Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲಿವರ್‌ಪೂಲ್ ಸ್ಟ್ರೈಕರ್ ಮೊಹಮ್ಮದ್ ಸಲಾಗೆ ಕೊರೊನಾ ಸೋಂಕು

Mohamed Salah tests positive for coronavirus: Egyptian FA

ಕೈರೋ: ಈಜಿಪ್ಟ್‌ನಲ್ಲಿ ನಡೆದ ಟೊಗೊ ವಿರುದ್ಧದ ಆಫ್ರಿಕಾ ಕಪ್ ಆಫ್ ನೇಶನ್ಸ್ ಕ್ವಾಲಿಫೈಯರ್ ಪಂದ್ಯದ ವೇಳೆ ಲಿವರ್‌ಪೂಲ್ ಸ್ಟ್ರೈಕರ್ ಮೊಹಮ್ಮದ್ ಸಲಾಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವುದಾಗಿ ಈಜಿಪ್ಶಿಯನ್ ಫುಟ್ಬಾಲ್ ಅಸೋಸಿಯೇಶನ್ ಶುಕ್ರವಾರ (ನವೆಂಬರ್ 13) ಹೇಳಿದೆ.

'ಮೆಡಿಕಲ್ ಸ್ವ್ಯಾಬ್ ನಡೆಸಿದ ವೇಳೆ ನಮ್ಮ ರಾಷ್ಟ್ರೀಯ ಫುಟ್ಬಾಲ್ ತಂಡದ ಅಂತಾರಾಷ್ಟ್ರೀಯ ಆಟಗಾರ, ಲಿವರ್‌ಪೂಲ್ ಸ್ಟಾರ್ ಮೊಹಮ್ಮದ್ ಸಲಾಗೆ ಕೊರೊನಾವೈರಸ್ ಸೋಂಕು ತಗುಲಿದೆ. ಅವರ ಕೋವಿಡ್-19 ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಬಂದಿದೆ,' ಎಂದು ಫುಟ್ಬಾಲ್ ಫೆಡರೇಶನ್ ತಿಳಿಸಿದೆ.

'ಸಲಾಗೆ ಯಾವುದೇ ರೀತಿಯ ರೋಗ ಲಕ್ಷಣಗಳಿರಲಿಲ್ಲ. ತಂಡದ ಉಳಿದೆಲ್ಲಾ ಆಟಗಾರ ಫಲಿತಾಂಶ ನೆಗೆಟಿವ್ ಬಂದಿದೆ. ಇಂಗ್ಲಿಷ್ ಕ್ಲಬ್ ಜೊತೆ ತಂಡದ ಡಾಕ್ಟರ್ ಮಾತನಾಡಿದ ಬಳಿಕ ಸಲಾ ವೈದ್ಯಕೀಯ ಮುನ್ನೆಚ್ಚರಿಕಾ ಕ್ರಮಗಳ ಮೊರೆ ಹೋಗಿದ್ದಾರೆ.

ಸಲಾ ಅವರನ್ನು ಐಸೊಲೇಶನ್‌ನಲ್ಲಿರಲು ತಿಳಿಸಲಾಗಿದೆ. ಅಲ್ಲದೆ ಅವರ ಸಂಪರ್ಕಕ್ಕೆ ಬಂದವರಿಗೂ ಐಸೊಲೇಶನ್‌ನಲ್ಲಿರಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

Story first published: Saturday, November 14, 2020, 9:50 [IST]
Other articles published on Nov 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+