For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ರೊನಾಲ್ಡೊ, ಮೆಸ್ಸಿ ಅಲ್ಲ; ವಿಶ್ವದ ಶ್ರೀಮಂತ ಫುಟ್ಬಾಲ್ ಆಟಗಾರ ಯಾರು ಗೊತ್ತೇ?; ಈತ 1,66,304 ಕೋಟಿ ಒಡೆಯ

ಕ್ರೀಡಾ ಜಗತ್ತಿನಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ, ಲಿಯೋನೆಲ್ ಮೆಸ್ಸಿ ಮತ್ತು ಸೇರಿದಂತೆ ಕೆಲವು ಫುಟ್ಬಾಲ್ ಆಟಗಾರರು ಜನಪ್ರಿಯ ಕ್ರೀಡೆಯಿಂದ ಶ್ರೀಮಂತ ಸಾಮ್ರಾಜ್ಯಗಳನ್ನು ನಿರ್ಮಿಸಿದ್ದಾರೆ.

ಆದಾಗ್ಯೂ, 20 ಶತಕೋಟಿ ಬಿಲಿಯನ್ ಡಾಲರ್ (ಅಂದಾಜು 1,66,304 ಕೋಟಿ ರೂಪಾಯಿ) ನಿವ್ವಳ ಸಂಪತ್ತನ್ನು ಹೊಂದಿರುವ ರಾಜಮನೆತನಕ್ಕೆ ಸೇರಿದ ಮತ್ತು ವಿಶ್ವದ ಶ್ರೀಮಂತ ಫುಟ್ಬಾಲ್ ಆಟಗಾರನಿಗೆ ಹೋಲಿಸಿದರೆ ಉಳಿದ ಸ್ಟಾರ್ ಆಟಗಾರರ ಮೌಲ್ಯವು ಸಣ್ಣದಾಗಿ ಕಾಣುತ್ತದೆ.

2023ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್‌ನೊಂದಿಗೆ ಕಳಪೆ ಋತುವನ್ನು ಹೊಂದಿದ್ದ ಕ್ರಿಸ್ಟಿಯಾನೋ ರೊನಾಲ್ಡೊ ಇದೀಗ ಸೌದಿ ಅರೇಬಿಯಾದ ಅಲ್ ನಾಸರ್‌ಗೆ ತೆರಳಿದ ನಂತರ, 260 ಮಿಲಿಯನ್ ಡಾಲರ್ ಗಳಿಸುವ ಮೂಲಕ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಫುಟ್ಬಾಲ್ ಆಟಗಾರರಾದರು.

Neither Ronaldo Nor Leonel Messi or Neymar: This is the worlds richest Footballer: Know Who?

ಇದೇ ವೇಳೆ, ಈಗ ಮೇಜರ್ ಲೀಗ್ ಸಾಕರ್‌ನಲ್ಲಿ ಇಂಟರ್ ಮಿಯಾಮಿಗಾಗಿ ಆಡುತ್ತಿರುವ ಲಿಯೋನೆಲ್ ಮೆಸ್ಸಿ, 130 ಮಿಲಿಯನ್ ಡಾಲರ್ ಗಳಿಕೆಯೊಂದಿಗೆ ಎರಡನೇ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ.

ಸಾರ್ವಜನಿಕವಾಗಿ ಲಭ್ಯವಿರುವ ದತ್ತಾಂಶ ಮತ್ತು ಸೆಲೆಬ್ರಿಟಿ ನಿವ್ವಳ ಮೌಲ್ಯದ ಪ್ರಕಾರ, ಕ್ರಮವಾಗಿ ಸರಿಸುಮಾರು 600 ಮಿಲಿಯನ್ ಡಾಲರ್ (ಅಂದಾಜು 4,972 ಕೋಟಿ ರೂಪಾಯಿ) ಮತ್ತು 650 ಮಿಲಿಯನ್ ಡಾಲರ್ (ಅಂದಾಜು 5,387 ಕೋಟಿ ರೂಪಾಯಿ) ನಿವ್ವಳ ಮೌಲ್ಯವನ್ನು ಹೊಂದಿರುವ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ಕ್ರೀಡಾ ಇತಿಹಾಸದಲ್ಲಿ ಇಬ್ಬರು ಅತ್ಯಂತ ಪ್ರಸಿದ್ಧ ಮತ್ತು ಯಶಸ್ವಿ ಫುಟ್ಬಾಲ್ ಆಟಗಾರರಾಗಿದ್ದಾರೆ.

ಆದರೆ ವಿಶ್ವದ ಶ್ರೀಮಂತ ಫುಟ್ಬಾಲ್ ಆಟಗಾರ ಯಾರು ಎಂದು ನೀವು ಇನ್ನೂ ಆಶ್ಚರ್ಯ ಪಡುತ್ತೀರಾ? 2023ರಲ್ಲಿ ಸೌದಿ ಪ್ರೊ ಕ್ಲಬ್ ತಂಡ ಅಲ್ ಹಿಲಾಲ್ ಜೊತೆಗೆ ವರ್ಷಕ್ಕೆ 100 ಮಿಲಿಯನ್ ಡಾಲರ್ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿರುವುದು ನೇಮರ್ ಜೂನಿಯರ್ ಕೂಡ ಶ್ರೀಮಂತ ಕ್ರೀಡಾಪಟು ಅಲ್ಲ.

Neither Ronaldo Nor Leonel Messi or Neymar: This is the worlds richest Footballer: Know Who?

ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ, ಬ್ರೆಜಿಲಿಯನ್ ಫುಟ್ಬಾಲ್ ಸೆನ್ಸೆಷನ್ 200 ಮಿಲಿಯನ್ ಯುಎಸ್ ಡಾಲರ್ (ಅಂದಾಜು 1657 ಕೋಟಿ ರೂಪಾಯಿ) ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ಫೈಕ್ ಬೊಲ್ಕಿಯಾ ವಿಶ್ವದ ಅತ್ಯಂತ ಶ್ರೀಮಂತ ಫುಟ್ಬಾಲ್ ಆಟಗಾರ

ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ ಪ್ರಕಾರ, 20 ಶತಕೋಟಿ ಬಿಲಿಯನ್ ಡಾಲರ್ (ಅಂದಾಜು 1,66,304 ಕೋಟಿ ರೂಪಾಯಿ) ನಿವ್ವಳ ಮೌಲ್ಯದೊಂದಿಗೆ ಫೈಕ್ ಬೊಲ್ಕಿಯಾ ವಿಶ್ವದ ಅತ್ಯಂತ ಶ್ರೀಮಂತ ಫುಟ್ಬಾಲ್ ಆಟಗಾರ ಎಂದು ಪರಿಗಣಿಸಲ್ಪಟ್ಟಿದ್ದಾರೆ.

ಥಾಯ್ ಲೀಗ್ 1ರಲ್ಲಿ ರಾಚಬುರಿ ಫುಟ್ಬಾಲ್ ಕ್ಲಬ್‌ಗಾಗಿ ಆಡುವ ಬ್ರೂನಿ ರಾಜಮನೆತನದ ಸದಸ್ಯ ಬ್ರೂನಿ ರಾಷ್ಟ್ರೀಯ ತಂಡದ ನಾಯಕರಾಗಿ ಫೈಕ್ ಬೊಲ್ಕಿಯಾ ಪ್ರತಿನಿಧಿಸಿದ್ದಾರೆ ಮತ್ತು ಸೇವೆ ಸಲ್ಲಿಸಿದ್ದಾರೆ.

Neither Ronaldo Nor Leonel Messi or Neymar: This is the worlds richest Footballer: Know Who?

ಡೈನಾಮಿಕ್ ವಿಂಗರ್ ಸೌತಾಂಪ್ಟನ್, ಚೆಲ್ಸಿಯಾ ಮತ್ತು ಲೀಸೆಸ್ಟರ್ ಸಿಟಿಯಂತಹ ಪ್ರೀಮಿಯರ್ ಲೀಗ್ ಕ್ಲಬ್‌ಗಳೊಂದಿಗೆ ಸಹ ಫೈಕ್ ಬೊಲ್ಕಿಯಾ ಕ್ರೀಡಾ ಸಂಬಂಧ ಹೊಂದಿದ್ದರು.

ಲಾಸ್ ಏಂಜಲೀಸ್‌ನಲ್ಲಿ ಜನಿಸಿದ ಫೈಕ್ ಬೊಲ್ಕಿಯಾ ಅವರು ಯುನೈಟೆಡ್ ಸ್ಟೇಟ್ಸ್ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಹೊಂದಿದ್ದರು. ಆದರೆ, ಅದರ ಬದಲಿಗೆ ಅವರು ತಮ್ಮ ಮೂಲದ ದೇಶವಾದ ಬ್ರೂನಿ ದೇಶಕ್ಕಾಗಿ ಆಡಲು ನಿರ್ಧರಿಸಿದರು.

ಫುಟ್ಬಾಲ್ ಕ್ರೀಡೆಯ ಬಗ್ಗೆ ಅವರ ಉತ್ಸಾಹದ ಬಗ್ಗೆ ಕೇಳಿದಾಗ, ಫೈಕ್ ಬೋಲ್ಕಿಯಾ ಅವರು ದಿ ಸನ್‌ಗೆ ನೀಡಿದ ಸಂದರ್ಶನದಲ್ಲಿ, "ನಾನು ಚಿಕ್ಕವಯಸ್ಸಿನಿಂದಲೂ ಫುಟ್ಬಾಲ್ ಆಡುತ್ತಿದ್ದೆ ಮತ್ತು ಚಿಕ್ಕ ವಯಸ್ಸಿನಿಂದಲೂ, ನಾನು ಯಾವಾಗಲೂ ಮೈದಾನದಲ್ಲಿ ಮತ್ತು ನನ್ನ ಕಾಲುಗಳಲ್ಲಿ ಚೆಂಡನ್ನು ಆಡುವುದನ್ನು ಆನಂದಿಸುತ್ತೇನೆ," ಎಂದರು.

Neither Ronaldo Nor Leonel Messi or Neymar: This is the worlds richest Footballer: Know Who?

ಫೈಕ್ ಬೊಲ್ಕಿಯಾ ಬ್ರೂನಿಯ ರಾಜಕುಮಾರ ಜೆಫ್ರಿ ಬೊಲ್ಕಿಯಾ ಅವರ ಮಗ. ಬ್ರೂನಿಯ ಸುಲ್ತಾನ ಹಸನಲ್ ಬೊಲ್ಕಿಯಾ ಅವರ ಸೋದರಳಿಯ ಕೂಡ. ಫೈಕ್ ಬೊಲ್ಕಿಯಾ ಗ್ರೇಟ್ ಬ್ರಿಟನ್‌ನ ಬ್ರಾಡ್‌ಫೀಲ್ಡ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು.

ದಿ ಸನ್ ಪ್ರಕಾರ, ಫೈಕ್ ಬೊಲ್ಕಿಯಾ ಅವರ ತಂದೆ ರೋಲ್ಸ್ ರಾಯ್ಸ್, ಫೆರಾರಿ ಮತ್ತು ಬೆಂಟ್ಲೀಸ್ ಸೇರಿದಂತೆ 2,300ಕ್ಕೂ ಹೆಚ್ಚು ಕಾರುಗಳನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.

ಜೊತೆಗೆ 24-ಕ್ಯಾರೆಟ್ ಚಿನ್ನದ ಫಿಟ್ಟಿಂಗ್‌ಗಳು ಮತ್ತು ಇತರ ಐಷಾರಾಮಿಗಳೊಂದಿಗೆ ಕಸ್ಟಮ್-ನಿರ್ಮಿತ ವಿಹಾರ ನೌಕೆ ಮತ್ತು ಏರ್‌ಬಸ್ ಸೇರಿದಂತೆ ಒಂಬತ್ತಕ್ಕೂ ಹೆಚ್ಚು ವಿಮಾನಗಳನ್ನು ಹೊಂದಿದ್ದಾರೆ.

Story first published: Wednesday, February 7, 2024, 12:11 [IST]
Other articles published on Feb 7, 2024
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+