ಸೆಪ್ಟೆಂಬರ್ 12ರಿಂದ ಪ್ರೀಮಿಯರ್ ಲೀಗ್ 2020-21ರ ಸೀಸನ್ ಆರಂಭ

ಲಂಡನ್, ಜುಲೈ 24: ಇಂಗ್ಲಿಷ್ ಪ್ರೀಮಿಯರ್ ಲೀಗ್ ಫುಟ್ಬಾಲ್ ಟೂರ್ನಿಯ 2020-21ರ ಸೀಸನ್ ಸೆಪ್ಟೆಂಬರ್ 12ರಿಂದ ಆರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ. ಅದರೆ ಸೀಸನ್‌ನ ವೇಳಾಪಟ್ಟಿ ಟೂರ್ನಿ ಆರಂಭವಾಗುವುದಕ್ಕೆ ಇನ್ನೂ 3 ವಾರಗಳಿರುವಾಗ ಘೋಷಿಸಲ್ಪಡಲಿದೆ ಎಂದು ಮಾಹಿತಿ ಲಭ್ಯವಾಗಿದೆ.
ಸೆಪ್ಟೆಂಬರ್ 12ರಿಂದ ಇಪಿಎಲ್ ಆರಂಭವಾಗಲಿರುವುದನ್ನು ಇಂಗ್ಲಿಷ್ ಫುಟ್ಬಾಲ್‌ನ ಉನ್ನತ ಮೂಲವೊಂದು ಖಾತರಿಪಡಿಸಿದೆ. ಈ ಸೀಸನ್ ಜುಲೈ 26ರ ಭಾನುವಾರ ಕೊನೆಗೊಳ್ಳಲಿದೆ. ಆ ಬಳಿಕ ಮುಂದಿನ ಸೀಸನ್ ಸೆಪ್ಟೆಂಬರ್‌ನಿಂದ ಶುರುವಾಗಲಿದೆ.
ಹೊಸ ಸೀಸನ್ ಆರಂಭಕ್ಕೆ 3 ತಿಂಗಳು ಮುಂಚಿತವಾಗಿ ಅಂದರೆ ಆಗಸ್ಟ್ 21ರ ಒಳಗಾಗಿ ಪೂರ್ಣ ವೇಳಾಪಟ್ಟಿ ಪ್ರಕಟಿಸಲು ಎಲ್ಲಾ ಕ್ಲಬ್‌ಗಳು ಒಪ್ಪಿಕೊಂಡಿವೆ ಎಂದು ಸನ್‌ಸ್ಪೋರ್ಟ್ಸ್ ತಿಳಿಸಿದೆ. ಈ ಸೀಸನ್‌ನಲ್ಲಿ ಚೆಲ್ಸಿಯಾವನ್ನು 5-3ಯ ಅಂತರದಿಂದ ಸೋಲಿಸಿದ್ದ ಲಿವರ್‌ಪೂಲ್ (ಜುಲೈ 22ರಂದು) ಟ್ರೋಫಿ ಜಯಿಸಿತ್ತು.
Story first published: Saturday, July 25, 2020, 9:30 [IST]
Other articles published on Jul 25, 2020
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications