
ಗೋವಾ, ಡಿಸೆಂಬರ್ 16: ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯಲ್ಲಿ ಇನ್ನೂ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲವಾಗಿರುವ ಒಡಿಶಾ ಎಫ್ ಸಿ ಗುರುವಾರ ಬಲಿಷ್ಠ ಬೆಂಗಳೂರು ಎಫ್ ಸಿ ವಿರುದ್ಧ ಮತ್ತೊಂದು ಕಠಿಣ ಹೋರಾಟ ಎದುರಿಸಲು ಸಜ್ಜಾಗಿದೆ.
ಒಡಿಶಾ ತಂಡದ ಸಾಧನೆಯಲ್ಲಿ ಹೇಳಿಕೊಳ್ಳುವಂಥ ವಿಶೇಷ ಕಾಣುತ್ತಿಲ್ಲ. ಆಡಿರುವ ಐದು ಪಂದ್ಯಗಳಲ್ಲಿ ತಂಡ ಗಳಿಸಿದ್ದು ಕೇವಲ ಒಂದು ಅಂಕ. ಇದುವರೆಗೂ ಲೀಗ್ ನಲ್ಲಿ ಗಳಿಸಿದ್ದು ಅತಿ ಕಡಿಮೆ ಗೋಲುಗಳು. ಎರಡೂ ಗೋಲುಗಳು ದಾಖಲಾದದ್ದು ತಂಡದಲ್ಲಿ ಕೇವಲ ಹತ್ತು ಮಂದಿ ಆಟಗಾರರಿದ್ದಾಗ. ಅದು ಕೂಡ ಜೆಮ್ಷೆಡ್ಪುರ ಎಫ್ ಸಿ ವಿರುದ್ಧ ಗುರುವಾರ ಒಡಿಶಾ ತಂಡ ಮಾಜಿ ಚಾಂಪಿಯನ್ ಹಾಗೂ ಈ ಬಾರಿ ಇದುವರೆಗೂ ಸೋಲರಿಯದ ಬೆಂಗಳೂರು ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.
ಪ್ರತಿ ಪಂದ್ಯದಲ್ಲಿ ಬಾಕ್ಸ್ಟರ್ ಪಡೆ ಟಾರ್ಗೆಟ್ ಮಾಡಿದ್ದು 2.4 ಸರಾಸರಿ. ಇಂಗ್ಲೆಂಡ್ ಮೂಲದ ಕೋಚ್ ತಂಡದ ಆಟಗಾರರಲ್ಲಿ ಆಕ್ರಮಣಕಾರಿ ಆಟದ ಅಗತ್ಯ ಇದೆ ಎಂದು ಹೇಳಿದ್ದಾರೆ. "ಚೆಂಡನ್ನು ನಾವು ಉತ್ತಮ ರೀತಿಯಲ್ಲಿ ನಿಯಂತ್ರಣದಲ್ಲಿರಿಸಿಕೊಳ್ಳುತ್ತೇವೆ, ಆದರೆ ನಮ್ಮ ಆಟದಲ್ಲಿ ಆಕ್ರಮಣದ ಅಗತ್ಯ ಇದೆ. ನಾವು ಆ ರೀತಿಯ ಆವೇಗದ ಆರಂಭ ಕಂಡಲ್ಲಿ ಎದುರಾಳಿ ತಂಡದ ವಿರುದ್ಧ ಮೇಲುಗೈ ಸಾಧಿಸಬಹುದು. ಇದು ನಮಗೆ ನೆರವಾಗುತ್ತದೆ,' ಎಂದು ಬಾಕ್ಸ್ಟರ್ ಹೇಳಿದ್ದಾರೆ.
ಒಡಿಶಾದ ಡಿಫೆನ್ಸ್ ವಿಭಾಗ ಈಗಾಗಲೇ ಏಳು ಗೋಲುಗಳನ್ನು ನೀಡಿದೆ. ಅದರಲ್ಲಿ ನಾಲ್ಕು ಗೋಲುಗಳು ಸೆಟ್-ಪೀಸ್ ಮೂಲಕ ದಾಖಲಾಗಿದೆ (3 ಪೆನಾಲ್ಟಿ ಹಾಗೂ 1 ಫ್ರೀ ಕಿಕ್). ಪ್ರತಿಯೊಂದು ಪಂದ್ಯದಲ್ಲಿ ಎದುರಾಳಿಗಳಿಗೆ ಗೋಲು ಗಳಿಸುವ ಅವಕಾಶವನ್ನು ಒಡಿಶಾ ಮಾಡಿಕೊಟ್ಟಿದೆ. ಆದರೆ ಬಾಕ್ಸ್ಟರ್ ತಂಡದ ಬ್ಯಾಕ್ ಲೈನ್ ವಿಭಾಗವನ್ನು ಸಮರ್ಥಿಸಿಕೊಂಡಿದ್ದಾರೆ. "ಎದುರಾಳಿ ತಂಡಕ್ಕೆ ಗೋಲು ಗಳಿಸಲು ಅವಕಾಶವಾಗುವುದರಲ್ಲಿ ಸೆಂಟರ್ ಬ್ಯಾಕ್ ಆಟಗಾರರ ನೇರವಾದ ಜವಾಬ್ದಾರಿ ಇರುವುದಿಲ್ಲ. ಸೆಂಟರ್ ಬ್ಯಾಕ್ ವಿಭಾಗದ ಪ್ರದರ್ಶನ ಉತ್ತಮವಾಗಿಲ್ಲ ಎಂದು ನಾನು ಹೇಳಲಾರೆ. ಕೆಲವೊಂದು ಪಂದ್ಯಗಳಲ್ಲಿ ನಾವು ಉತ್ತಮ ಪ್ರದರ್ಶನ ತೋರಿದ್ದೇವೆ," ಎಂದರು.
ಸೆಟ್-ಪೀಸ್ ಮೂಲಕ ಬೆಂಗಳೂರು ಇದುವರೆಗೂ ಉತ್ತಮ ರೀತಿಯಲ್ಲಿ ಗೋಲುಗಳನ್ನು ಗಳಿಸಿದೆ. ಇದರಲ್ಲಿ ಎಸೆತದಲ್ಲೇ ಮೂರು ಗೋಲು ದಾಖಲಾಗಿದೆ. ಇನ್ನೂ ಉತ್ತಮ ರೀತಿಯಲ್ಲಿ ಹೊಂದಿಕೊಳ್ಳದ ಒಡಿಶಾ ವಿರುದ್ಧ ಈ ರೀತಿಯಲ್ಲಿ ಮೇಲುಗೈ ಸಾಧಿಸಲು ತಂಡ ಸಜ್ಜಾಗಿದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧ ಬೃಹತ್ ಅಂತರದಲ್ಲಿ ಜಯ ಗಳಿಸಿದ ಆತ್ಮವಿಶ್ವಾಸಲ್ಲಿದೆ. ಆ ಪಂದ್ಯದಲ್ಲಿ ಕ್ಲಿಟನ್ ಸಿಲ್ವಾ ಹಾಗೂ ಸುನಿಲ್ ಛೆಟ್ರಿ ಗೋಲು ಗಳಿಸುವಲ್ಲಿ ಸಫಲರಾದರು. ಬೆಂಗಳೂರು ತಂಡದ ಕೋಚ್ ಕಾರ್ಲಸ್ ಕ್ವಡಾರ್ಟ್ ಕೇರಳ ವಿರುದ್ಧದ ಪಂದ್ಯದಲ್ಲಿ ತೋರಿದ ಪ್ರದರ್ಶನವನ್ನೇ ಮುಂದುವರಿಸಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ.
"ನನ್ನ ಆಟಗಾರರ ಬಗ್ಗೆ ಚೆನ್ನಾಗಿ ಗೊತ್ತಿದೆ. ಅವರ ಬಗ್ಗೆ ತೃಪ್ತಿ ಇದೆ. ಅವರು ಉತ್ತಮ ಸ್ಪರ್ಧೆ ನೀಡುವ ಆಟಟಗಾರರು, ಅವರು ಮೂರು ಅಂಕಗಳನ್ನು ಗಳಿಸಲು ಯತ್ನಿಸುತ್ತಾರೆ. ಐಎಸ್ ಎಲ್ ನಲ್ಲಿ ನಮಗೆ ಯಾವುದೇ ತಂಡದ ಬಗ್ಗೆ ಸಮಾಧಾನ ಎಂಬುದಿಲ್ಲ, ಏಕೆಂದರೆ ಅವರು ಲೀಗ್ ನಲ್ಲಿ ಯಾವುದೇ ಹಂತದಲ್ಲೂ ನಮ್ಮನ್ನು ಸೋಲಿಸಮಬಹುದು. ಲೀಗ್ ನಲ್ಲಿ ಯಾವುದೇ ತಂಡವು ಇನ್ನಾವುದೇ ತಂಡವನ್ನು ಸೋಲಿಸಬಹುದು," ಎಂದಿದ್ದಾರೆ.
"ಒಡಿಶಾದಂಥ ತಂಡ ನಿಜವಾಗಿಯೂ ಅಪಾಯಕಾರಿ. ಅದರ ಬಗ್ಗೆ ನಾವೆಲ್ಲರೂ ಎಚ್ಚರಿಕೆಯಲ್ಲಿ ಇದ್ದೇವೆ. ಅವರು ಅಂಕ ಗಳಿಸಲು ಹೂರಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ. ಅದರೆ ಅದಯ ಇದುವರೆಗೂ ಸಾಧ್ಯವಾಗಲಿಲ್ಲ," ಎಂದರು.