For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಅತ್ಯಾಚಾರ ಆರೋಪ ಮಾಡಿದ ಮಹಿಳೆ ಜೊತೆಗಿನ ಚಾಟ್‌ ವಿವರ ಬಹಿರಂಗ ಪಡಿಸಿದ ನೆಯ್ಮಾರ್‌

Neymar denies allegations of raping woman in Paris

ರಿಯೊ ಡಿ ಜನೈರೊ, ಜೂನ್‌ 2: ಬ್ರೆಜಿಲ್‌ ಫುಟ್ಬಾಲ್‌ ತಂಡದ ಮಾಜಿ ನಾಯಕ ಪ್ಯಾರಿಸ್‌ನಲ್ಲಿ ಮಹಿಳೆಯೊಬ್ಬರ ಅತ್ಯಾಚಾರ ಆರೋಪವನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಅಲ್ಲದೆ ಇದು ತಮ್ಮನ್ನು ಸುಲಿಗೆ ಮಾಡಲು ನಡೆಸಿರುವ ಪಿತೂರಿ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಮಹಿಳೆ ಜೊತೆಗೆ ನಾವು ನಡೆಸಿರುವ ವಾಟ್ಸ್‌ಆಪ್‌ ಸಂದೇಶಗಳು ಮತ್ತು ಮಹಿಳೆಯು ತಮಗೆ ವಾಟ್ಸ್‌ಆಪ್‌ ಮೂಲಕ ಕಳುಹಿಸಿರುವ ಅಶ್ಲೀಲ ಚಿತ್ರಗಳನ್ನು ನೆಯ್ಮಾರ್‌ ತಮ್ಮ ಅಧಿಕೃತ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ಶೇರ್‌ ಮಾಡಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು

ಪ್ಯಾರಿಸ್‌ನ ದೈತ್ಯ ಫುಟ್ಬಾಲ್‌ ಕ್ಲಬ್‌ ಆಗಿರುವ ಪ್ಯಾರಿಸ್‌ ಸೇಂಟ್‌ ಜರ್ಮನ್‌ ತಂಡದ ಪರ ಆಡುತ್ತಿರುವ ನೆಯ್ಮಾರ್‌ ವಿರುದ್ಧ ಇತ್ತೀಚೆಗೆ ಸಾವೋ ಪಾಲೋ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.

ಕಳೆದ ತಿಂಗಳಷ್ಟೇ ಅಶಿಸ್ತಿನ ಕಾರಣದಿಂದಾಗಿ ಬ್ರೆಜಿಲ್‌ ತಂಡದ ನಾಯಕತ್ವ ಕಳೆದುಕೊಂಡ 27 ವರ್ಷದ ಸ್ಟಾರ್‌ ಆಟಗಾರ ನೆಯ್ಮಾರ್‌ಗೆ ಇದೀಗ ಅತ್ಯಾಚಾರ ಆರೋಪದ ಹೊಡೆತ ಎದುರಿಸುವಂತಾಗಿದೆ. ಫ್ರಾನ್ಸ್‌ನ ರಾಜಧಾನಿಯಲ್ಲಿರುವ ಅಪ್‌ಮಾರ್ಕೆಟ್‌ ಹೋಟೆಲ್‌ ಒಂದರಲ್ಲಿ ಕುಡಿದ ಅಮಲಿನಲ್ಲಿ ತಮ್ಮ ಮೇಲೆ ನೆಯ್ಮಾರ್‌ ಅತ್ಯಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು.

ಈ ಸಂಭಂದ ಕೂಡಲೇ ಹೇಳಿಕೆ ಬಿಡುಗಡೆ ಮಾಡಿರುವ ನೆಯ್ಮಾರ್‌ ಅವರ ಮ್ಯಾನೇಜ್ಮೆಂಟ್‌ ತಂಡ "ಈ ಸುದ್ದಿ ನೆಯ್ಮಾರ್‌ ಅವರಿಗೆ ಆಘಾತ ತಂದಿದೆ. ಸತ್ಯಾಂಶ ಏನು ಎಂಬುದು ನೆಯ್ಮಾರ್‌ ಮತ್ತು ಸಿಬ್ಬಂದಿಗೆ ತಿಳಿದಿದೆ. ಇತ್ತೀಚೆಗಷ್ಟೇ ಅವರನ್ನು ಸುಲಿಗೆ ಮಾಡುವ ಪ್ರಯತ್ನ ನಡೆದಿತ್ತು,'' ಎಂದು ಹೇಳಿಕೆ ಬಿಡುಗಡೆ ಮಾಡಿದೆ.

"ಈಗಾಗಲೇ ವಕೀಲರೊಟ್ಟಿಗೆ ಮಾತನಾಡಲಾಗಿದ್ದು, ಅಗತ್ಯದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸುಲಿಗೆ ಮಾಡಲು ನಡೆಸಿರುವ ಪ್ರಯತ್ನದ ಎಲ್ಲಾ ದಾಖಲೆಗಳು ಮತ್ತು ನೆಯ್ಮಾರ್‌ ಅತ್ಯಾರ ಎಸಗಿಲ್ಲ ಎಂಬುದಕ್ಕೆ ಪುರಾವೆಗಳನ್ನು ಪೊಲೀಸರಿಗೆ ಸಲ್ಲಿಸಲಿದ್ದೇವೆ,'' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್‌ ಮೂಲಕ ನೆಯ್ಮಾರ್‌ ಅವರ ಸಂಪರ್ಕಕ್ಕೆ ಬಂದಿದ್ದು, ಬಳಿಕ ಪ್ಯಾರಿಸ್‌ನಲ್ಲಿ ಭೇಟಿಯಾಗಿದ್ದಾರೆ. ಅಲ್ಲಿನ ಹೋಟೆಲ್‌ ಒಂದಕ್ಕೆ ಕಂಠಪೂರ್ತಿ ಕುಡಿದು ಬಂದ ನೆಯ್ಮಾರ್‌ ಬಳಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಮ್ಮ ಪ್ರಕರಣದಲ್ಲಿ ವಿವರಿಸಿದ್ದಾರೆ.

Story first published: Sunday, June 2, 2019, 17:35 [IST]
Other articles published on Jun 2, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+