ಜೋಸ್ ಮೌರಿನ್ಹೋಗೆ ಧನ್ಯವಾದ ಸಲ್ಲಿಸಿದ ಸ್ಟಾರ್ ಫುಟ್ಬಾಲಿಗ ಪಾಲ್ ಪೋಗ್ಬಾ!

ಲಂಡನ್, ಡಿಸೆಂಬರ್ 23: ಮ್ಯಾನ್ಚೆಸ್ಟರ್ ಯುನೈಟೆಡ್ ಮ್ಯಾನೇಜರ್ ಸ್ಥಾನದಿಂದ ವಜಾ ಮಾಡಲ್ಪಟ್ಟ ಪೋರ್ಚುಗಲ್ ಮಾಜಿ ಆಟಗಾರ ಜೋಸ್ ಮೌರಿನ್ಹೋ ಅವರಿಗೆ ಫ್ರಾನ್ಸ್ ಸ್ಟಾರ್ ಫುಟ್ಬಾಲಿಗ ಪಾಲ್ ಪೋಗ್ಬಾ ಅವರು ವಿಶೇಷ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ತನ್ನ ಆಟದ ಸುಧಾರಣೆ ಸಹಕರಿಸಿದ್ದಕ್ಕಾಗಿ ತಾನು ಮೌರಿನ್ಹೋಗೆ ಧನ್ಯವಾದ ತಿಳಿಸುತ್ತಿರುವುದಾಗಿ ಪೋಗ್ಬಾ ಭಾನುವಾರ (ಡಿಸೆಂಬರ್ 23) ಹೇಳಿಕೊಂಡಿದ್ದಾರೆ.
ಇಂಗ್ಲಿಷ್ ಪ್ರೀಮಿಯರ್ ಲೀಗ್ (ಇಪಿಎಲ್) ಮುಂಚೂಣಿ ತಂಡ ರೆಡ್ ಡೆವಿಲ್ಸ್ ಖ್ಯಾತಿಯ ಮ್ಯಾನ್‌ಚೆಸ್ಟರ್ ಯುನೈಟೆಡ್‌ನ ಪ್ರಮುಖ ತರಬೇತುದಾರರಾಗಿ ಜೋಸ್ ಮೌರಿನ್ಹೋ ಸುಮಾರು ಎರಡೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಆದರೆ ಈ ಬಾರಿ ಪ್ರೀಮಿಯರ್ ಲೀಗ್‌ನಲ್ಲಿ ತಂಡದ ಪ್ರದರ್ಶನ ತೃಪ್ತಿಕರವಾಗಿಲ್ಲ ಎಂಬ ಕಾರಣ ನೀಡಿ ಜೋಸ್ ಅವರನ್ನು ಕೋಚ್ ಸ್ಥಾನದಿಂದ ವಜಾ ಮಾಡಲಾಗಿತ್ತು.
ಮೌರಿನ್ಹೋ ವಜಾಕ್ಕೆ ಮ್ಯಾನ್ ಯುನೈಟೆಡ್ ಆಟಗಾರ ಪೋಗ್ಬಾ ಅವರ ಹಠಮಾರಿ ಸ್ವಭಾವವೂ ಒಂದರ್ಥದಲ್ಲಿ ಕಾರಣ ಎಂಬ ಮಾತುಗಳು ಫುಟ್ಬಾಲ್ ಅಭಿಮಾನಿಗಳಿಂದ ಕೇಳಿ ಬಂದಿದ್ದವು. ಆದರೆ ಪೋಗ್ಬಾ, ತಾನು ಆಟದಲ್ಲಿ ಸುಧಾರಣೆ ಕಾಣಲು ಜೋಸ್ ಅವರು ನೆರವಾಗಿದ್ದಾರೆ. ಹೀಗಾಗಿ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದಿದ್ದಾರೆ.
ಮಂಗಳವಾರ (ಡಿಸೆಂಬರ್ 18) ಪ್ರೀಮಿಯರ್ ಲೀಗ್ ನಲ್ಲಿ ಮ್ಯಾನ್ಚೆಸ್ಟರ್ ಯುನೈಟೆಡ್ ತಂಡ ತನ್ನ ಬದ್ಧ ಎದುರಾಳಿ ಲಿವಲ್ ಪೂಲ್ ವಿರುದ್ಧ 3-1ರಿಂದ ಸೋಲನುಭವಿಸಿತ್ತು. ಆಗ ಜೋಸ್ ಮೌರಿನ್ಹೋ ಮೇಲಿನ ಅಸಮಾಧಾನ ಭುಗಿಲೆದ್ದಿತ್ತು. ಜೋಸ್ ಅವರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಲಾಗಿತ್ತು.
ಈಗ ನಾರ್ವೆ ಆಟಗಾರ ಓಲೆ ಗುನ್ನಾರ್ ಸೊಲ್ಸ್ಕ್‌ಜ್ವೇರ್ 'ಮ್ಯಾನ್ ಯುನೈಟೆಡ್' ತಂಡದ ಕೇರ್ ಟೇಕರ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಪ್ರೀಮಿಯರ್ ಲೀಗ್ ಮುಗಿಯೋವರೆಗೂ ಓಲೆ ಗುನ್ನಾರ್ ಅವರೇ ಮ್ಯಾನ್ಚೆಸ್ಟರ್ ತಂಡವನ್ನು ಮುನ್ನಡೆಸಲಿದ್ದಾರೆ. ಗುನ್ನಾರ್ ಅಧಿಕಾರ ವಹಿಸಿಕೊಂಡ ಬಳಿಕ ಶನಿವಾರ (ಡಿ.22) ಇಪಿಎಲ್‌ನಲ್ಲಿ ಮಾನ್ ಯುನೈಟೆಡ್, ಕಾರ್ಡಿಫ್ ಸಿಟಿ ವಿರುದ್ಧ 5-1ರ ಭರ್ಜರಿ ಗೆಲುವನ್ನಾಚರಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications