Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೋನಾಲ್ಡೋಗೆ 4 ಸಾವಿರ ಡಾಲರ್ ದಂಡ, 5 ಪಂದ್ಯ ನಿಷೇಧ

ಬಾರ್ಸಿಲೋನಾ, ಆಗಸ್ಟ್ 14:ಸ್ಪಾನಿಷ್ ಸೂಪರ್ ಕಪ್‌ ಪಂದ್ಯದಲ್ಲಿ ಒರಟಾಟವಾಡಿದ ರಿಯಲ್ ಮ್ಯಾಡ್ರಿಡ್ ನ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೋಗೆ ಐದು ಪಂದ್ಯಗಳ ನಿಷೇಧ ಹಾಗೂ ಭಾರಿ ದಂಡ ಹಾಕಲಾಗಿದೆ ಎಂದು ಸ್ಪಾನೀಶ್ ಫುಟ್ಬಾಲ್ ಫೆಡರೇಶನ್(ಆರ್‌ಎಫ್‌ಇಎಫ್) ಸೋಮವಾರ ತಿಳಿಸಿದೆ.

ಬಾರ್ಸಿಲೋನಾ ವಿರುದ್ಧದ ಪಂದ್ಯದಲ್ಲಿ ರೊನಾಲ್ಡೋ ಅವರು ತಾವು ಆಡಿದ 24 ನಿಮಿಷಗಳಲ್ಲೇ 2 ಬಾರಿ ಹಳದಿ ಕಾರ್ಡ್ ಪಡೆದರು. ರೆಡ್ ಕಾರ್ಡ್ ತೋರಿಸಿದ ರೆಫರಿಯನ್ನು ತಳ್ಳಿದರು. ಆದರೆ, ಭರ್ಜರಿ ಗೋಲು ಬಾರಿಸಿದ್ದಲ್ಲದೆ, ಜರ್ಸಿ ಕಳಚಿ ಮತ್ತೆ ನಿಯಮ ಮುರಿದರು.

Real Madrid Ronaldo Earns Five-Match Ban Plus Fine

ಕ್ರಿಸ್ಟಿಯಾನೊ ರೊನಾಲ್ಡೊಗೆ 3,805 ಯುರೋ(4,483 ಯುಎಸ್ ಡಾಲರ್)ದಂಡ,ರೆಫರಿಯನ್ನು ತಳ್ಳಿದ್ದಕ್ಕೆ ನಾಲ್ಕು ಪಂದ್ಯಗಳಿಂದ ಅಮಾನತು ಹಾಗೂ ರೆಡ್ ಕಾರ್ಡ್ ಪಡೆದಿರುವುದಕ್ಕೆ ಮತ್ತೊಂದು ಪಂದ್ಯದಿಂದ ನಿಷೇಧಕ್ಕೊಳಗಾಗಿದ್ದಾರೆ ಎಂದು ಆರ್‌ಎಫ್‌ಇಎಫ್ ತಿಳಿಸಿದೆ.

ಆದರೆ, ಫುಟ್ಬಾಲ್ ಇತಿಹಾಸದ ಪುಟ ತಿರುವಿ ಹಾಕಿದರೆ, ರೊನಾಲ್ಡೋಗೆ ನೀಡಿದ ದಂಡ, ಶಿಕ್ಷೆ ಕಡಿಮೆ ಎನ್ನಬಹುದು. 1995ರಲ್ಲಿ ಎರಿಕ್ ಕಂಟೋನಾ(ಮ್ಯಾಂಚೆಸ್ಟರ್ ಯುನೈಟೆಡ್) ಗೆ 9 ತಿಂಗಳು ಶಿಕ್ಷೆ ಸಿಕ್ಕಿತ್ತು.

ರೆಫ್ರಿ ತಳ್ಳಿದ್ದ ಪಾಲೋ ಡಿ ಕನಿಯೋಗೆ 11 ಪಂದ್ಯಗಳ ನಿಷೇಧ ಹೇರಲಾಗಿತ್ತು. ಉರುಗ್ವೆಯ ಲೂಯಿಸ್ ಸ್ವಾರೇಜ್ ಗೆ ಒಮ್ಮೆ 8 ಮತ್ತೊಮ್ಮೆ 10 ಪಂದ್ಯಗಳ ನಿಷೇಧ, ಇನ್ನೊಮ್ಮೆ 4 ತಿಂಗಳುಗಳ ನಿಷೇಧದ ಶಿಕ್ಷೆ ಸಿಕ್ಕಿತ್ತು. ಮ್ಯಾಂಚೆಸ್ಟರ್ ಸಿಟಿ ಮಾಜಿ ಆಟಗಾರ ಜೋ ಬಾರ್ಟನ್ ಗೆ 12 ಪಂದ್ಯಗಳ ನಿರ್ಬಂಧ ಹೇರಲಾಗಿತ್ತು.

Story first published: Wednesday, January 3, 2018, 10:06 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+