'ಆರ್ಸೆನಲ್' ಮುಖ್ಯಸ್ಥರಾಗಿ ಗಝಿಡಿಸ್ ಸ್ಥಾನಕ್ಕೆ ರೌಲ್ ಸಾನ್ಲೆಹಿ ಆಯ್ಕೆ

ಬೆಂಗಳೂರು, ಸೆಪ್ಟೆಂಬರ್ 18: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಪ್ರೀಮಿಯರ್ ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿನ ಪ್ರಮುಖ ತಂಡವಾದ ಆರ್ಸೆನಲ್ ಫುಟ್ಬಾಲ್ ಕ್ಲಬ್ ನ ಮುಖ್ಯಸ್ಥರಾಗಿ ರೌಲ್ ಸಾನ್ಲೆಹಿ ಆಯ್ಕೆಯಾಗಿದ್ದಾರೆ. ಸಾನ್ಲೆಹಿ ಅವರು ಈ ಹಿಂದೆ ಬಾರ್ಸಿಲೋನ ತಂಡದ ಮುಖ್ಯಸ್ಥರಾಗಿದ್ದವರು.
ಆರ್ಸೆನಲ್ ಕ್ಲಬ್ ಮುಖ್ಯಸ್ಥರಾಗಿದ್ದ ಇವಾನ್ ಗಝಿಡಿಸ್ ಅವರು ಕ್ಲಬ್ ತೊರೆದು ಇಟಲಿ ತಂಡವಾದ ಎಸಿ ಮಿಲನ್ ಸೇರಿಕೊಂಡಿದ್ದರಿಂದ ಈ ಬೆಳವಣಿಗೆಯಾಗಿದೆ. ಗಝಿಡಿಸ್ ಅವರು ಸುಮಾರು 10 ವರ್ಷಗಳ ಕಾಲ ಆರ್ಸೆನಲ್ ತಂಡದ ಜವಾಬ್ದಾರಿ ಹೊತ್ತಿದ್ದರು.
ಸಾನ್ಲೆಹಿ ಅವರು ಕ್ಲಬ್ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರೆ, ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ವಿನಯ್ ವೆಂಕಟೇಶಮ್ ಅವರು ಆಯ್ಕೆಗೊಂಡಿದ್ದಾರೆ. ವಿನಯ್ ಅವರು ಆರ್ಸೆನಲ್ ತಂಡವನ್ನು 2010ರಲ್ಲೇ ಸೇರಿಕೊಂಡಿದ್ದರು. ಸದ್ಯ ವೆಂಕಟೇಶಮ್ ಅವರು ಆರ್ಸೆನಲ್ ತಂಡದ ಮುಖ್ಯ ವ್ಯವಹಾರಿಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಸುಮಾರು 16 ವರ್ಷಗಳವರೆಗೆ ಬಾರ್ಸಿಲೋನ ತಂಡದ ಜವಾಬ್ದಾರಿ ನಿರ್ವಹಿಸಿದ ಅನುಭವ ಸಾನ್ಲೆಹಿ ಅವರಿಗಿದೆ. ಕ್ಲಬ್ ಜವಾಬ್ದಾರಿ ವಹಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಆರ್ಸೆನಲ್, 'ಸಾನ್ಲೆಹಿ ಅವರು ನಮ್ಮೆಲ್ಲಾ ಚಟುವಟಿಕೆಗಳ ಮುಂದಾಳತ್ವ ವಹಿಸಲಿದ್ದಾರೆ. ಹಾಗೆ ವೆಂಕಟೇಶಮ್ ಅವರು ಅಂತಾರಾಷ್ಟ್ರೀಯ ವ್ಯವಹಾರದ ಜವಾಬ್ದಾರಿ ಹೊರಲಿದ್ದಾರೆ' ಎಂದು ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications