For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಚಿಕ್ಕ ಹುಡುಗನೊಂದಿಗೆ ತಾಯಿಯ ಸಖ್ಯಕ್ಕೆ ಒಪ್ಪಿಗೆ ಸೂಚಿಸಿದ ನೇಮರ್!

Neymar gives his approval to his 52-year-old mothers relationship with Tiago Ramos

ರಿಯೋ ಡಿ ಜನೈರೋ, ಏಪ್ರಿಲ್ 14: ಕಾಮಕ್ಕೆ ಕಣ್ಣಿಲ್ಲ ಅನ್ನೋ ಮಾತಿದೆ. ಈ ಮಾತು ವಿದೇಶದಲ್ಲಂತೂ ಹೆಚ್ಚು ಪ್ರಸ್ತುತ. ಯಾಕೆಂದರೆ ಅಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರಗಳಂತ ವಿಚಾರಗಳಿಗೆ ಅಂಥ ಆದ್ಯತೆಯೇನಿಲ್ಲ. ವಿದೇಶಿಗರ ಬಾಯಲ್ಲಿ ಆಗಾಗ 'ಫ..*' ಪದ ಬಂದು ಹೋಗೋದೂ ಇದೇ ಕಾರಣಕ್ಕೆ. ಅಲ್ಲಿ ಸಂಬಂಧಗಳಿಗೆ ಅಂಥ ಬೆಲೆಯಿಲ್ಲ, ನಿರ್ಬಂಧವೂ ಇಲ್ಲ. ಇದೀಗ ವಿಚಿತ್ರ ಕಾರಣಕ್ಕೆ ಖ್ಯಾತ ಫುಟ್ಬಾಲ್ ತಾರೆ, ಬ್ರೆಜಿಲ್‌ನ ನೇಮರ್ ಸುದ್ದಿಯಲ್ಲಿದ್ದಾರೆ.

'ಎಲಾ ಇವ್ನಾ..' ಅಂತ ನಾವೆಲ್ಲ ಮೂಗಿಗೆ ಬೆರಳೇರಿಸುವಂತ ಸನ್ನಿವೇಶ ಇಲ್ಲಿ ಸೃಷ್ಟಿಸಿದ್ದು ನೇಮರ್ ಅಲ್ಲ; ಅವರ ತಾಯಿ. ತನ್ನ ಮಗನಿಗಿಂತ ಚಿಕ್ಕ ವಯಸ್ಸಿನ ಹುಡುಗನೊಂದಿಗೆ ಪ್ರಣಯದಾಟ ಶುರು ಮಾಡಿರುವ ನೇಮರ್ ತಾಯಿ ಸದ್ದು ಮಾಡುತ್ತಿದ್ದಾರೆ.

52ರ ಹರೆಯದ ನೇಮರ್ ತಾಯಿ 22ರ ಹುಡುಗನೊಂದಿಗೆ ಡೇಟಿಂಗ್‌ನಲ್ಲಿದ್ದು, ತಾಯಿ ಮತ್ತು ಹುಡುಗನ ಸಂಬಂಧಕ್ಕೆ ನೇಮರ್ ಕೂಡ ಒಪ್ಪಿಗೆ ಸೂಚಿಸಿದ್ದಾರೆ.

ನೇಮರ್‌ಗಿಂತ 6 ವರ್ಷ ಚಿಕ್ಕವ

ನೇಮರ್‌ಗಿಂತ 6 ವರ್ಷ ಚಿಕ್ಕವ

ನೇಮರ್ ತಾಯಿ ನಾಡಿನ್ ಗೋಂಕಾವ್ಸ್ ಮತ್ತು ಅವಳ ಹೊಸ ಪ್ರಿಯಕರ ಹುಡುಗ ಟಿಯಾಗೋ ರ್ಯಾಮೋಸ್ ನಡುವಿನ ಸಂಬಂಧ ಹುಬ್ಬೇರಿಸಲು ಮುಖ್ಯ ಕಾರಣವೇನೆಂದರೆ ಟಿಯಾಗೋ, ನೇಮರ್‌ಗಿಂತ 6 ವರ್ಷ ಸಣ್ಣವನು. ಗೋಂಕಾವ್ಸ್‌ಗೆ 52 ವರ್ಷ ವಯಸ್ಸಾದರೆ ಟಿಯಾಗೋಗೆ 22, ನೇಮರ್‌ಗೆ 28 ವರ್ಷ ವಯಸ್ಸು. ತನ್ನ ಮಗನಿಗಿಂತ ಸಣ್ಣ ವಯಸ್ಸಿನ ಹುಡುಗನೊಂದಿಗೆ ಗೋಂಕಾವ್ಸ್ ಬೆಸುಗೆ ಬಿದ್ದಿದ್ದಾರೆ.

ಗೋಂಕಾವ್ಸ್-ಟಿಯಾಗೋ

ಗೋಂಕಾವ್ಸ್-ಟಿಯಾಗೋ

ನಾಡಿನ್ ಗೋಂಕಾವ್ಸ್, ವ್ಯಾಗ್ನರ್ ರಿಬೈರೊ ಅವರನ್ನು ವರಿಸಿ 25 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ಅದಾಗಿ 2016ರಲ್ಲಿ ಗೋಂಕಾವ್ಸ್ ವಿಚ್ಛೇದನ ನೀಡಿದ್ದರು. ಇತ್ತ ಟಿಯಾಗೋ ಒಬ್ಬ ಫುಟ್ಬಾಲ್ ಆಟಗಾರ. ರೂಪದರ್ಶಿ ಕೂಡ. ಟಿಯಾಗೋ ಅವರು 4ಕೆ ಈಸಿ ತಂಡದ ಪರ ಆಡುತ್ತಾರೆ. ನಾರ್ತರ್ನ್ ಫುಟ್ಬಾಲ್ ಅಲಾಯನ್ಸ್ (ಎನ್‌ಎಫ್‌ಎ) ಲೀಗ್‌ನಲ್ಲಿ ಈ ತಂಡ ಪಾಲ್ಗೊಳ್ಳುತ್ತದೆ.

ನೇಮರ್ ಅಭಿಮಾನಿ ಟಿಯಾಗೋ

ನೇಮರ್ ಅಭಿಮಾನಿ ಟಿಯಾಗೋ

ನೇಮರ್ ತಾಯಿಯೊಂದಿಗೆ ಡೇಟಿಂಗ್ ನಡೆಸುತ್ತಿರುವ ಟಿಯಾಗೋ ನೇಮರ್ ಅಭಿಮಾನಿ. 2017ರಲ್ಲೇ ಟಿಯಾಗೋ ಇದನ್ನು ನೇಮರ್ ಅವರಲ್ಲಿ ಹೇಳಿಕೊಂಡಿದ್ದರಂತೆ. 'ನಾನು ನಿಮ್ಮ ಅಭಿಮಾನಿ. ಒಂದು ದಿನ ನಿಮ್ಮ ಪಕ್ಕದಲ್ಲಿ ನಿಂತೇ ನಿಲ್ಲುತ್ತೇನೆ. ಆ ನಂಬಿಕೆಯಿದೆ,' ಎಂದು ಟಿಯಾಗೋ ನೇಮರ್ ಅವರಲ್ಲಿ ಹೇಳಿದ್ದರಂತೆ. ಆವತ್ತು ಟಿಯಾಗೋ ಹೇಳಿದ ಮಾತು ಈ ರೀತಿ ನೆರವೇರಬಹುದು ಅಂತ ಬಹುಶಃ ನೇಮರ್ ಕೂಡ ಅಂದುಕೊಂಡಿರಲಿಕ್ಕಿಲ್ಲ ಬಿಡಿ.

ಹುಚ್ಚು ಪ್ರೀತಿಗೆ ನೇಮರ್ ಒಪ್ಪಿಗೆ

ಹುಚ್ಚು ಪ್ರೀತಿಗೆ ನೇಮರ್ ಒಪ್ಪಿಗೆ

ಗೋಂಕಾವ್ಸ್ ಮತ್ತು ಟಿಯಾಗೋ ನಡುವಿನ ವಯಸ್ಸಿನ ಅಂತರ, ಹುಚ್ಚು ಪ್ರೀತಿಯ ಬಗ್ಗೆ ಇಡೀ ಜಗತ್ತೆ ಗುಸು ಗುಸು ಮಾತಾಡಿ, ಮುಸಿಮುಸಿ ನಗುತ್ತಿದೆ. ಆದರೆ ನೇಮರ್ ಮಾತ್ರ ಇದಕ್ಕೆಲ್ಲ ತಲೆ ಕೆಡಿಸಿಕೊಂಡಿಲ್ಲ. ಬದಲಿಗೆ ನೇಮರ್ ತನ್ನ ತಾಯಿ ಮತ್ತು ಹುಡುಗನ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಗೋಂಕಾವ್ಸ್-ಟಿಯಾಗೋ ರೊಮ್ಯಾನ್ಸ್ ಮೂಡ್‌ನಲ್ಲಿರುವ ಫೋಟೋವಿನ ಕೆಳಗೆ ನೇಮರ್, 'ಖುಷ್ಯಾಗಿರು ಅಮ್ಮ, ಲವ್ ಯೂ' ಅಂತ ಕಾಮೆಂಟ್ ಮಾಡಿದ್ದಾರೆ.

Story first published: Saturday, May 2, 2020, 22:04 [IST]
Other articles published on May 2, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+