Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೀಮಿಯರ್ ಲೀಗ್: ಮ್ಯಾನ್ಚೆಸ್ಟರ್ ಸಿಟಿ ಪ್ರಶಸ್ತಿಯಾಸೆ ಉಳಿಸಿದ ಸಿಲ್ವಾ, ಸೇನ್

premier league: Silva, Sane send Man City back to summit

ಓಲ್ಡ್ ಟ್ರಾಫರ್ಡ್, ಏಪ್ರಿಲ್ 25: ಇಂಗ್ಲೆಂಡ್‌ನ ಓಲ್ಡ್ ಟ್ರಾಫರ್ಡ್ ಅರೆನಾದಲ್ಲಿ ಬುಧವಾರ (ಏಪ್ರಿಲ್ 24) ನಡೆದ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಮ್ಯಾನ್ಚೆಸ್ಟರ್ ಯುನೈಟೆಡ್ ತಂಡವನ್ನು 2-0ಯಿಂದ ಸೋಲಿಸುವ ಮೂಲಕ ಮ್ಯಾನ್ಚೆಸ್ಟರ್ ಸಿಟಿ ಪ್ರಶಸ್ತಿಯಾಸೆಯನ್ನು ಉಳಿಸಿಕೊಂಡಿತು.

ಹಾಲಿ ಚಾಂಪಿಯನ್ ಮಾನ್ಚೆಸ್ಟರ್ ಸಿಟಿಯ ಬರ್ನಾರ್ಡೊ ಸಿಲ್ವಾ ಮತ್ತು ಲೆರಾಯ್ ಸೇನ್ ಆಕರ್ಷಕ ಗೋಲ್ ಸೆರೆವಿನೊಂದಿಗೆ ತಂಡ ಈ ಬಾರಿಯೂ ಪ್ರಶಸ್ತಿ ಹಿಡಿದಿಟ್ಟುಕೊಳ್ಳುವತ್ತ ಮಹತ್ತರ ಹೆಜ್ಜೆಯನ್ನಿಟ್ಟಿದೆ. ಬರ್ನಾರ್ಡೊ, 54ನೇ ನಿಮಿಷದಲ್ಲಿ ಮತ್ತು ಸೇನ್ 66ನೇ ನಿಮಿಷದಲ್ಲಿ ಗೋಲ್ ಸಿಡಿಸಿ ತಂಡದ ಗೆಲುವನ್ನು ಬರೆದರು.

ಈ ಗೆಲುವಿನೊಂದಿಗೆ ಮ್ಯಾನ್. ಸಿಟಿ ತಂಡವೀಗ ಒಟ್ಟು 89 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ದ್ವಿತೀಯ ಸ್ಥಾನದಲ್ಲಿರುವ ಬಲಿಷ್ಠ ತಂಡ ಮತ್ತು ಮ್ಯಾನ್‌. ಸಿಟಿಯ ಬದ್ಧ ಎದುರಾಳಿ ಲಿವರ್ ಪೂಲ್ 88 ಪಾಯಿಂಟ್ ಕಲೆ ಹಾಕಿದೆ. ಪ್ರಶಸ್ತಿ ಸುತ್ತಿಗೂ ಮುನ್ನ ಲಿವರ್ ಪೂಲ್ ಮತ್ತು ಮ್ಯಾನ್ಚೆಸ್ಟರ್ ಸಿಟಿ ತಲಾ 3 ಪಂದ್ಯಗಳನ್ನು ಆಡಲಿವೆ.

Story first published: Friday, April 26, 2019, 6:27 [IST]
Other articles published on Apr 26, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+