ಯುರೋಪಾ ಲೀಗ್ ಗೆದ್ದ ಶ್ರೀಮಂತ ಫುಟ್ಬಾಲ್ ತಂಡ
ಸ್ಕಾಟ್ ಹೋಮ್(ಸ್ವೀಡನ್), ಮೇ 25 : ಈ ಋತುವಿನಲ್ಲಿ ಇಂಗ್ಲೀಷ್ ಫುಟ್ಬಾಲ್ ಲೀಗ್ ಕಪ್ ಗೆದ್ದುಕೊಂಡಿದ್ದ ವಿಶ್ವದ ಶ್ರೀಮಂತ ತಂಡಗಳಲ್ಲಿ ಒಂದೆನಿಸಿರುವ ಮ್ಯಾಂಚೆಸ್ಟರ್ ಯುನೈಟೆಡ್ ತಂಡ, ಯುರೋಪಾ ಲೀಗ್ ಗೆದ್ದು ಸಂಭ್ರಮಿಸಿದೆ.
ಪೋರ್ಚುಗೀಸ್ ಮೂಲದ ಕೋಚ್ ಜೋಸ್ ಮರಿನ್ಹೋ ಅವರು ಮ್ಯಾಂಚೆಸ್ಟರ್ ಯುನೈಟೆಡ್ ಗೆ ಬಂದ ಮೇಲೆ ಇದು ಮೂರನೇ ಪ್ರಶಸ್ತಿಯಾಗಿದೆ. [ವಿಶ್ವದ ಅತ್ಯಂತ ಶ್ರೀಮಂತ ಫುಟ್ಬಾಲ್ ತಂಡಗಳು]
ಈ ಮುಂಚೆ 2016ರಲ್ಲಿ ಎಫ್ ಎ ಕಮ್ಯೂನಿಟಿ ಶೀಲ್ಡ್ ಪ್ರಶಸ್ತಿಯನ್ನು ಮ್ಯಾಂಚೆಸ್ಟರ್ ಯುನೈಟೆಡ್ ಗೆದ್ದುಕೊಂಡಿತ್ತು. ಇದಾದ ಪ್ರಸಕ್ತ ಋತುವಿನಲ್ಲಿ ಇಂಗ್ಲೀಷ್ ಫುಟ್ಬಾಲ್ ಲೀಗ್ ಕಪ್ ಗೆದ್ದುಕೊಂಡಿತ್ತು.ಈಗ ಕಳೆದ ರಾತ್ರಿ(ಮೇ 24) ಏಜಾಕ್ಸ್ ತಂಡವನ್ನು 0-2 ರಲ್ಲಿ ಸೋಲಿಸಿ ರೆಡ್ ಡೆವಿಲ್ ಗಳು ಸಂಭ್ರಮಿಸಿದ್ದಾರೆ.[ಅಬ್ಬಾ ಪೋಗ್ಬಾ! ಕ್ಲಬ್ಬಿನಿಂದ ಕ್ಲಬ್ಬಿಗೆ ಜಿಗಿಯಲು 813 ಕೋಟಿ ರು]
ಅತ್ಯಂತ ಶ್ರೀಮಂತ ಆಟಗಾರ ಪಾಲ್ ಪೋಗ್ಬಾ ಹಾಗೂ ಹೆನ್ರಿಕ್ ಖಿತಾರ್ಯಾನ್ ಅವರು ತಲಾ ಒಂದೊಂದು ಗೋಲು ಬಾರಿಸಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಚೊಚ್ಚಲ ಯುರೋಪಾ ಲೀಗ್ ಪ್ರಶಸ್ತಿ ದೊರೆಯುವಂತೆ ಮಾಡಿದರು. ಈ ಗೆಲುವಿನ ಮೂಲಕ ಮುಂದಿನ ಸೀಸನ್ ನ UEFA ನಲ್ಲಿ ಆಡಲು ಮ್ಯಾಂಚೆಸ್ಟರ್ ಯುನೈಟೆಡ್ ಅರ್ಹತೆ ಪಡೆದುಕೊಂಡಿದೆ.Image courtesy: Europa League Twitter handle

ಮ್ಯಾಂಚೆಸ್ಟರ್ ತಂಡಕ್ಕೆ ಮೊದಲ ಯುರೋಪಾ ಲೀಗ್
ಈ ಋತುವಿನಲ್ಲಿ ಇಂಗ್ಲೀಷ್ ಫುಟ್ಬಾಲ್ ಲೀಗ್ ಕಪ್ ಗೆದ್ದುಕೊಂಡಿದ್ದ ವಿಶ್ವದ ಶ್ರೀಮಂತ ತಂಡಗಳಲ್ಲಿ ಒಂದೆನಿಸಿರುವ ಮ್ಯಾಂಚೆಸ್ಟರ್ ಯುನೈಟೆಡ್ ತಂಡ, ಯುರೋಪಾ ಲೀಗ್ ಗೆದ್ದು ಸಂಭ್ರಮಿಸಿದೆ. ಒಟ್ಟಾರೆ, ಪ್ರಸಕ್ತ ಋತುವಿನಲ್ಲಿ ಎರಡನೇ ಟ್ರೋಫಿ ಇದಾಗಿದೆ. ಇಂಗ್ಲೀಷ್ ಪ್ರೀಮಿಯರ್ ಲೀಗ್ ನಲ್ಲಿ ಕಳಪೆ ಸಾಧನೆ ತೋರಿ 6ನೇ ಸ್ಥಾನಕ್ಕೆ ಕುಸಿದಿದ್ದ ಮ್ಯಾಂಚೆಸ್ಟರ್ ತಂಡಕ್ಕೆ ಈ ಗೆಲುವು ಹೊಸ ಹುರುಪು ತಂದಿದೆ.

ಮ್ಯಾಂಚೆಸ್ಟರ್ ಯುನೈಟೆಡ್ ಕೋಚ್
ಪೋರ್ಚುಗೀಸ್ ಮೂಲದ ಕೋಚ್ ಜೋಸ್ ಮರಿನ್ಹೋ ಅವರು ಮ್ಯಾಂಚೆಸ್ಟರ್ ಯುನೈಟೆಡ್ ಗೆ ಬಂದ ಮೇಲೆ ಇದು ಮೂರನೇ ಪ್ರಶಸ್ತಿಯಾಗಿದೆ. ಈ ಮುಂಚೆ 2016ರಲ್ಲಿ ಎಫ್ ಎ ಕಮ್ಯೂನಿಟಿ ಶೀಲ್ಡ್ ಪ್ರಶಸ್ತಿ, ಇಂಗ್ಲೀಷ್ ಫುಟ್ಬಾಲ್ ಲೀಗ್ ಕಪ್ ಮ್ಯಾಂಚೆಸ್ಟರ್ ಯುನೈಟೆಡ್ ಗೆದ್ದುಕೊಂಡಿದೆ

ಮ್ಯಾಂಚೆಸ್ಟರ್ ಯುನೈಟೆಡ್ ಆಟಗಾರರು
ಮ್ಯಾಂಚೆಸ್ಟರ್ ಯುನೈಟೆಡ್ ಪರ ರೂನಿ ಅಲ್ಲದೆ, ಜ್ಲಟಾನ್ ಇಬ್ರಾಹಿಮೊವಿಕ್, ಹೆನ್ರಿಕ್ ಖಿತಾರ್ಯಾನ್, ಎರಿಕ್ ಬೈಲಿ, ಪಾಲ್ ಪೋಗ್ಬಾರಂಥ ಜನಪ್ರಿಯ ಆಟಗಾರರಿದ್ದಾರೆ.

ಅತ್ಯಂತ ಶ್ರೀಮಂತ ಆಟಗಾರ ಪಾಲ್ ಪೋಗ್ಬಾ
ಅತ್ಯಂತ ಶ್ರೀಮಂತ ಆಟಗಾರ ಪಾಲ್ ಪೋಗ್ಬಾ(ಚಿತ್ರದಲ್ಲಿ) ಹಾಗೂ ಹೆನ್ರಿಕ್ ಖಿತಾರ್ಯಾನ್ ಅವರು ತಲಾ ಒಂದೊಂದು ಗೋಲು ಬಾರಿಸಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಚೊಚ್ಚಲ ಯುರೋಪಾ ಲೀಗ್ ಪ್ರಶಸ್ತಿ ದೊರೆಯುವಂತೆ ಮಾಡಿದರು

ಕಹಿ ಮರೆತ ಮ್ಯಾಂಚೆಸ್ಟರ್
ಮ್ಯಾಂಚೆಸ್ಟರ್ ನಲ್ಲಿ ಸ್ಫೋಟವಾದ ಕಹಿ ಘಟನೆ ಬಳಿಕ ಸ್ಟಾಕ್ ಹೋಮ್ ನಿಂದ ಇಂಗ್ಲೆಂಡಿಗೆ ಮರಳುವ ರೆಡ್ ಡೆವಿಲ್ಸ್ ತಂಡವನ್ನು ಸ್ವಾಗತಿಸಲು ಮ್ಯಾಂಚೆಸ್ಟರ್ ಜನತೆ ಕಾದಿದ್ದಾರೆ. ಚಿತ್ರದಲ್ಲಿ : ರೂನಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications