ಪ್ಯಾರಿಸ್ ಸೇಂಟ್ ಜರ್ಮೈನ್ ಸ್ಟಾರ್ ಆಟಗಾರ ನೇಮರ್‌ಗೆ ಕೊರೊನಾ ಸೋಂಕು

ಪ್ಯಾರಿಸ್: ಪ್ಯಾರಿಸ್ ಸೇಂಟ್ ಜರ್ಮೈನ್ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ನೇಮರ್‌ಗೆ ಕೊರೊನಾ ಪಾಸಿಟಿವ್ ಇದೆ ಎಂದು ಬಲ್ಲ ಮೂಲವೊಂದು ಎಎಫ್‌ಪಿಗೆ ಬುಧವಾರ ತಿಳಿಸಿದೆ. ಚಾಂಪಿಯನ್ಸ್ ಲೀಗ್ ರನ್ನರ್ಸ್ ತಂಡವಾದ ಪಿಎಸ್‌ಜಿಯಲ್ಲಿ ಈಗಾಗಲೇ ಕೆಲವರಿಗೆ ಕೊರೊನಾ ತಗುಲಿದೆ. ಇದರಲ್ಲಿ ನೇಮರ್ ಕೂಡ ಒಬ್ಬ ಎಂದು ತಿಳಿದು ಬಂದಿದೆ.
'ಪ್ಯಾರಿಸ್ ಸೇಂಟ್ ಜರ್ಮೈನ್‌ನ ಮೂವರು ಆಟಗಾರರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವುದು ಖಾತರಿಯಾಗಿದೆ. ಅವರಿಗೆ ಆರೋಗ್ಯ ಮಾರ್ಗಸೂಚಿ ನೀಡಲಾಗಿದೆ,' ಎಂದು ಪಿಎಸ್‌ಜಿಯ ಮೂಲ ಮಾಹಿತಿ ನೀಡಿದೆ.
'ನಮ್ಮ ತಂಡದ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿಗಳು ಮುಂಬರುವ ದಿನಗಳಲ್ಲಿ ಪರೀಕ್ಷೆ ನಡೆಸಲಿದ್ದೇವೆ,' ಎಂದು ಪಿಎಸ್‌ಜಿ ಹೇಳಿದೆ. ಕೋವಿಡ್-19 ತಗುಲಿರುವ ಆಟಗಾರರು ಯಾರು ಎಂಬ ಪ್ರಶ್ನೆಗೆ ಉತ್ತರಿಸಲು ಎಎಫ್‌ಪಿ ನಿರಾಕರಿಸಿದೆ.
ಆದರೆ ಸೋಂಕಿತರಲ್ಲಿ ನೇಮರ್ ಕೂಡ ಇದ್ದಾರೆಯೆ? ಎಂಬ ಸುದ್ದಿಗಾರರ ಪ್ರಶ್ನೆಗೆ ಮೂಲ ಹೌದೆಂಬಂತೆ ಉತ್ತರಿಸಿದೆ. ಹೀಗಾಗಿ ನೇಮರ್‌ಗೆ ಕೊರೊನಾ ತಾಗಿರುವುದು ಬಹಿರಂಗಗೊಂಡಿದೆ.
Story first published: Wednesday, September 2, 2020, 22:55 [IST]
Other articles published on Sep 2, 2020
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications