Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬೆಕಮ್ ಆದ ಧೋನಿ, ಅಪ್ಪನಿಗೆ ನೀರು ಕುಡಿಸಿದ ಝೀವಾ

ಮುಂಬೈ, ಅಕ್ಟೋಬರ್ 16: ಬಾಲಿವುಡ್ ಸ್ಟಾರ್ಸ್ ಮತ್ತು ಕ್ರಿಕೆಟ್ ಆಟಗಾರರ ನಡುವಿನ ಫುಟ್ಬಾಲ್ ಪಂದ್ಯದಲ್ಲಿ ಮಿಂಚಿದ್ದು ಮಾಜಿ ನಾಯಕ ಎಂಎಸ್ ಧೋನಿ ಹಾಗೂ ಅವರ ಮಗಳು ಝೀವಾ ಎಂದರೆ ತಪ್ಪಾಗಲಾರದು. ಟೀಂ ಇಂಡಿಯಾದ ಅನೇಕ ಆಟಗಾರರು ಕ್ರಿಕೆಟ್ ನಂತೆ ಫುಟ್ಬಾಲ್ ಆಟದಲ್ಲೂ ಸಮರ್ಥವಾಗಿ ಆಡಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಭಾನುವಾರ ರಾತ್ರಿ ಮುಂಬೈನ ಅಂಧೇರಿ ಸ್ಪೋರ್ಟ್ ಕಾಂಪ್ಲೆಕ್ಸ್ ನಲ್ಲಿ ನಡೆದ ಸಹಾಯಾರ್ಥ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆಲ್ ಹಾರ್ಟ್ ಎಫ್ ಸಿ ತಂಡವು ರಣಬೀರ್ ಕಪೂರ್ ನೇತೃತ್ವದ ಆಲ್ ಸ್ಟಾರ್ಸ್ ಎಫ್ ಸಿ ತಂಡವನ್ನು 7-3 ಗೋಲುಗಳಿಂದ ಸೋಲಿಸಿದೆ.

MS Dhoni's daughter Ziva carries water for him on the field during Celebrity Clasico

ಕಳೆದ ವರ್ಷ ಈ ಎರಡು ತಂಡಗಳ ನಡುವೆ ನಡೆದಿದ್ದ ಪಂದ್ಯ 2-2 ಗೋಲುಗಳ ಅಂತರದ ಡ್ರಾನಲ್ಲಿ ಅಂತ್ಯವಾಗಿತ್ತು.

ಎರಡು ಗೋಲು ಬಾರಿಸಿದ ಧೋನಿ ಅವರು ಫುಟ್ಬಾಲ್ ದಿಗ್ಗಜ ಬೆಕಮ್ ರಂತೆ ಚೆಂಡನ್ನು ಅದ್ಭುತವಾಗಿ ಗೋಲ್ ಪೋಸ್ಟ್ ನೊಳಗೆ ನುಸುಳುವಂತೆ ಮಾಡಿದ್ದು ಎಲ್ಲರನ್ನು ಅಚ್ಚರಿಗೆ ದೂಡಿತು.

ಪಂದ್ಯ ಮುಗಿಯುವ ವೇಳೆ ಅಪ್ಪ ಧೋನಿಯನ್ನು ನೋಡಲು ಮೈದಾನಕ್ಕೆ ಬಂದ ಪುಟ್ಟ ಬಾಲಕಿ ಝೀವಾ, ತನ್ನ ಕೈಯಲ್ಲಿ ನೀರಿನ ಬಾಟಲಿ ಹಿಡಿದುಕೊಂಡು ಬಂದಿದ್ದಳು. ಅಪ್ಪನಿಗೆ ನೀರು ಕುಡಿಯುವಂತೆ ಬಾಟಲಿಯನ್ನು ಮುಂದೆ ಮಾಡಿದಳು. ಈ ಚಿತ್ರವನ್ನು ಅಭಿಮಾನಿಗಳು ಹಂಚಿಕೊಂಡಿದ್ದು, ಸಕತ್ ವೈರಲ್ ಆಗಿದೆ.

Story first published: Wednesday, January 3, 2018, 10:06 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+