Premier League: ಲೀಡ್ಸ್ ವಿರುದ್ಧ ಮ್ಯಾನ್ಚೆಸ್ಟರ್ ಯುನೈಟೆಡ್‌ಗೆ ಭರ್ಜರಿ ಜಯ

ಮ್ಯಾನ್ಚೆಸ್ಟರ್: ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಶನಿವಾರ (ಆಗಸ್ಟ್ 14) ನಡೆದ ಇಂಗ್ಲಿಷ್ ಪ್ರೀಮಿಯರ್ ಲೀಗ್ (ಇಪಿಎಲ್) ಪಂದ್ಯದಲ್ಲಿ ಲೀಡ್ಸ್ ಯುನೈಟೆಡ್ ವಿರುದ್ಧ ಮ್ಯಾನ್ಚೆಸ್ಟರ್ ಯುನೈಟೆಡ್ ತಂಡ 5-1ರ ಭರ್ಜರಿ ಜಯ ಗಳಿಸಿದೆ. ಬ್ರೂನೋ ಫೆರ್ನಾಂಡಿಸ್ ಅವರ ಹ್ಯಾಟ್ರಿಕ್ ಗೋಲ್ ನೆರವಿನಿಂದ ಮ್ಯಾನ್ ಯುನೈಟೆಡ್ ಮುನ್ನಡೆ ಸಾಧಿಸಿದೆ.
ಪಂದ್ಯದ ಪ್ರಥಮಾರ್ಧದ 30ನೇ ನಿಮಿಷದಲ್ಲಿ ಬ್ರೂನೋ ಫೆರ್ನಾಂಡಿಸ್ ಮೊದಲ ಗೋಲ್ ಬಾರಿಸಿ ಮ್ಯಾನ್ಚೆಸ್ಟರ್ ಯುನೈಟೆಡ್‌ಗೆ ಮುನ್ನಡೆ ಕೊಟ್ಟರು. ಅದಾಗಿ ಪಂದ್ಯದ ದ್ವಿತೀಯಾರ್ಧದಲ್ಲಿ ಅಂದರೆ 48ನೇ ನಿಮಿಷದಲ್ಲಿ ಲೀಡ್ಸ್ ಯುನೈಟೆಡ್‌ನ ಲ್ಯೂಕ್ ಅಯ್ಲಿಂಗ್ ಗೋಲ್ ಬಾರಿಸಿ ಅಂಕವನ್ನು 1-1ಕ್ಕೆ ತಂದರು.
52ನೇ ನಿಮಿಷದಲ್ಲಿ ಮ್ಯಾನ್ ಯುನೈಡೆಡ್ ತಂಡದ ಮೇಸನ್ ಗ್ರೀನ್ವುಡ್ ದ್ವಿತೀಯ ಗೋಲ್ ಬಾರಿಸಿ ತಂಡದ ಮುನ್ನಡೆ ಹೆಚ್ಚಿಸಿದರು. 54ನೇ ನಿಮಿಷದಲ್ಲಿ ಬ್ರೂನೋ ಫೆರ್ನಾಂಡಿಸ್ ಅವರಿಂದ ಎರಡನೇ ಗೋಲ್ ದಾಖಲಾಯ್ತು. ಅಲ್ಲಿಗೆ ತಂಡದ ಅಂಕ 2-1ಕ್ಕೇರಿತು.
60ನೇ ನಿಮಿಷದಲ್ಲಿ ಮತ್ತೆ ಫೆರ್ನಾಂಡಿಸ್ ಮೂರನೇ ಗೋಲ್ ಬಾರಿಸಿ ತಂಡಕ್ಕೆ ಭರ್ಜರಿ ಮುನ್ನಡೆ ಕೊಟ್ಟರು. ಅಷ್ಟಕ್ಕೇ ನಿಲ್ಲಲಿಲ್ಲ, 68ನೇ ನಿಮಿಷದಲ್ಲಿ ಮ್ಯಾನ್ ಯುನೈಡೆಡ್‌ನ ಫ್ರೆಡ್ಡಿ ವುಡ್‌ಮ್ಯಾನ್ ಅವರಿಂದ ತಂಡದ ಪರ 5ನೇ ಗೋಲ್ ದಾಖಲಾಯ್ತು. ಈ ಗೆಲುವಿನೊಂದಿಗೆ ಮ್ಯಾನ್ ಯುನೈಟೆಡ್ ಒಂದು ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಸದ್ಯ ಮೊದಲನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications