ನಾರ್ವೆ ವಿರುದ್ಧ ಬ್ರೆಜಿಲ್‌ಗೆ ಆಘಾತ; Neymar ಕಣ್ಣೀರ ವಿದಾಯ
ವಿಶ್ವ ಫುಟ್‌ಬಾಲ್ ಇತಿಹಾಸದ ಅತ್ಯಂತ ಖ್ಯಾತನಾಮ ಆಟಗಾರರಲ್ಲಿ ಒಬ್ಬರಾದ ಬ್ರೆಜಿಲ್ ತಂಡದ ಸ್ಟಾರ್ ಸ್ಟ್ರೈಕರ್ ನೇಮಾರ್ ಜೂನಿಯರ್ ಅವರು ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಹಠಾತ್ ವಿದಾಯ ಘೋಷಿಸಿದ್ದಾರೆ. ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದ ಫಿಫಾ ವಿಶ್ವಕಪ್ನ ರೋಚಕ ರೌಂಡ್ ಆಫ್ 16 ಪಂದ್ಯದಲ್ಲಿ ಬ್ರೆಜಿಲ್ 1-2 ಗೋಲುಗಳಿಂದ ನಾರ್ವೆ ತಂಡದ ವಿರುದ್ಧ ಸೋತು ಟೂರ್ನಿಗೆ ಗುಡ್ ಬೈ ಹೇಳಿದೆ. ಈ ಹೀನಾಯ ಸೋಲಿನ ಬೆನ್ನಲ್ಲೆ ದಾಖಲೆಯ ವಿಶ್ವಕಪ್ ವಿಜೇತ ಬ್ರೆಜಿಲ್ ತಂಡದ ಸ್ಟಾರ್ ಆಟಗಾರ ನೇಮರ್ ಫುಟ್ಬಾಲ್‌ಗೆ ವಿದಾಯ ಘೋಷಿಸಿದ್ದಾರೆ. ಈ ಮೂಲಕ ನೇಮರ್ ಅವರ ವಿಶ್ವಕಪ್ ಗೆಲ್ಲುವ ಕನಸು ಕಮರಿದೆ.
ಮೊದಲ ಅವಧಿಯ ಆಟದಲ್ಲಿ ಗೋಲು ಬಾರಿಸಿ ಎದುರಾಳಿ ತಂಡದ ಮೇಲೆ ಒತ್ತಡವನ್ನು ಹೇರುವ ಬ್ರೆಜಿಲ್ ತಂತ್ರ ಫಲಿಸಲಿಲ್ಲ. ನಾರ್ವೆ ಗೋಲು ಕೀಪರ್ ಈ ಹಂತದಲ್ಲಿ ಉತ್ತಮ ಆಟವನ್ನು ಆಡಿದರು. ಅಲ್ಲದೆ ನಾರ್ವೆ ಉತ್ತಮವಾಗಿ ರಕ್ಷಣಾ ವಿಭಾಗದ ಆಟದ ಪ್ರದರ್ಶಿಸಿತು. ಈ ವೇಳೆ ಬ್ರೆಜಿಲ್ ಸಹ ನಾರ್ವೆಗೆ ಯಾವುದೇ ಗೋಲುಗಳನ್ನು ನೀಡಲಿಲ್ಲ.

ಎರಡನೇ ಅರ್ಧದ ಆಟದಲ್ಲಿ ನಾರ್ವೆಯ ಸ್ಟಾರ್ ಆಟಗಾರ ಎರ್ಲಿಂಗ್ ಹಾಲೆಂಡ್ ಅಮೋಘ ಕಾಲ್ಚಳಕದ ಪ್ರದರ್ಶನ ನೀಡಿ 79ನೇ ಹಾಗೂ 90ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಪರಿಣಾಮ ಬ್ರೆಜಿಲ್ ಮೇಲೆ ಒತ್ತಡ ಹೇರಲಾಯಿತು. ಬ್ರೆಜಿಲ್ ಹೆಚ್ಚುವರಿ ಸಮಯದಲ್ಲಿ ಒಂದು ಗೋಲು ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿತು. ಮಾಜಿ ವಿಶ್ವ ಚಾಂಪಿಯನ್ ಬ್ರೆಜಿಲ್ ರೌಂಡ್ ಆಫ್ 16ನಲ್ಲೇ ಟೂರ್ನಿಯಿಂದ ಹೊರ ನಡೆಯಿತು.
ಪಂದ್ಯ ಮುಕ್ತಾಯದ ಸಿಟಿ ಊದುತ್ತಿದ್ದಂತೆ ಬ್ರೆಜಿಲ್ ಸ್ಟಾರ್ ಆಟಗಾರ ನೇಮರ್ ಕಣ್ಣುಗಳಲ್ಲಿ ನೀರು ತುಂಬಿದ್ದವು. ಸಹ ಆಟಗಾರರು ಹಾಗೂ ಸಿಬ್ಬಂದಿಗಳು ಅವರಿಗೆ ಸಾಂತ್ವನ ತಿಳಿಸಿದರು. ಈ ಸೋಲಿನ ನೋವಿನ ಮಧ್ಯೆ ನೇಮರ್ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಆಘಾತಕಾರಿ ಸುದ್ದಿಯನ್ನು ಸಹ ನೀಡಿದರು. 34 ವರ್ಷದ ಸೂಪರ್ ಸ್ಟಾರ್ ನೇಮಾರ್ ತಂಡಕ್ಕಾಗಿ ಹಾಗೂ ಕನಸಿನ ಕಪ್ ಗೆಲ್ಲಲು ಕ್ರೀಡಾಂಗಣದಲ್ಲಿ ನನ್ನ ಜೀವವನ್ನೇ ಪಣಕ್ಕಿಟ್ಟು, ಪ್ರಾಮಾಣಿಕತೆಯಿಂದ ಆಡಿದ್ದೇನೆ. ಆದರೆ ಇಂದು ಎಲ್ಲವೂ ಕೊನೆಗೊಂಡಿದೆ. ಬ್ರೆಜಿಲ್ ರಾಷ್ಟ್ರೀಯ ತಂಡದೊಂದಿಗಿನ ನನ್ನ ಪ್ರಯಾಣ ಇಲ್ಲಿಗೇ ಮುಕ್ತಾಯವಾಗಿದೆ" ಎಂದು ಕಣ್ಣೀರು ಹಾಕುತ್ತಲೇ ನೇಮರ್ ತಮ್ಮ ವಿದಾಯ ಘೋಷಿಸಿದರು.
ನೇಮರ್ ಸಾಧನೆ
ಬ್ರೆಜಿಲ್ ತಂಡದ ಸೂಪರ್ ಸ್ಟಾರ್ ಆಟಗಾರ ನೇಮರ್ 2010ರಿಂದ ಈ ವರೆಗೆ 16 ವರ್ಷಗಳ ಕಾಲ ರಾಷ್ಟ್ರೀಯ ತಂಡದ ಅವಿಭಾಜ್ಯ ಅಂಗವಾಗಿದ್ದರು. ತಮ್ಮ 18ನೇ ವಯಸ್ಸಿನಲ್ಲಿ ನೇಮರ್ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಸಂಚಲನ ಸೃಷ್ಟಿಸಿದ್ದ ಆಟಗಾರ. ಇವರು ವೃತ್ತಿಜೀವನದಲ್ಲಿ 129 ಪಂದ್ಯಗಳನ್ನು ಆಡಿದ್ದು ಬ್ರೆಜಿಲ್ ಪರ ಒಟ್ಟು 80 ಗೋಲುಗಳನ್ನು ದಾಖಲಿಸಿದ್ದಾರೆ. ಈ ಮೂಲಕ ಬ್ರೆಜಿಲ್ ದೇಶದ ಪರ ಇತಿಹಾಸದಲ್ಲೇ ಅತಿ ಹೆಚ್ಚು ವೈಯಕ್ತಿಕ ಗೋಲು ಗಳಿಸಿದ ಹೆಮ್ಮೆಯ ಸಾರ್ವಕಾಲಿಕ ದಾಖಲೆ ಇವರ ಹೆಸರಿನಲ್ಲಿದೆ. ನೇಮಾರ್ ಉತ್ತಮ ಆಟದ ನೆರವಿನಿಂದ ಬ್ರೆಜಿಲ್ 2013ರ ಕಾನ್ಫೆಡರೇಷನ್ ಕಪ್ ಹಾಗೂ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಂಡಿತ್ತು.
ನೇಮರ್‌ಗೆ ಕಾಡಿದ ಗಾಯ
ಈ ವರ್ಷ ಮೇ ತಿಂಗಳಲ್ಲಿ ನೇಮರ್ ಸ್ನಾಯುರಜ್ಜು ಗಾಯ (ಲಿಗಮೆಂಟ್ ಇಂಜುರಿ) ಸಮಸ್ಯೆ ಅನುಭವಿಸಿದರು. ಇದರಿಂದಾಗಿ ಇವರು ಬಹುವಾಗಿ ಕಷ್ಟ ಪಟ್ಟರು. ಅಲ್ಲದೆ ವಿಶ್ವಕಪ್‌ನ ಆರಂಭಿಕ ಪಂದ್ಯಗಳಿಂದ ದೂರ ಉಳಿದಿದ್ದರು. ಆದರೆ ತಂಡಕ್ಕೆ ಮತ್ತೊಮ್ಮೆ ವಿಶ್ವಕಪ್ ಮುಕುಟ ತೊಡಿಸದ ನೋವು ನೇಮರ್‌ಗೆ ಸದಾ ಕಾಡುತ್ತಲೇ ಇರುತ್ತದೆ.
ನಾರ್ವೆ ವಿರುದ್ಧದ ಕೊನೆಯ ಮಹತ್ವದ ಪಂದ್ಯದಲ್ಲಿ ಹೆಚ್ಚುವರಿ ಅವಧಿಯ ಆಟದಲ್ಲಿ ಕಷ್ಟಕರವಾದ ಪೆನಾಲ್ಟಿ ಅವಕಾಶದ ಮೂಲಕ ನೇಮಾರ್ ಗಳಿಸಿದ ಏಕೈಕ ಗೋಲು, ಅವರ ಅಂತಾರಾಷ್ಟ್ರೀಯ ಇತಿಹಾಸದ ಕಕಡೆಯ ಗೋಲಾಗಿ ದಾಖಲಾಯಿತು.
ನಾಲ್ಕು ವಿಶ್ವಕಪ್‌ಗಳ ನೇಮರ್ ಪಯಣ ಅಂತ್ಯವಾಯಿತು. ಈ ಮೂಲಕ ಕೌಶಲ್ಯಗಳು ಹಾಗೂ ವಿಶಿಷ್ಟ ಶೈಲಿಯ ಮೂಲಕ ಕೋಟ್ಯಂತರ ಯುವ ಆಟಗಾರರ ಮನಗೆದಿದ್ದ ಸಾಧಕನ ಯುಗ ಅಂತ್ಯ ಕಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications