ಫುಟ್ಬಾಲ್ ದಂತಕತೆ ಪೀಲೆ ಪುತ್ರನಿಗೆ 13 ವರ್ಷ ಜೈಲುಶಿಕ್ಷೆ
ಸಾವೋ ಪೋಲೋ, ಫೆಬ್ರವರಿ 26: ಫುಟ್ಬಾಲ್ ದಂತಕತೆ ಪೀಲೆ ಅವರ ಪುತ್ರ ಹಾಗೂ ಮಾಜಿ ಫುಟ್ಬಾಲ್ ಆಟಗಾರ, ಮಾದಕ ದ್ರವ್ಯ ಕಳ್ಳ ಸಾಗಾಟ ಪ್ರಕರಣದ ಆರೊಪಿ ಎಡಿನೊ ಅವರು ಕೋರ್ಟಿಗೆ ಶರಣಾಗಿದ್ದು, 13 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ. 2014ರಲ್ಲಿ ಅಪರಾಧಿ ಎನಿಸಿಕೊಂಡ ಎಡಿನೋ ಅವರಿಗೆ ಈ ಮುಂಚೆ 33 ವರ್ಷ ಜೈಲು ಶಿಕ್ಷೆ ಘೋಷಿಸಲಾಗಿತ್ತು.
ಪೀಲೆ ಅವರ ಓಲ್ಡ್ ಕ್ಲಬ್ ಸ್ಯಾಂಟೊಸ್ ನಲ್ಲಿ ವೃತ್ತಿಪರ ಫುಟ್ಬಾಲ್ ಆಟಗಾರನಾಗಿದ್ದ ಎಡ್ಸನ್ ಛೋಲ್ಬಿ ಡು ನಾಸಿಮೆಂಟೋ ಅಲಿಯಾಸ್ ಎಡಿನೊ ಅವರು ತಮ್ಮ ತಂದೆಯವರ ಹೆಸರನ್ನು ಬಳಸಿಕೊಂಡು ಡ್ರಗ್ಸ್ ಜಾಲವನ್ನು ನಡೆಸುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.[ಫುಟ್ಬಾಲ್ ದಂತಕತೆ ಪೀಲೆ ಮಗ 'ಅಂದರ್']
45 ವರ್ಷದ ಎಡಿನೊ ಅವರ ಜತೆಗೆ ಡ್ರಗ್ಸ್ ಜಾಲದ ಮತ್ತೊಬ್ಬ ದೊರೆ ರೊನಾಲ್ಡೊ ಡೌರ್ಟ್ ಸೇರಿದಂತೆ ಇನ್ನು ಮೂವರಿಗೆ ಶಿಕ್ಷೆ ವಿಧಿಸಲಾಗಿದೆ. ಈ ಜಾಲ ಸ್ಯಾಂಟೊಸ್ ಮೂಲದ್ದಾಗಿದ್ದು, ಎಡಿನೊ ಗೋಲ್‌ಕೀಪಿಂಗ್ ಕೋಚ್ ಆಗಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ಎಡಿನೊ ಶಸ್ತ್ರಾಸ್ತ್ರ ಹಾಗೂ ಹಣಕಾಸಿನ ವಿಷಯದಲ್ಲಿ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಿದ್ದಾಗಿ ತಿಳಿದು ವರದಿಯಾಗಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಡೌರ್ಟ್ ಹಾಗೂ ಎಡಿನೊ ನಡುವಣ ದೂರವಾಣಿ ಸಂಭಾಷಣೆಯನ್ನು ಆಲಿಸಿದೆ. ಅದರಲ್ಲಿ ಈ ಇಬ್ಬರು ಹೊಸದಾಗಿ ವ್ಯವಹಾರ ಆರಂಭಿಸುವ ಬಗ್ಗೆ ಚರ್ಚಿಸಲಾಗಿತ್ತು. ಅಲ್ಲದೆ ಹೆಚ್ಚಿನ ಹಣ ನೀಡಿದರೆ, ತಮ್ಮ ತಂದೆಯ ಹೆಸರನ್ನು ಬಳಸಿ ವ್ಯವಹಾರಕ್ಕೆ ಸುಗಮ ಹಾದಿ ಮಾಡಿಕೊಡುವುದಾಗಿ ಎಡಿನೊ ತಿಳಿಸಿದ್ದು ಖಚಿತವಾಗಿದೆ.
ಎಡಿಸನ್ ಚೋಲ್ಬಿ ನಾಸಿಮೆಂಟೊ ಅಲಿಯಾಸ್ ಎಡಿನ್‌ಹೊ 2005ರಿಂದಲೂ ಈ ಆರೋಪವನ್ನು ನಿರಾಕರಿಸಿದ್ದರು. ಆದರೆ ಪ್ರಕರಣದ ವಿಚಾರಣೆಗೆ ಮತ್ತೆ ಮನವಿ ಮಾಡಿದ್ದರು. ಕೋರ್ಟಿಗೆ ಶರಣಾಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಈ ಮಾಜಿ ಗೋಲ್‌ಕೀಪರ್, 'ಇದರಿಂದ ನನಗೆ ತೀವ್ರ ಆಘಾತವಾಗಿದೆ. ಹಣ ದುರ್ಬಳಕೆ ಆರೋಪದಲ್ಲಿ ನನಗೆ ಶಿಕ್ಷೆ ವಿಧಿಸಲಾಗಿದೆ. ನಾನು ವಾಸ್ತವವಾಗಿ ಇದರಲ್ಲಿ ಶಾಮೀಲಾಗಿಲ್ಲ' ಎಂದಿದ್ದಾರೆ.(ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications