For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ರಿಯಲ್ ಮ್ಯಾಡ್ರಿಡ್ ಸ್ಟ್ರೈಕರ್ ಲುಕಾ ಜೊವಿಕ್‌ಗೆ ಜೈಲು ಶಿಕ್ಷೆ

Real Madrid striker Luka Jovic faces prison for violating COVID-19 isolation

ಮ್ಯಾಡ್ರಿಡ್: ಸರ್ಬಿಯಾದಲ್ಲಿ ಕೊರೊನಾವೈರಸ್ ಐಸೊಲೇಶನ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ರಿಯಲ್ ಮ್ಯಾಡ್ರಿಡ್ ಸ್ಟ್ರೈಕರ್ ಲುಕಾ ಜೊವಿಕ್‌ಗೆ ಅಲ್ಲಿನ ಸರ್ಕಾರ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಕ್ವಾರಂಟೈನ್ ನಿಯಮ ಮೀರಿ ಓಡಾಡಿದ್ದಕ್ಕಾಗಿ ಜೊವಿಕ್ ಶಿಕ್ಷೆಗೀಡಾಗಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ಲುಕಾ ಜೊವಿಕ್ ಅವರು ತನ್ನ ತವರಾದ ಸರ್ಬಿಯಾಕ್ಕೆ ಸ್ಪೇನ್‌ನಿಂದ ಬಂದಿದ್ದರು. ಅಷ್ಟೇ ಅಲ್ಲ ಬೆಲ್ಗ್ರೇಡ್‌ನ ರಸ್ತೆಗಳಲ್ಲಿ ಓಡಾಡಿದ್ದರು. ಜೊತೆಗೆ ತನ್ನ ಗೆಳತಿಯ ಬರ್ತ್‌ ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಅವರಿಗೆ ಆಗ 14 ದಿನಗಳ ಕ್ವಾರಂಟೈನ್ ವಿಧಿಸಲಾಗುತ್ತು. ಅದನ್ನು ಜೊವಿಕ್‌ ಉಲ್ಲಂಘಿಸಿದ್ದರು.

ನಿಯಮ ಉಲ್ಲಂಘಿಸಿ ತಪ್ಪೆಸಗಿದ್ದಕ್ಕಾಗಿ ಲುಕಾ ಜೊವಿಕ್‌ಗೆ 30,000 ಯೂರೋಸ್ (2,563,515 ರೂ.) ದಂಡ ಕಟ್ಟಲು ಸೂಚಿಸಲಾಗಿತ್ತು. ಇಷ್ಟು ದುಬಾರಿ ದಂಡ ಕಟ್ಟಲು ಜೊವಿಕ್‌ ನಿರಾಕರಿಸಿದ್ದಾರೆ. ಹೀಗಾಗಿ ಅವರನ್ನು ಕೋರ್ಟ್‌ಗೆ ಎಳೆದೊಯ್ಯಲಾಗಿದೆ.

ದಂಡ ಕಟ್ಟದ ತಪ್ಪಿಗೆ ಲುಕಾ 6 ತಿಂಗಳ ಜೈಲು ಶಿಕ್ಷೆ ಅನುಭವಿಸಲು ಸೂಚಿಸಲಾಗಿದೆ. ಆದರೆ 22ರ ಹರೆಯದ ಲುಕಾ ತನಗೆ ಐಸೊಲೇಶನ್ ಬಗ್ಗೆ ಮಾಹಿತಿಯೇ ನೀಡಿರಲಿಲ್ಲ ಎಂದಿದ್ದಾರೆ.

Story first published: Friday, October 23, 2020, 22:23 [IST]
Other articles published on Oct 23, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+