Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Lionel Messi: ಮೆಸ್ಸಿ ನೇತೃತ್ವದ ಅರ್ಜೆಂಟಿನಾ ವಿರುದ್ಧದ ಆಡಲು ಒಪ್ಪಿಗೆ ನೀಡದ ಭಾರತ: ಇಲ್ಲಿದೆ ಕಾರಣ

ಹಾಲಿ ವಿಶ್ವಕಪ್ ಚಾಂಪಿಯನ್ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡದ ವಿರುದ್ಧ ಸ್ನೇಹಪೂರ್ವಕ ಪಂದ್ಯವನ್ನಾಡುವ ಅವಕಾಶವನ್ನು ಭಾರತ ತಿರಸ್ಕರಿಸಿದೆ. ಈ ಮೂಲಕ ಭಾರತದಲ್ಲಿರುವ ಲಕ್ಷಾಂತರ ಲಿಯೊನೆಲ್ ಮೆಸ್ಸಿ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಅರ್ಜೆಂಟಿನಾ ಫುಟ್ಬಾಲ್ ಆಡಳಿತ ಮಂಡಳಿ ಭಾರತದ ಆಲ್‌ ಇಂಡಿಯಾ ಫುಟ್ಬಾಲ್ ಫೆಡರೇಷನ್(AIFF) ಮುಂದೆ ಈ ಆಫರ್ ಇಟ್ಟಿತ್ತು. ಆದರೆ ಇದನ್ನು AIFF ತಿರಸ್ಕರಿಸಿದೆ ಎಂದು ವರದಿಯಾಗಿದೆ.

ಕಳೆದ ವರ್ಷ ಕತಾರ್‌ನಲ್ಲಿ ನಡೆದ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಮೂಲಕ ಸುದೀರ್ಘ ಫುಟ್ಬಾಲ್ ಇತಿಹಾಸದಲ್ಲಿ ಮೂರನೇ ಬಾರಿಗೆ ವಿಶ್ವಕೊ್ ಗೆದ್ದ ಸಾಧನೆ ಮಾಡಿತ್ತು ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡ. ಈ ಟೂರ್ನಿಯಲ್ಲಿ ಅರ್ಜೆಂಟಿನಾ ತಂಡಕ್ಕೆ ಭಾರೀ ದೊಡ್ಡ ಪ್ರಮಾಣದಲ್ಲಿ ದಕ್ಷಿಣ ಏಷ್ಯಾದಿಂದ ಭಾರೀ ಬೆಂಬಲ ದೊರೆತಿತ್ತು. ಅದರಲ್ಲೂ ವಿಶೇಷವಾಗಿ ಭಾರತೀಯ ಅಭಿಮಾನಿಗಳು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿದ್ದರು. ಇದೇ ಹಿನ್ನೆಲೆಯಲ್ಲಿ ಅರ್ಜಂಟಿನಾ ತಂಡ ಭಾರತದ ನೆಲದಲ್ಲಿ ಸ್ನೇಹಪೂರ್ವಕ ಪಂದ್ಯವನ್ನು ಆಡುವ ನಿರ್ಧಾರ ಮಾಡಿತ್ತು.

Argentina football team

ಜೂನ್ ತಿಂಗಳಿನ 12 ಮತ್ತು 20ರಂದು ಎರಡು ಫ್ರೆಂಡ್ಲಿ ಪಂದ್ಯಗಳನ್ನಾಡಲು ಅರ್ಜೆಂಟಿನಾ ತಂಡ ಬಯಸಿತ್ತು ಎಂದು ವರದಿಯಾಗಿದೆ. ಆದರೆ ಮೆಸ್ಸಿ ನೇತೃತ್ವದ ಅರ್ಜೆಂಜಿನಾ ತಂಡದ ವಿರುದ್ಧದ ಈ ಪಂದ್ಯಗಳ ಆಯೋಜನೆಗೆ ಭಾರೀ ದೊಡ್ಡ ಮೊತ್ತದ ಬಜೆಟ್‌ನ ಅಗತ್ಯವಿರುತ್ತು. ಈ ಕಾರಣದಿಂದಾಗಿ ಅರ್ಜೆಂಟಿನಾ ಫುಟ್ಬಾಲ್ ಅಸೊಸಿಯೇಶನ್ ಮಾಡಿದ ಈ ಮನವಿಯನ್ನು ಆಲ್‌ ಇಂಡಿಯಾ ಫುಟ್ಬಾಲ್ ಫೆಡರೇಶನ್ ತಿರಸ್ಕರಿಸಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಮೆಸ್ಸಿ ತಂಡ ಈ ಪಂದ್ಯಗಳಲ್ಲಿ ಭಾಗವಹಿಸಲು 4-5 ಮಿಲಿಯನ್ ಡಾಲರ್(ಸುಮಾರು 32-40 ಕೋಟಿ ರೂಪಾಯಿ) ಮೊತ್ತದ ಬೇಡಿಕೆಯನ್ನಿಟ್ಟಿತ್ತು ಎನ್ನಲಾಗಿದೆ.

ಭಾರತ ಹಾಗೂ ಬಾಂಗ್ಲಾದೇಶದ ವಿರುದ್ಧ ಜೂನ್‌ನಲ್ಲಿ ಆಡಲು ಟರ್ಜೆಂಟಿನಾ ಬಯಸಿತ್ತು. ಆದರೆ ಎರಡು ದೇಶಗಳು ಕೂಡ ಕಡಿಮೆ ಅವಧಿಯಲ್ಲಿ ದೊಡ್ಡ ಮೊತ್ತದ ನಿಧಿ ಸಂಗ್ರಹಿಸುವುದು ಅಸಾಧ್ಯ ಎಂಬ ಕಾರಣಕ್ಕೆ ಈ ಮನವಿಯನ್ನು ತಿಸ್ಕರಿಸಿದೆ.

ಹೀಗಾಗಿ ಅರ್ಜೆಂಟಿನಾ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧ ಬಿಜಿಂಗ್‌ನಲ್ಲಿ ಸ್ನೇಹಪೂರ್ವಕ ಪಂದ್ಯದಲ್ಲಿ ಆಡಿತ್ತು. ಬೀಜಿಂಗ್‌ನಲ್ಲಿ 55,000 ಪ್ರೇಕ್ಷಕರ ಮಧ್ಯೆ ನಡೆದ ಈ ಪಂದ್ಯದಲ್ಲಿ ಅರ್ಜೆಂಟಿನಾ ತಂಡ 2-0 ಅಂತರದಿಂದ ಗೆಲುವು ಸಾಧಿಸಿದ್ದು ಈ ಪಂದ್ಯದಲ್ಲಿ ಮಸ್ಸಿ ವೃತ್ತಿ ಜೀವನದಲ್ಲೇ ಅತ್ಯಂತ ವೇಗದ ಗೋಲು ಬಾರಿಸಿದರು. ಇನ್ನು ಎರಡನೇ ಪಂದ್ಯವನ್ನು ಇಂಡೋನೇಷ್ಯಾ ವಿರುದ್ಧ ಕಳೆದ ಭಾನುವಾರ ಆಡಿದ್ದು ಆ ಪಂದ್ಯವನ್ನು ಕೂಡ 2-0 ಅಂತರದಿಂದ ಗೆದ್ದುಕೊಂಡಿತ್ತು.

Story first published: Tuesday, June 20, 2023, 14:34 [IST]
Other articles published on Jun 20, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+