ಪೌಲೊ ಡೈಬಾಲಾಗೆ 4ನೇ ಬಾರಿಯೂ ಕೊರೊನಾವೈರಸ್ ಪಾಸಿಟಿವ್!

ಬ್ಯೂನಸ್ ಏರ್ಸ್, ಏಪ್ರಿಲ್ 29: ಅರ್ಜೆಂಟೀನಾ ಫುಟ್ಬಾಲರ್ ಪೌಲೊ ಡೈಬಾಲಾ ಅವರಿಗೆ ಕಳೆದ ಆರು ವಾರಗಳಲ್ಲಿ ಒಟ್ಟು ನಾಲ್ಕು ಬಾರಿ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಎಂದು ಬಂದಿದೆ ಎಂದು ವರದಿಯೊಂದು ಹೇಳಿದೆ. 'ಸೀರೀ ಎ'ಯು ಆಟಗಾರರಿಗೆ ಮೇ 4ರಿಂದ ವೈಯಕ್ತಿಕ ತರಬೇತಿಗೆ ಅನುಮತಿ ನೀಡಿದ್ದು, ಯುವೆಂಟಸ್‌ಗೆ ಇದರಿಂದ ಹಿನ್ನಡೆಯಾಗಲಿದೆ.
ಕಳೆದ ಆರು ವಾರಗಳಲ್ಲಿ ಪಾಲೊ ಡೈಬಾಲಾ ನಾಲ್ಕು ಬಾರಿ ಕೊರೊನಾ ಸೋಂಕು ಪರೀಕ್ಷೆಗೆ ಒಳಗಾಗಿದ್ದರು. ಇದರಲ್ಲಿ ನಾಲ್ಕನೇ ಬಾರಿಯೂ ಫಲಿತಾಂಶ ಪಾಸಿಟಿವ್ ಎಂದು ಬಂದಿದೆ ಎಂದು ಸ್ಪ್ಯಾನಿಶ್ ಟಿವಿ ಶೋ ಪ್ರೊಗ್ರಾಮ್ ಎಲ್ ಚಿರಿಂಗ್ಯುಟೊದಲ್ಲಿ ತಿಳಿಸಿದೆ ಎಂದು 'ದ ಸನ್ ವರದಿ ಹೇಳಿದೆ.
ಜುವೆಂಟಸ್ ತಂಡದ ಸಹ ಆಟಗಾರ ಡೇನಿಯಲ್ ರುಗಾನಿ ಅವರೊಂದಿಗೆ ವೈರಸ್ ಸೋಂಕಿಗೆ ಒಳಗಾದ ಮೊದಲ ಫುಟ್ಬಾಲ್ ಆಟಗಾರರಲ್ಲಿ ಡೈಬಾಲಾ ಒಬ್ಬರು. ಕಳೆದ ಮಾರ್ಚ್‌ನಲ್ಲಿ ಡೈಬಾಲಾ, ತನಗೂ ಮತ್ತು ತನ್ನ ಪ್ರೇಯಸಿಗೂ ಕೊರೊನಾ ಸೋಂಕು ಇರುವುದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದರು.
ಸದ್ಯ ಕೊರೊನಾವೈರಸ್ ಸೋಂಕಿತರು ಹೆಚ್ಚಿರುವ ರಾಷ್ಟ್ರಗಳಲ್ಲಿ ಇಟಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿ ಸುಮಾರು 200,000ಕ್ಕೂ ಹೆಚ್ಚು ಮಂದಿ ಮಾರಕ ಸೋಂಕಿಗೆ ತುತ್ತಾಗಿದ್ದಾರೆ. ಸುಮಾರು 27,000 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications