಳ ಮೌಲ್ಯವು $1.2 ಬಿಲಿಯನ್ ಆಗಿದೆ ಎಂದು ಹೇಳಲಾಗುತ್ತಿದೆ. ವಿಶ್ವದ ಕೆಲವೇ ಕೆಲವು ಬಿಲಿಯನೇರ್ ಕ್ರೀಡಾ ಪಟುಗಳಲ್ಲಿ ಇವರಿಗೆ ಅಗ್ರ ಸ್ಥಾನ.
ಮೆಸ್ಸಿ ಗಳಿಕೆ ಎಷ್ಟು?
ಲಿಯೋನೆಲ್ ಮೆಸ್ಸಿ ಸಹ ಗಳಿಕೆಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಹಿಂದೆ ಬಿದ್ದಿದ್ದಾರೆ. ಇವರು ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸಿದ ಸೂಪರ್ ಸ್ಟಾರ್. ಇವರ ನಿವ್ವಳ ಮೌಲ್ಯವು $1.1 ಬಿಲಿಯನ್ ಎಂದು ಅಂದಾಜಿಸಲಾಗುತ್ತಿದೆ. ಮೈದಾನದ ಒಳಗೆ ಹಾಗೂ ಹೊರಗೆ ಇವರ ಆಕರ್ಷಣೆ ಇವರನ್ನು ಶ್ರೀಮಂತ ಕ್ರೀಡಾ ಪಟುವಿನ ಪಟ್ಟಿಗೆ ಸೇರುವಂತೆ ಮಾಡಿದೆ.
6ನೇ ವಿಶ್ವಕಪ್ ಆಡುತ್ತಿರುವ ಸ್ಟಾರ್ ಆಟಗಾರರು
ಮೆಸ್ಸಿ ಹಾಗೂ ರೊನಾಲ್ಡೊ ಲಾಭದಾಯಕ ಒಪ್ಪಂದಗಳು, ಪ್ರಾಯೋಜಕತ್ವಗಳು, ವ್ಯಾಪಾರ ಉದ್ಯಮಗಳು ಮತ್ತು ಜಾಗತಿಕ ಬ್ರ್ಯಾಂಡಿಂಗ್ ಮೂಲಕ, ಅವರು ಆಟಕ್ಕಿಂತ ಹೆಚ್ಚಿನ ಗಳಿಕೆ ಪಡೆಯುವಲ್ಲಿ ನೆರವಾಗಿದೆ. 2006 ರಲ್ಲಿ ಜರ್ಮನಿಯಲ್ಲಿ ಪ್ರಾರಂಭವಾದ ಪ್ರಯಾಣವನ್ನು ಈ ಇಬ್ಬರೂ ಆಟಗಾರರೂ ಈಗಲೂ ಮುಂದುವರಿಸಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳ ನಂತರ, ಅವರು ತಮ್ಮ ರಾಷ್ಟ್ರೀಯ ತಂಡಗಳ ಪರ ಈಗಲೂ ಇವರು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿಯೇ ಉಳಿದಿದ್ದಾರೆ.
ಪ್ರಶಸ್ತಿ ಕನಸಿನಲ್ಲಿ ರೊನಾಲ್ಡೊ
ವಿಶ್ವದಲ್ಲೇ ತಮ್ಮ ಮಾಂತ್ರಿಕ ಆಟದಿಂದಲೇ ಹೆಸರುವಾಸಿಯಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊ,
ಈಗ 41 ವರ್ಷ ವಯಸ್ಸಿನ ರೊನಾಲ್ಡೊ ಈಗಾಗಲೇ, ಯುರೋಪಿಯನ್ ಚಾಂಪಿಯನ್‌ಶಿಪ್, ಅನೇಕ ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳು ಮತ್ತು ಐದು ಬ್ಯಾಲನ್ ಡಿ'ಓರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ, ಆದರೆ ವಿಶ್ವಕಪ್ ಗೆಲುವು ಕನಸು ಇನ್ನೂ ನನಸಾಗಿಲ್ಲ.
ಮತ್ತೊಂದೆಡೆ, ಮೆಸ್ಸಿ ಈಗಾಗಲೇ ಕಳೆದ ಬಾರಿ ವಿಶ್ವಕಪ್ ಗೆದ್ದು ನಿರಾಳವಾಗಿದ್ದಾರೆ. ಆದರೆ ಈ ಬಾರಿ ಅರ್ಜೆಂಟೀನಾವನ್ನು ಸತತ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟಕ್ಕೇರಿಸಿ, 1962ರಲ್ಲಿ ಬ್ರೆಜಿಲ್ ಮಾಡಿದ ಸಾಧನೆಯನ್ನು ಪುನರಾವರ್ತಿಸುವ ಗುರಿ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications


