For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫುಟ್ಬಾಲ್ ದಿಗ್ಗಜ ಪೀಲೆ ನಿಧನ: ಅಂತಿಮಯಾತ್ರೆ ಬಗ್ಗೆ ಸ್ಯಾಂಟೋಸ್ ಕ್ಲಬ್ ಮಾಹಿತಿ

Pele no more: Football legend Pele funeral and burial to take place in his hometown Santos

ಫುಟ್ಬಾಲ್ ದಿಗ್ಗಜ ಪೀಲೆ ಅವರ ಫುಟ್ಬಾಲ್ ವೃತ್ತಿಜೀವನದ ಅನೇಕ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗಿದ್ದ ಅವರ ತವರಿನ ಸ್ಟೇಡಿಯಂ ದಿಗ್ಗಜ ಆಟಗಾರನ ಅಂತಿಮ ದರ್ಶನಕ್ಕೆ ವೇದಿಕೆಯಾಗಲಿದೆ. ಗುರುವಾರ ರಾತ್ರಿ ನಿಧನವಾದ ಪೀಲೆ ಅವರ ಅಂತಿಮಯಾತ್ರೆ ಮುಂದಿನ ಸೋಮವಾರ ಹಾಗೂ ಮಂಗಳವಾರ ಸ್ಯಾಂಟೀಸ್‌ನಲ್ಲಿ ನಡೆಯಲಿದೆ.

ಸೌ ಪೌಲೋ ಹೊರವಲಯದಲ್ಲಿರುವ ವಿಲಾ ಬೆಲ್ಮಿರೋ ಸ್ಟೇಡಿಯಂನಲ್ಲಿ ದಿಗ್ಗಜ ಆಟಗಾರನಿಗೆ ಅಂತಿಮ ಗೌರವ ಸಲ್ಲಿಸಲಾಗುತ್ತದೆ. ಪೀಲೆ ದೀರ್ಘ ಕಾಲ ಆಡಿರುವ ತವರಿನ ಫುಟ್ಬಾಲ್ ಕ್ಲಬ್ ಸ್ಯಾಂಟೋಸ್ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದೆ. ಸಾರ್ವಜನಿಕರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಕ್ಲಬ್ ತಿಳಿಸಿದೆ.

ಪೀಲೆ ಅವರ ಸಂಪೂರ್ಣ ಹೆಸರು ಎಡ್ಸನ್ ಅರಾಂಟೆಸ್ ಡೊ ನಾಸಿಮೆಂಟೊ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ದೀರ್ಘ ಕಾಲದ ಹೋರಾಟದ ಬಳಿಕ ಗುರುವಾರ ರಾತ್ರಿ ತಮ್ಮ 82ನೇ ವಯಸ್ಸಿನಲ್ಲಿ ನಿಧನವಾಗಿದ್ದಾರೆ. ಕಳೆದ ನವೆಂಬರ್ 29ರಂದು ಬ್ರೆಜಿಲ್ ನಗರ ಸೌ ಪೌಲೋದ ಅಲ್ಬರ್ಟ್ ಐನ್‌ಸ್ಟಿನ್ ಆಸ್ಪತ್ರೆಗೆ ದಾಖಲಾಗಿದ್ದರು.

ಸೌ ಪೌಲೋದಲ್ಲಿರುವ ಅಲ್ಬರ್ಟ್ ಐನ್‌ಸ್ಟಿನ್ ಆಸ್ಪತ್ರೆಯಲ್ಲಿಯೇ ಪೀಲೆ ಮೃತ ದೇಹ ಮುಂದಿನ ಸೋಮವಾರದವರೆಗೂ ಇರಲಿದೆ. ಸೋಮವಾರ ಮುಂಜಾನೆ ಸ್ಟೇಡಿಯಂನ ಮಧ್ಯ ಭಾಗದಲ್ಲಿ ಅಂತಿಮ ನಮನಕ್ಕಾಗಿ ಪೀಲೆ ಮೃತದೇಹವನ್ನು ತಂದಿರಿಸಲಾಗುತ್ತದೆ. ಸೋಮವಾರ ಬೆಳಿಗ್ಗೆ 10 ಗಂಟೆಯ ಬಳಿಕ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಹಾಗೂ ಮಂಗಳವಾರ ಅದೇ ಸಮಯಕ್ಕೆ ಅಂತಿಮ ದರ್ಶನ ಅಂತ್ಯಗೊಳಿಸಲಾಗುತ್ತದೆ ಎಂದು ಸ್ಯಾಂಟೋಸ್ ಮಾಹಿತಿ ಹಂಚಿಕೊಂಡಿದೆ.

ಪೀಲೆ ಬ್ರೆಜಿಲ್ ತಂಡದಲ್ಲಿದ್ದಾಗ ಫಿಫಾ ವಿಶ್ವಕಪ್ ಟ್ರೋಫಿಯನ್ನು ಮೂರು ಬಾರಿ ಬ್ರೆಜಿಲ್ ಗೆದ್ದುಕೊಂಡಿತ್ತು. ಈ ಸಾಧನೆ ಮಾಡಿದ ವಿಶ್ವದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ ಪೀಲೆ. 1958 ಹಾಗೂ 1962ರಲ್ಲಿ ಸತತ ಎರಡು ಬಾರಿ ವಿಶ್ವಕಪ್ ಗೆದ್ದ ಬ್ರೆಜಿಲ್ ಬಳಿಕ 1970ರಲ್ಲಿ ಮತ್ತೊಮ್ಮೆ ಗೆದ್ದುಕೊಂಡಿತ್ತು. ಆಟಗಾರನಾಗಿ ವಿಶ್ವದ ಯಾವುದೇ ಆಟಗಾರ ಈ ಸಾಧನೆಯನ್ನು ಈವರೆಗೆ ಮಾಡಲು ಸಾಧ್ಯವಾಗಿಲ್ಲ. ಇದು ಗಿನ್ನೀಸ್ ವಿಶ್ವದಾಖಲೆಯಲ್ಲಿಯೂ ಸ್ಥಾನ ಪಡೆದಿದೆ

ಫುಟ್ಬಾಲ್ ಇತಿಹಾಸದ ಶ್ರೇಷ್ಠ ಫಾರ್ವರ್ಡ್ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಬ್ರೆಜಿಲಿನ್ನ ದಿಗ್ಗಜ 92 ಪಂದ್ಯಗಳಲ್ಲಿ 77 ಗೋಲುಗಳನ್ನು ಗಳಿಸಿ ತಮ್ಮ ತಂಡದ ಪರವಾಗಿ ಅತೀ ಹೆಚ್ಚು ಗೋಲು ಗಳಿಸಿದ ಆಟಗಾರನಾಗಿ ನಿವೃತ್ತಿ ಹೊಂದಿದ್ದರು. ಈ ದಾಖಲೆಯನ್ನು ಇತ್ತೀಚೆಗಷ್ಟೇ ನೇಮರ್ ಸರಿಗಟ್ಟಿದ್ದಾರೆ.

ಪೀಲೆ ತಮ್ಮ ವೃತ್ತಿ ಜೀವನದ ಬಹುಪಾಲು ಅವಧಿಯನ್ನು ಬ್ರೆಜಿಲಿಯನ್ ಕ್ಲಬ್ ಸ್ಯಾಂಟೋಸ್ ಪರವಾಗಿ ಆಡಿದ್ದರು. 1956ರಿಂದ 1974ರ ವರೆಗೆ ಈ ಕ್ಲಬ್ ತಂಡದ ಪರವಾಗಿ ಆಡಿದ್ದ ಪೀಲೆ 659 ಪಂದ್ಯಗಳಲ್ಲಿ 643 ಗೋಲುಗಳನ್ನು ಗಳಿಸಿದ್ದರು

Story first published: Friday, December 30, 2022, 11:30 [IST]
Other articles published on Dec 30, 2022
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+