ಫುಟ್ಬಾಲ್ ಐಕಾನ್ ಹುಸೇನ್ ಕೊರೊನಾಗೆ ಬಲಿ

ಫುಟ್ಬಾಲ್ ಒಲಿಂಪಿಯನ್ ಅಹ್ಮದ್ ಹುಸೇನ್ ಲಾಲಾ ಅವರು ಶುಕ್ರವಾರ ( ಏಪ್ರಿಲ್ 16 ) ಕೊರೊನಾ ವೈರಸ್‌ನಿಂದ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಅಹ್ಮದ್ ಹುಸೇನ್ ಅವರಿಗೆ 85 ವರ್ಷ ವಯಸ್ಸಾಗಿತ್ತು.
1956ರ ಮೆಲ್ಬೋರ್ನ್ ಒಲಿಂಪಿಕ್ಸ್ ನಲ್ಲಿ ಅಹ್ಮದ್ ಹುಸೇನ್ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಹೈದರಾಬಾದ್‌ನಲ್ಲಿ ಜನಿಸಿದ್ದ ಅಹ್ಮದ್ ಹುಸೇನ್ ನಂತರದ ದಿನಗಳಲ್ಲಿ ಬೆಂಗಳೂರಿಗೆ ಬಂದು ನೆಲೆಸಿದರು.
ಅಹ್ಮದ್ ಹುಸೇನ್ 1950ರ ದಶಕದಲ್ಲಿ ಭಾರತದ ಶ್ರೇಷ್ಠ ತರಬೇತುದಾರರುಗಳಲ್ಲೊಬ್ಬರಾದ ದಿವಂಗತ ಎಸ್ ಎ ರಹೀಂ ಅವರ ನೇತೃತ್ವದ ಪ್ರಸಿದ್ಧ ಹೈದರಾಬಾದ್ ಸಿಟಿ ಪೊಲೀಸ್ ತಂಡದ ಪ್ರಮುಖ ರಕ್ಷಕರಾಗಿದ್ದರು. ಅಹ್ಮದ್ ಹುಸೇನ್ ಅವರು ಕೊಲ್ಕತ್ತಾ ಲೀಗ್‌ನ ಮೊಹಮ್ಮದನ್ ಸ್ಪೋರ್ಟಿಂಗ್‌ನಲ್ಲಿ ಅನೇಕ ವರ್ಷಗಳ ಕಾಲ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ ಅಹ್ಮದ್ ಹುಸೇನ್ 1958ರ ಏಷ್ಯನ್ ಕ್ರೀಡಾಕೂಟ ಮತ್ತು 1959ರಲ್ಲಿ ನಡೆದ ಮೆರ್ಡೆಕಾ ಟೂರ್ನಮೆಂಟ್ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಹಾಗೂ ಸಿಯೋಲ್‌ನಲ್ಲಿ ನಡೆದ ಅಧ್ಯಕ್ಷರ ಕಪ್‌ನಲ್ಲಿ ಪಿ.ಕೆ. ಬ್ಯಾನರ್ಜಿ ಮುಖ್ಯ ಕೋಚ್ ಆಗಿದ್ದರೆ ಅಹ್ಮದ್ ಹುಸೇನ್ ಭಾರತದ ತಂಡದ ತರಬೇತುದಾರರಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications