ಹೊಸ ವರ್ಷ, ಹೊಸ ಜೆರ್ಸಿ, ಹೊಸ ಹುರುಪಿನಲ್ಲಿ ಭಾರತದ ಫುಟ್ಬಾಲ್ ತಂಡ

ನವದೆಹಲಿ, ಡಿಸೆಂಬರ್ 19: ಇಂದಿಗೆ (ಡಿ.19) ಇನ್ನೆರಡು ವಾರಗಳಲ್ಲಿ ನಾವು ಹೊಸ ವರ್ಷದ ಹೊಸ ದಿನಗಳಲ್ಲಿ ಹೆಜ್ಜೆ ಹಾಕಲಿದ್ದೇವೆ. 2018ಕ್ಕೆ ವಿದಾಯ ಹೇಳಿ 2019ನ್ನು ಬರ ಮಾಡಿಕೊಳ್ಳಲಿದ್ದೇವೆ. ಭಾರತ ಫುಟ್ಬಾಲ್ ತಂಡವೂ ಹೊಸ ವರ್ಷದ ಹೊಸ ಹುಮ್ಮಸ್ಸಿನಲ್ಲಿದೆ. ತಂಡವೀಗ ಹೊಸ ಜೆರ್ಜಿಗೂ ಬದಲಾಗಿದೆ.
ಹೊಸ ವರ್ಷದತ್ತ ಮುಂದಡಿಯಿಡುತ್ತಿರುವ ಭಾರತ ಫುಟ್ಬಾಲ್ ತಂಡಕ್ಕೆ ಹೊಸ ಕ್ರೀಡಾ ದಿರಿಸನ್ನು ನೀಡಲಾಗಿದೆ. ಸಿಕ್ಸ್5ಸಿಕ್ಸ್ ಬ್ರ್ಯಾಂಡ್‌ನ ಹೊಸ ಜೆರ್ಸಿಯನ್ನು ತಂಡಕ್ಕೆ ನೀಡಲಾಗಿದೆ. 2019 ಜನವರಿಯಲ್ಲಿ 'ಎಎಫ್‌ಸಿ ಏಷ್ಯನ್ ಕಪ್ ಯುಎಇ 2019' ಫುಟ್ಬಾಲ್ ಟೂರ್ನಿ ಕೂಡ ನಡೆಯಲಿದ್ದು, ದೇಸಿ ತಂಡ ಗೆಲುವಿನ ಹುರುಪಿನಲ್ಲಿದೆ.
ಬುಧವಾರ (ಡಿಸೆಂಬರ್ 19) ನವದೆಹಲಿಯಲ್ಲಿ ತಂಡದ ಹೊಸ ಜೆರ್ಸಿಯ ಅನಾವರಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ದೇಸಿ 'ಸೆವೆನ್ ಸ್ಟಾರ್' ಆಟಗಾರರಾದ ಸುನಿಲ್ ಛೆಟ್ರಿ, ಗುರ್ ಪ್ರೀತ್ ಸಿಂಗ್ ಸಂದು, ಸಂದೇಶ್ ಝಿಂಗನ್, ಜೆಜೆ ಲಾಲ್ಪೆಕ್ಲುವಾ, ರೌಲಿನ್ ಬೋರ್ಜೆಸ್, ಸುಭಾಷಿಸ್ ಭೋಸ್ ಮತ್ತು ಪ್ರೀತಮ್ ಕೊಟಾಲ್ ಉಪಸ್ಥಿತರಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications