Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅನ್ಯ ಹುಡುಗಿ ಜೊತೆ ಇರುವಾಗಲೇ ಪತ್ನಿ ಶಕೀರಾಗೆ ಸಿಕ್ಕಿಬಿದ್ದ ಫುಟ್‌ಬಾಲ್‌ ಸ್ಟಾರ್; ಬ್ರೇಕ್ಅಪ್‌ನತ್ತ ಗಾಯಕಿ!

Pop star Shakira and football star Gerard Pique to split after she found him cheating on her: Reports

ಖ್ಯಾತ ಗಾಯಕಿ ಶಕೀರಾ 2010ರಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ನ ಆಂಥಮ್ ಅನ್ನು ಹಾಡಿ, ವೇದಿಕೆ ಮೇಲೆ ಈ ಹಾಡಿಗೆ ನೃತ್ಯವನ್ನೂ ಕೂಡ ಮಾಡಿದ್ದರು. ಈ ವೇಳೆ ಹಲವಾರು ಫುಟ್ಬಾಲ್ ಆಟಗಾರರ ಜತೆ ಜೆರಾರ್ಡ್ ಪಿಕ್ ಕೂಡ ಭಾಗವಹಿಸಿದ್ದರು. ಈ 'ವಾಕಾ ವಾಕಾ' ಹಾಡಿನ ಮೂಲಕ ವಿಶ್ವದಾದ್ಯಂತ ವೈರಲ್ ಆದ ಶಕೀರಾ ಮತ್ತಷ್ಟು ಹೆಸರು ಮಾಡಿದ್ದರು ಹಾಗೂ ಈ ಸಂದರ್ಭದಲ್ಲಿಯೇ ಫುಟ್‌ಬಾಲ್‌ ಆಟಗಾರ ಜೆರಾರ್ಡ್ ಪಿಕ್ ಮತ್ತು ಶಕೀರಾ ನಡುವೆ ಪ್ರೀತಿ ಕೂಡ ಮೂಡಿತ್ತು.

ಹೀಗೆ ಇಬ್ಬರ ನಡುವೆ ಪ್ರೀತಿ ಪ್ರೇಮವಿದೆ ಎಂಬ ಗಾಸಿಪ್ ಸ್ವಲ್ಪ ದಿನಗಳ ಕಾಲ ಆಗಾಗ ಹರಿದಾಡುತ್ತಲೇ ಇತ್ತು. ನಂತರ ಈ ಜೋಡಿ ಒಂದೇ ಮನೆಯಲ್ಲಿ ವಾಸವಿರುವ ಮೂಲಕ ತಮ್ಮ ನಡುವಿನ ಪ್ರೀತಿ ಪ್ರೇಮ ನಿಜ ಎಂಬುದನ್ನು ಬಹಿರಂಗಪಡಿಸಿತು. ಗಂಡ ಫುಟ್ಬಾಲ್ ತಾರೆ, ಹೆಂಡತಿ ಜಗತ್ ಪ್ರಸಿದ್ಧ ಪಾಪ್ ಸಿಂಗರ್ ಹೀಗೆ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದ ಈ ಜೋಡಿ ಅನ್ಯೋನ್ಯವಾಗಿಯೇ ಜೀವನವನ್ನು ಸಾಗಿಸುತ್ತಿತ್ತು.

ಆದರೆ ಇದೀಗ ಈ ಇಬ್ಬರ ನಡುವಿನ ಸಂಬಂಧಕ್ಕೆ ಬ್ರೇಕ್ ಬಿದ್ದಿದೆ. ಸ್ಪೇನ್ ಪತ್ರಿಕೆಯೊಂದು ವರದಿ ಮಾಡಿರುವ ಪ್ರಕಾರ ಶಕೀರಾ ತಾವು ವಾಸವಿದ್ದ ಮನೆಯಲ್ಲಿಯೇ ಅನ್ಯ ಯುವತಿಯ ಜತೆ ತನ್ನ ಗಂಡ ಜೆರಾರ್ಡ್ ಪಿಕ್ ಅವರನ್ನು ನೋಡಿದ ಕಾರಣ ಆತನೊಂದಿಗೆ ಬ್ರೇಕ್ ಅಪ್ ಮಾಡಿಕೊಳ್ಳಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ ಈ ರೀತಿಯ ಸುದ್ದಿಗಳು ಹರಿದಾಡಲು ಆರಂಭಿಸಿದ ಬೆನ್ನಲ್ಲೇ ಜೆರಾರ್ಡ್ ಪಿಕ್ ಬಾರ್ಸಿಲೋನಾಗೆ ಪಲಾಯನ ಮಾಡಿ ಬೇರೆ ಗ್ರಹದಲ್ಲಿ ವಾಸವಿದ್ದಾರೆ ಎನ್ನಲಾಗುತ್ತಿದೆ ಹಾಗೂ ಈ ಮನೆಗೆ ಜೆರಾರ್ಡ್ ಪಿಕ್ ಹೋಗಿ ಬರುವ ಕೆಲವೊಂದಷ್ಟು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಈ ಸುದ್ದಿಗೆ ಮತ್ತಷ್ಟು ಪುಷ್ಟಿ ಕೊಡುತ್ತಿದೆ.

ಇತ್ತೀಚೆಗಷ್ಟೇ ಜೆರಾರ್ಡ್ ಪಿಕ್ ಮತ್ತು ಆತನ ಸ್ನೇಹಿತರು ತಡರಾತ್ರಿಯವರೆಗೂ ಮನೆಯಲ್ಲಿಯೇ ಮೋಜು ಮಸ್ತಿಯ ಪಾರ್ಟಿ ಮಾಡಿದ್ದರು ಹಾಗೂ ಈ ವೇಳೆ ಪಾರ್ಟಿಗೆ ಆಗಮಿಸಿದ್ದ ಯುವತಿಯೋರ್ವಳು ಜೆರಾರ್ಡ್ ಪಿಕ್ ಜತೆ ತಡರಾತ್ರಿಯವರೆಗೂ ಇದ್ದದ್ದನ್ನು ಶಕೀರಾ ಕಂಡಿದ್ದಾರೆ, ಹೀಗಾಗಿಯೇ ಇಬ್ಬರ ನಡುವೆ ಬ್ರೇಕ್ ಅಪ್ ಸಂಭವಿಸುತ್ತಿದೆ ಎಂದು ಸುದ್ದಿ ಇದೆ. ಇನ್ನು ಲಿವ್ ಇನ್ ಟುಗೆದರ್ ಸಂಬಂಧದಲ್ಲಿರುವ ಈ ಜೋಡಿಗೆ ಮಿಲನ್ ಮತ್ತು ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಹೀಗೆ ಇಬ್ಬರ ನಡುವೆ ಬ್ರೇಕ್ ಆಗಲಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದರೂ ಸಹ ಇಬ್ಬರೂ ಈ ಕುರಿತು ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ ಹಾಗೂ ಶಕೀರಾ ತನ್ನ ಸಾಮಾಜಿಕ ಜಾಲತಾಣಗಳಲ್ಲಿನ ಖಾತೆಗಳಲ್ಲಿ ಜೆರಾರ್ಡ್ ಪಿಕ್ ಚಿತ್ರಗಳನ್ನು ತೆಗೆದುಹಾಕಿದ್ದಾರೆ. ಈ ಎಲ್ಲ ನಡೆಗಳು ಇಬ್ಬರ ನಡುವೆ ಬ್ರೇಕ್ ಅಪ್ ಆಗುವುದು ಖಚಿತ ಎಂಬುದರ ಮುನ್ಸೂಚನೆ ನೀಡಿದಂತಿದೆ.

Story first published: Friday, June 3, 2022, 23:34 [IST]
Other articles published on Jun 3, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+