ಕೊರೊನಾ ವೈರಸ್‌ಗೆ ತುತ್ತಾದ ಕತಾರ್ ವಿಶ್ವಕಪ್ ಫುಟ್ಬಾಲ್ ರಾಯಭಾರಿ

2022ರ ಕತಾರ್‌ನಲ್ಲಿ ನಡೆಯಲಿರುವ ವಿಶ್ವಕಪ್ ಫುಟ್ಬಾಲ್‌ನ ರಾಯಭಾರಿ ಆದೆಲ್ ಖಾಮಿಸ್ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಕೋವೊಡ್ 19 ಪರೀಕ್ಷೆಯಲ್ಲಿ ಆದೆಲ್ ಖಾಮಿಸ್ ಪಾಸಿಟಿವ್ ಬಂದಿದೆ ಎಂದು ಆಯೋಜಕರು ಗುರುವಾರ ಮಾಹಿತಿಯನ್ನು ನೀಡಿದ್ದಾರೆ.
ಕತಾರ್‌ನ ನಿವೃತ್ತ ಮಿಡ್ ಫೀಲ್ಡರ್ ಆಗಿರುವ ಆದೆಲ್ ಖಾಸಿಮ್‌ಗೆ 54 ವರ್ಷದವರಾಗಿದ್ದಾರೆ. "ದುದೃಷ್ಟವಶಾತ್ ಆದೆಲ್ ಖಾಸಿಮ್ ಅವರು ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಶೀಘ್ರದಲ್ಲಿ ಅವರು ಚೇತರಿಸಿಕೊಳ್ಳಲಿ ಎಂದು 2022ರ ಸರ್ವೋಚ್ಛ ಆಯೋಜನಾ ಸಮಿತಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದೆ. ಆದೆಲ್ ಖಾಸಿಮ್ 2022ರ ಫುಟ್ಬಾಲ್ ವಿಶ್ವಕಪ್‌ನ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಫುಟ್ಬಾಲ್ ವಿಶ್ವಕಪ್‌ಗೆ ಸಿದ್ಧಗೊಳ್ಳುತ್ತಿರುವ 3 ಸ್ಟೇಡಿಯಮ್‌ಗಳಲ್ಲಿ ಕರ್ತವ್ಯದಲ್ಲಿರುವ ಹಲವಾರು ಮಂದಿ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಆಯೋಜಕರು ಇತ್ತೀಚಿನ ಮಾಹಿತಿಯನ್ನು ಆಯೋಜಕರು ನೀಡಿಲ್ಲ. ಏಪ್ರಿಲ್ 17ರ ನಂತರದ ಮಾಹಿತಿ ಲಭ್ಯವಿಲ್ಲ.
ಕತಾರ್‌ನಲ್ಲಿ 13,409 ಕೊರೊನಾ ವೈರಸ್ ಪ್ರಕರಣಗಳು ಖಚಿತವಾಗಿದ್ದು 1372 ಜನರು ಚೇತರಿಸಿಕೊಂಡಿದ್ದಾರೆ. ಹತ್ತು ಮಂದಿ ಕತಾರ್‌ನಲ್ಲಿ ಕೊರೊನಾ ವೈರಸ್‌ಗೆ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಮಧ್ಯ ಪ್ರಾಚ್ಯ ದೇಶಗಳಲ್ಲಿ ಕತಾರ್ ಫಿಫಾ ವಿಶ್ವಕಪ್‌ಅನ್ನು ಆಯೋಜನೆ ಮಾಡುತ್ತಿರುವ ಮೊದಲ ರಾಷ್ಟ್ರವಾಗಿದೆ. 2022ರ ನವೆಂಬರ್ 21 ರಿಂದ ಡಿಸೆಂಬರ್ 22ರ ವರೆಗೆ ಈ ವಿಶ್ವಕಪ್ ಟೂರ್ನಿ ನಡೆಯಲಿದೆ. ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಲ್ಲಿ ನಡೆಯುವ ಈ ಫುಟ್ಬಾಲ್ ವಿಶ್ವಕಪ್ ಕತಾರ್‌ಗಾಗಿ ತನ್ನ ಸಂಪ್ರದಾಯವನ್ನು ಬದಲಿಸಿಕೊಂಡು ಚಳಿಗಾಲಕ್ಕೆ ಮುಂದೂಡಿದೆ. ಜೂನ್ ಜುಲೈ ತಿಂಗಳಲ್ಲಿ ಭಾರಿ ಬಿಸಿಲಿನ ಧಗೆ ಇರುವ ಕಾರಣ ಈ ತೀರ್ಮಾನವನ್ಉ ತೆಗೆದುಕೊಳ್ಳಲಾಗಿತ್ತು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications