Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ಲಬ್‌ ಪರ ಆಡುವಾಗ ರೊನಾಲ್ಡೊ ಅಬ್ಬರ; ದೇಶದ ಪರ ಆಡುವಾಗ ನಡೆಯದ ಚಮತ್ಕಾರ

ವಿಶ್ವದ ಸ್ಟಾರ್ ಆಟಗಾರರ ಪಟ್ಟಿಯನ್ನು ನೋಡಿದಾಗ ಆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುವ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ. ಇವರು ತಮ್ಮ ಅಮೋಘ ಕಾಲ್ಚಳಕದ ಬಲದಿಂದ ಅಸಂಖ್ಯಾತ ಅಭಿಮಾನಿಗಳನ್ನು ಖುಷಿ ಪಡಿಸಿದ್ದಾರೆ. ಆದರೆ ಬಿಗ್‌ ಮ್ಯಾಚ್‌ಗಳಲ್ಲಿ ಸತತವಾಗಿ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಬುಧವಾರ ನಡೆದ ಪಂದ್ಯದಲ್ಲಿ ರೊನಾಲ್ಡೊ ಮುಂದಾಳತ್ವದ ಪೋರ್ಚುಗಲ್‌ 1-1 ರಿಂದ ಡಿಆರ್‌ ಕಾಂಗೋ ವಿರುದ್ಧ ಡ್ರಾ ಮಾಡಿಕೊಂಡಿದೆ. ಈ ಪ್ರದರ್ಶನದ ಬಳಿಕ ಈಗ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಟೀಕೆಗಳು ಕೇಳಿ ಬರುತ್ತಿವೆ.

41 ವರ್ಷದ ಸೂಪರ್‌ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ, ಪೋರ್ಚುಗಲ್ ಗೆಲುವಿಗೆ ಸಹಾಯ ಮಾಡುತ್ತಿದ್ದಾರಾ ಅಥವಾ ಅವರ ವೈಯಕ್ತಿಕ ದಾಖಲೆಗಳ ಮೇಲಷ್ಟೇ ಗಮನ ಹರಿಸುತ್ತಿದ್ದಾರಾ? ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಡಿಆರ್‌ ಕಾಂಗೋ ವಿರುದ್ಧದ ಪಂದ್ಯದಲ್ಲಿ ಇವರ ಮೂವ್‌ಮೆಂಟ್ (ಚಲನೆ) ಅನ್ನು ಸಾರ್ವಜನಿಕವಾಗಿ ಫ್ರಾನ್ಸ್‌ನ ಮಾಜಿ ಸ್ಟ್ರೈಕರ್ ಥಿಯೆರಿ ಹೆನ್ರಿ ಟೀಕಿಸಿದ್ದಾರೆ. ರೊನಾಲ್ಡೊ ಸಹ ಆಟಗಾರನಿಗೆ ಸ್ಕೋರ್‌ ಮಾಡುವ ಅವಕಾಶವನ್ನು ಸೃಷ್ಟಿಸಬಹುದಿತ್ತು. ಆದರೆ ರೊನಾಲ್ಡೊ ತಾವೇ ಗೋಲು ಗಳಿಸಲು ಆದ್ಯತೆ ನೀಡಿದರು ಎಂದು ಆರೋಪಿಸಿದ್ದಾರೆ.

Pundits Slam Cristiano

ಲಯಕ್ಕೆ ಮರಳುವುದು ಯಾವಾಗ?

ಪೋರ್ಚುಗಲ್‌ನ ಆಕ್ರಮಣವು ಇನ್ನೂ ರೊನಾಲ್ಡೊ ಅವರ ಸುತ್ತಲೇ ಸುತ್ತುತ್ತಿದೆ. ಅವರ ತಂಡದಲ್ಲಿ ಬ್ರೂನೋ ಫೆರ್ನಾಂಡಿಸ್ ಮತ್ತು ಜೊವಾವೊ ನೆವೆಸ್ ಅವರಂತಹ ಯುವ ಆಟಗಾರರು ತಂಡದಲ್ಲಿದ್ದರೂ, ಕ್ರಿಸ್ಟಿಯಾನೊ ರೊನಾಲ್ಡೊ ಕೇಂದ್ರಿಕೃತವಾಗಿರುವುದನ್ನು ಅನೇಕ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಮೊದಲ ಪಂದ್ಯದಲ್ಲಿ ರೊನಾಲ್ಡೊ ಕೇವಲ 25 ಬಾರಿ ಚೆಂಡನ್ನು ಸ್ಪರ್ಶಿಸಿದ್ದರು ಎಂಬುದು ಅವರ ಕಳಪೆ ಪ್ರದರ್ಶನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಡಿಆರ್ ಕಾಂಗೋ ವಿರುದ್ಧ ರೊನಾಲ್ಡೊ ನೀಡಿದ ಪ್ರದರ್ಶನ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಕಾರಣ ರೊನಾಲ್ಡೊ ಅವರ ಸಮಕಾಲೀನ ಆಟಗಾರ ಲಿಯೊನೆಲ್‌ ಮೆಸ್ಸಿ ಬುಧವಾರ ನಡೆದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಹ್ಯಾಟ್ರಿಕ್ ಗೋಲು ದಾಖಲಿಸಿದ್ದರು. ಈ ಎರಡು ಪ್ರಮುಖ ಪಂದ್ಯಗಳ ನಡುವಿನ ಯಶಸ್ಸಿನ ವ್ಯತ್ಯಾಸವು ಜಾಗತಿಕ ವೇದಿಕೆಯಲ್ಲಿ ಸ್ಟಾರ್‌ಗಳ ಪ್ರಸ್ತುತ ವೃತ್ತಿಪರ ಸಾಮರ್ಥ್ಯ ಈಗ ಚರ್ಚೆಯ ವಸ್ತುವಾಗಿದೆ.

ರೊನಾಲ್ಡೊ ಕಾಲೆಳೆದ ಕಾಂಗೋ ಅಭಿಮಾನಿ

ಇವೆಲ್ಲದರ ನಡುವೆ ಪಂದ್ಯದ ನಂತರ ಪೋರ್ಚುಗಲ್ ತಂಡ ಮೈದಾನದಿಂದ ಹೊರನಡೆಯುತ್ತಿದ್ದಾಗ ರೊನಾಲ್ಡೊ ಅವರಿಗೆ ಅತ್ಯಂತ ಮುಜುಗರದ ಸನ್ನಿವೇಶವೊಂದು ಎದುರಾಯಿತು. ಎದುರಾಳಿ ಡಿಆರ್ ಕಾಂಗೋ ತಂಡದ ಪ್ರೇಕ್ಷಕರು ರೊನಾಲ್ಡೊ ಅವರನ್ನು ಕೆಣಕಲು ಮೈದಾನದ ಗ್ಯಾಲರಿಯಿಂದಲೇ 'ಮೆಸ್ಸಿ.. ಮೆಸ್ಸಿ..' ಎಂದು ಕೂಗಿ ಕೆಣಕಿದರು. ಇದರಿಂದ ರೊನಾಲ್ಡೊ ಅವರಿಗೆ ಕೋಪ ಬಂದಿತು. ಇದರ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ.

Pundits Slam Cristiano

ಆರನೇ ವಿಶ್ವಕಪ್ ಫುಟ್ಬಾಲ್ ಆಡುತ್ತಿರುವ ಪೋರ್ಚುಗಲ್ ತಂಡ ಈಗ ತಾನು ಮಾಡಿರುವ ತಪ್ಪುಗಳಿಂದ ಪಾಠ ಕಲಿಯದೇ ಇದ್ದಲ್ಲಿ ಅಪಾಯ ಕಾದಿದೆ. ರೊನಾಲ್ಡೊ ಅವರು ವೈಯಕ್ತಿಕ ಅಹಂ ಹಾಗೂ ಬರಿ ದಾಖಲೆಗಳ ವ್ಯಾಮೋಹದಿಂದ ಹೊರಬಂದು, ಯುವ ಆಟಗಾರರಿಗೆ ಪ್ರೋತ್ಸಾಹ ನೀಡಬೇಕಾಗಿದೆ. ಇಡೀ ಪೋರ್ಚುಗಲ್ ತಂಡವನ್ನು ನಾಯಕನಾಗಿ ಸಮತೋಲನವಾಗಿ ಮುನ್ನಡೆಸುವುದು ಮತ್ತು ಮೈದಾನದಲ್ಲಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವುದು ಸವಾಲಿಗಿದೆ.

Story first published: Thursday, June 18, 2026, 18:11 [IST]
Other articles published on Jun 18, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+