For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಒಡಿಶಾ ವಿರುದ್ಧ ಜಯದ ಗುರಿಯಲ್ಲಿ ಗೋವಾ ಪಡೆ

By Isl Media
odisha fc vs fc goa, isl 2020 21 match 97 preview

ಗೋವಾ, ಫೆಬ್ರವರಿ 17 ಹೀರೋ ಇಂಡಿಯನ್ ಸೂಪರ್ ಲೀಗ್ ನ ಪ್ಲೇ ಆಫ್ ಹಂತ ಸಮೀಪಿಸುತ್ತಿದ್ದಂತೆ ಎಫ್ ಸಿ ಗೋವಾ ಸೆಮಿಫೈನಲ್ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಕಾಯ್ದಿರಿಸುವ ತವಕದಲ್ಲಿದೆ. ಕಳೆದ ಆರು ಪಂದ್ಯಗಳಲ್ಲಿ ಕೇವಲ ಡ್ರಾಗೆ ತೃಪ್ತಿಪಟ್ಟಿರುವ ಗೋವಾ ಈಗ ಅತ್ಯಂತ ಸಂಕಷ್ಟದ ಸ್ಥಿತಿ ಎದುರಿಸುತ್ತದೆ. ಬುಧವಾರ ಇಲ್ಲಿನ ಫಟೋರ್ಡಾ ಅಂಗಣದಲ್ಲಿ ಒಡಿಶಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಜುವಾನ್ ಫೆರಾಂಡೊ ಪಡೆ ಡ್ರಾಗಳಿಗೆ ಬ್ರೇಕ್ ಹಾಕಿ ಜಯದ ಹಾದಿ ಕಂಡುಕೊಳ್ಳುವ ಗುರಿಹೊಂದಿದೆ.

ಸಮಾನ ಅಂಕ ಗಳಿಸಿರುವ ಗೋವಾ ಈಗ ನಾಲ್ಕನೇ ಸ್ಥಾನವನ್ನು ಹಂಚಿಕೊಂಡಿದೆ. ನಾಲ್ಕನೇ ಸ್ಥಾನದಲ್ಲಿರುವ ಗೋವಾ ಮತ್ತು ಆರನೇ ಸ್ಥಾನದಲ್ಲಿರುವ ಬೆಂಗಳೂರು ಪ್ಲೇ ಆಫ್ ಸ್ಪರ್ಧೆಯಲ್ಲಿರುವ ಇತರ ತಂಡಗಳು. ಕೊನೆಯ ಸ್ಥಾನದಲ್ಲಿರುವ ಒಡಿಶಾ ವಿರುದ್ಧ ಮೂರು ಅಂಕಗಳನ್ನು ಗಳಿಸಿ, ಉಳಿದಿರುವ ಮೂರು ಪಂದ್ಯಗಳಲ್ಲೂ ಅದೇ ಯಶಸ್ಸನ್ನು ಕಂಡುಕೊಳ್ಳುವ ಯತ್ನದಲ್ಲಿದೆ. ಆದರೆ ಈ ಹಾದಿ ಅಷ್ಟು ಸುಲಭವಾದುದಲ್ಲ, ಹಲವಾರು ಅಡೆತಡೆಗಳನ್ನು ಎದುರಿಸಬೇಕಾಗಿದೆ.

"ನಮ್ಮಲ್ಲಿ ಕೆಲವು ಗಾಯದ ಸಮಸ್ಯೆ ಇದೆ. ಆದರೆ ಆ ಬಗ್ಗೆ ನಾನು ವಿಚಲಿತನಾಗಿಲ್ಲ, ಏಕೆಂದರೆ ನಮ್ಮದು ಉತ್ತಮ ತಂಡ.ಸಮಸ್ಯೆಯೆಂದರೆ ನಮಗೆ ತರಬೇತಿಗೆ ಸಿಕ್ಕಿದ್ದು ಕೇವಲ ಎರಡೇ ದಿನ. ನಮ್ಮ ಆಟಗಾರರ ಬಗ್ಗೆ ಯಾವುದೇ ರೀತಿಯ ನಿರಾಸೆ ಇಲ್ಲ. ನಮ್ಮದು ಉತ್ತಮ ತಂಡ. ಪ್ರತಿಯೊಬ್ಬರೂ ತಂಡಕ್ಕೆ ನೆರವಾಗಬಲ್ಲರು." ಎಂದರು.

ಬಹಳಷ್ಟು ಹಿನ್ನಡೆ ಕೊಂಡು ಕೊನೆಯ ಗಳಿಗೆಯಲ್ಲಿ ಗೋಲು ಗಳಿಸುವ ಹವ್ಯಾಸವನ್ನು ಗೋವಾ ಹೊಂದಿದೆ. ಚೆನ್ನೈಯಿನ್ ವಿರುದ್ಧ ಸೋಲುವ ಹಂತದಲ್ಲಿದ್ದ ಗೋವಾ ಕೊನೆಯ ಕ್ಷಣದಲ್ಲಿ ಗೋಲು ಗಳಿಸಿ ಪಂದ್ಯವನ್ನು ಡ್ರಾಗೊಳಿಸಿತ್ತು. ಮೊದಲಿಗೆ ಎದುರಾಳಿ ಗೋಲು ಗಳಿಸಿ ನಂತರ ಪಂದ್ಯದಲ್ಲಿ ಪ್ರಭುತ್ವ ಸಾಧಿಸಿದ್ದು ಅತಿ ವಿರಳ. ಈ ತಂಡ ಆರಂಭದಲ್ಲಿ ಗೋಲು ನೀಡಿ ನಂತರ ಕೊನೆಯ ಕ್ಷಣದಲ್ಲಿ ಯಾಕೆ ಎಚ್ಚರಿಸಿಕೊಳ್ಳುತ್ತದೆ ಎಂದು ಫೆರಾಂಡೋಗೇ ಅಚ್ಚರಿಯಾಗಿದೆ. "ಈ ಸಂದರ್ಭದಲ್ಲಿ ನಮ್ಮ ಮನಸ್ಸು ನಿರಂತರವಾಗಿ ಕೆಲಸ ಮಾಡುತ್ತದೆ. ಹೆಚ್ಚಿನ ವಿವರಗಳಿಗಾಗಿ ಮನಸ್ಸನ್ನು ಆಗಾಗ ಬದಲಾಯಿಸುವುದು ಅಷ್ಟು ಸುಲಭವಲ್ಲ., ಮುಂದಿನ ಪಂದ್ಯಗಳಲ್ಲಿ ಈ ಡ್ರಾ ಎಂಬುದು ಗೋಲಾಗಿ ಪರಿವರ್ತನೆಯಾಗಲಿದೆ," ಎಂದರು.

ಇದೇ ವೇಳೆ ಒಡಿಶಾ ತಂಡ ಸೋಲ ಮೇಲೆ ಸೋಲನುಭವಿಸಿ ಆತಂಕಕ್ಕೆ ಸಿಲುಕಿದೆ. ಈ ಋತು ಒಡಿಶಾದ ಪಾಲಿಗೆ ಮರೆಯಬೇಕಾದ ಋತುವಾಗಿದೆ. ಹತ್ತು ಪಂದ್ಯಗಳಲ್ಲಿ ಸೋಲು ಅನುಭವಿಸಿರು ಒಡಿಶಾ ರೀತಿ ಯಾವುದೇ ತಂಡ ಪ್ರದರ್ಶನ ತೋರಿಲ್ಲ. ಆದರೆ ಮಧ್ಯಂತರ ಕೋಚ್ ಗೆರಾರ್ಡ್ ಪೇಟನ್, ತಮ್ಮ ತಂಡ ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸದ ಮಾತನಾಡಿದ್ದಾರೆ. "ನಾನು ಯಾವತ್ತೂ ನೈಜತೆಯೊಂದಿಗೆ ಇರುತ್ತೇನೆ. ಗೋವಾ ಉತ್ತಮ ರೀತಿಯಲ್ಲಿ ಪಾಸ್ ನೀಡುವ ತಂಡ. ಅವರು ನಮ್ಮೊಂದಿಗೆ ಹೇಗೆ ಆಡುತ್ತಾರೆ ಎಂಬುದು ಗೊತ್ತಿದೆ. ನಾವು ಒಂದು ನಿರ್ದಿಷ್ಟ ಮಾದರಿಯಲ್ಲಿ ಆಡುತ್ತೇವೆ," ಎಂದರು.

Story first published: Wednesday, February 17, 2021, 15:11 [IST]
Other articles published on Feb 17, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+