ರೊನಾಲ್ಡೊ ಕಮಾಲ್, ಕ್ಲಬ್ ವಿಶ್ವಕಪ್ ಗೆದ್ದ ಮ್ಯಾಡ್ರಿಡ್
ಯೊಕೊಹಾಮ(ಜಪಾನ್), ಡಿಸೆಂಬರ್ 19: ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಅವರ 'ಹ್ಯಾಟ್ರಿಕ್' ಗೋಲುಗಳ ನೆರವಿನಿಂದ ಸ್ಪೇನಿನ ರಿಯಲ್ ಮ್ಯಾಡ್ರಿಡ್ ತಂಡ ಈ ಬಾರಿಯ ಕ್ಲಬ್ ವಿಶ್ವಕಪ್ ಗೆದ್ದುಕೊಂಡಿದೆ.
ಭಾನುವಾರದಂದು ಇಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಆತಿಥೇಯ ಕಾಶಿಮಾ ಅಂಟ್ಲೆರ್ಸ್ ತಂಡದ ವಿರುದ್ಧ ಹೆಚ್ಚುವರಿ ಸಮಯದಲ್ಲಿ 2-4 ಗೋಲುಗಳ ಅಂತರದಲ್ಲಿ ಮ್ಯಾಡ್ರಿಡ್ ಗೆಲುವು ಸಾಧಿಸಿತು.
ನಿಗದಿತ 90 ನಿಮಿಷಗಳ ಆಟದಲ್ಲಿ ಉಭಯ ತಂಡಗಳು 2-2 ರಿಂದ ಸಮಬಲ ಸಾಧಿಸಿ, ಕುತೂಹಲ ಹೆಚ್ಚಿಸಿದ್ದವು, ಹೆಚ್ಚುವರಿ ಸಮಯದಲ್ಲಿ (98, 102 ನಿಮಿಷ) ಗೋಲು ಬಾರಿಸಿದ ರೊನಾಲ್ಡೊ ಕಪ್ ಎತ್ತಿ ಮುತ್ತಿಟ್ಟರು.

ರೊನಾಲ್ಡೊ ಅವರು ಮ್ಯಾಡ್ರಿಡ್‌ನ ಪರ 40ನೇ ಬಾರಿಗೆ ಹ್ಯಾಟ್ರಿಕ್ ಗೋಲು ಬಾರಿಸಿದರು. ಮ್ಯಾಡ್ರಿಡ್‌ನ ಪರ ಲೂಕಾ ಮ್ಯಾಡ್ರಿಕ್ 9ನೇ ನಿಮಿಷದಲ್ಲಿ 1-0 ಮುನ್ನಡೆ ಒದಗಿಸಿಕೊಟ್ಟರು. ನಂತರ ರೊನಾಲ್ಡೊ ಅವರದ್ದೇ ಆಟವಾಯಿತು.
ಚಾಂಪಿಯನ್ಸ್ ಲೀಗ್, ಯುರೋಪಿಯನ್ ಚಾಂಪಿಯನ್ ಹಾಗೂ 2016ರ ಬ್ಯಾಲನ್ ಡಿ'ಒರ್ ಪ್ರಶಸ್ತಿಯನ್ನು ಜಯಿಸಿದ ಪೋರ್ಚುಗಲ್ ಆಟಗಾರ ರೊನಾಲ್ಡೊ ಅವರು ಈ ವರ್ಷ ಕ್ಲಬ್ ಫುಟ್ಬಾಲ್ ವಿಶ್ವಕಪ್ ಕೂಡಾ ತಮ್ಮದಾಗಿಸಿಕೊಂಡಿದ್ದಾರೆ. ಸ್ಪೇನ್‌ನ ದೈತ್ಯ ಕ್ಲಬ್ 3 ವರ್ಷಗಳಲ್ಲಿ ಎರಡನೆ ಬಾರಿ ಕ್ಲಬ್ ವಿಶ್ವಕಪ್ ಹಾಗೂ ಒಟ್ಟಾರೆ 5ನೇ ಬಾರಿ ಈ ಪ್ರಶಸ್ತಿ ಗೆದ್ದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications