For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಇಪಿಎಲ್: ಪೋಗ್ಬಾ, ಲ್ಯೂಕ್ ಗೋಲ್- ಯುನೈಟೆಡ್ ಗೆ ಆರಂಭಿಕ ಜಯ

Pogba and Shaw goals give Man Utd winning start

ಮ್ಯಾಂಚೆಸ್ಟರ್, ಆಗಸ್ಟ್ 11: ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆದ ಪ್ರತಿಷ್ಠಿತ ಇಂಗ್ಲಿಷ್ ಪ್ರೀಮಿಯರ್ ಲೀಗ್ (ಇಪಿಎಲ್) ಫುಟ್ಬಾಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಲೀಸೆಸ್ಟರ್ ಸಿಟಿ ಇರುದ್ಧ 2-1 ಅಂತರದ ಗೆಲುವು ದಾಖಲಿಸಿದೆ.

ಸ್ಕೋರ್ ಕಾರ್ಡ್

ಯುನೈಟೆಡ್ ನ ಪೌಲ್ ಪೋಗ್ಬಾ ಮೊದಲು ಗೋಲ್ ಖಾತೆ ತೆರೆದರು. 3ನೇ ನಿಮಿಷದಲ್ಲಿ ಪೋಗ್ಬಾ ಅವರಿಂದ ಗೋಲ್ ದಾಖಲಾಯಿತು. ಪಂದ್ಯದ ದ್ವಿತೀಯಾರ್ಧದಲ್ಲಿ ಅಂದರೆ 83ನೇ ನಿಮಿಷದಲ್ಲಿ ಯುನೈಟೆಟ್ ಮತ್ತೊಬ್ಬ ಆಟಗಾರ ಲ್ಯೂಕ್ ಶಾ ಗೋಲ್ ಸಿಡಿಸಿ ತಂಡಕ್ಕೆ 2-0ಯ ಮುನ್ನಡೆ ಕೊಟ್ಟರು.

ಪಂದ್ಯ ಇನ್ನೇನು ಮುಗಿಯಿತೆನ್ನುವಾಗ ಅಂದರೆ ದ್ವಿತೀಯಾರ್ಧದಲ್ಲಿ ಲೀಸೆಸ್ಟರ್ ನಿಂದ ಗೋಲ್ ದಾಖಲಾಯಿತು. ಆಟಗಾರರ ಗಾಯದ ಕಾರಣ ಪಂದ್ಯ ನಿಲುಗಡೆಯಾಗಿದ್ದಕ್ಕಾಗಿ ಸೇರಿಸಲಾದ 4 ಹೆಚ್ಚುವರಿ ನಿಮಿಷದಲ್ಲಿ ಲೀಸೆಸ್ಟರ್ ಸಿಟಿ ಆಟಗಾರ ಜೇಮೀ ವಾರ್ಡಿ ಅವರು ಸಿಡಿಸಿದ ಗೋಲ್ ಎದುರಾಳಿ ನೀಡಿದ್ದ ಅಂತರವನ್ನು ಕಿರಿದಾಗಿಸಿತು. ಜೇಮೀ 92ನೇ ನಿಮಿಷದಲ್ಲಿ ಗೋಲ್ ಬಾರಿಸಿದ್ದರು.

ಪಂದ್ಯದ ವೇಳೆ ಮ್ಯಾನ್-ಯುನೈಟೆಡ್ ವಿರುದ್ಧ ಎರಡು ಬಾರಿ, ಲೀಸೆಸ್ಟರ್ ವಿರುದ್ಧ ಒಂದು ಬಾರಿ ಯೆಲ್ಲೋ ಕಾರ್ಡ್ ಪ್ರದರ್ಶಿಸಲ್ಪಟ್ಟಿತು. ಇತ್ತಂಡಗಳು ತಲಾ ಮೂರು ಬಾರಿ ತಂಡದ ಆಟಗಾರರನ್ನು ಬದಲಿಸಿಕೊಂಡವು.

Story first published: Saturday, August 11, 2018, 16:25 [IST]
Other articles published on Aug 11, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+