ಪ್ಯಾರಿಸ್ ಸೇಂಟ್ ಜರ್ಮೈನ್ ಅಭಿಮಾನಿಗಳು-ಪೊಲೀಸರ ಮಧ್ಯೆ ಸಂಘರ್ಷ

ಪ್ಯಾರಿಸ್: ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಚಾಂಪ್ಸ್ ಎಲಿಸೀಸ್ ಭಾಗದಲ್ಲಿ ಫುಟ್ಬಾಲ್ ತಂಡ ಪ್ಯಾರಿಸ್ ಸೇಂಟ್ ಜರ್ಮೈನ್ ಮತ್ತು ಫ್ರೆಂಚ್ ಗಲಭೆ ತಡೆ ಪೊಲೀಸರ ಮಧ್ಯೆ ಘರ್ಷಣೆ ನಡೆದಿದೆ. ಸೋಮವಾರ (ಆಗಸ್ಟ್ 24) ನಡೆದ ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಪ್ಯಾರಿಸ್ ಸೇಂಟ್ ಜರ್ಮೈನ್ ಎಫ್‌ಸಿಯು ಬೇಯರ್ನ್ ಮ್ಯೂನಿಚ್ ವಿರುದ್ಧ ಸೋತ ಬಳಿಕ ಈ ಘಟನೆ ನಡೆದಿದೆ.
ಪೋರ್ಚುಗಲ್‌ನ ಲಿಸ್ಬನ್‌ನಲ್ಲಿರುವ ಎಸ್ಟಾಡಿಯೊ ಡು ಸ್ಪೋರ್ಟ್ ಲಿಸ್ಬೊವಾ ಇ ಬೆನ್ಫಿಕಾ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯದಲ್ಲಿ ಪ್ಯಾರಿಸ್ ಸೇಂಟ್ ಜರ್ಮೈನ್ ವಿರುದ್ಧ 1-0ಯ ಗೆಲುವು ದಾಖಲಿಸಿದ ಬೇಯರ್ನ್ ಮ್ಯೂನಿಚ್ ಎಫ್‌ಸಿ, 6ನೇ ಚಾಂಪಿಯನ್ಸ್ ಲೀಗ್ ಟ್ರೋಫಿ ತನ್ನದಾಗಿಸಿಕೊಂಡಿತ್ತು.
ಚಾಂಪಿಯನ್ಸ್ ಲೀಗ್ ಫೈನಲ್ ಬಳಿಕ ಚಾಂಪ್ಸ್ ಎಲಿಸೀಸ್ ಭಾಗದಲ್ಲಿ ಪೊಲೀಸರು ಮತ್ತು ಪಿಎಸ್‌ಜಿ ಅಭಿಮಾನಿಗಳ ಮಧ್ಯೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೊರೊನಾವೈರಸ್ ಭೀತಿಯಿದ್ದರೂ ಜನ ಮಾಸ್ಕ್ ಧರಿಸದಿದ್ದರಿಂದ ಮತ್ತು ಸಾಮಾಜಿ ಅಂತರ ಕಾಯ್ದುಕೊಳ್ಳದಿದ್ದರಿಂದ ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಬೇಕಾಗಿ ಬಂತು.
ಪಶ್ಚಿಮ ಪ್ಯಾರಿಸ್ ನ ಪಿಎಸ್‌ಜಿ ಕ್ಲಬ್‌ನ ಸ್ಟೇಡಿಯಂ ಇರುವ ಭಾಗದಲ್ಲೂ ಇಂಥದ್ದೇ ಗಲಾಟೆ ನಡೆದಿದ್ದು ಕಂಡುಬಂದಿದೆ. ಜಮಾಯಿಸಿದ್ದ ಜನರನ್ನು ಚದುರಿಸುವ ಸಲುವಾಗಿ ಇಲ್ಲೂ ಪೊಲೀಸರು ಟಿಯರ್ ಗ್ಯಾಸ್ ಬಳಸಿದ್ದು ವರದಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications