Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

François Letexier: ಪಂದ್ಯ ಆಡಿದ್ದು ಅರ್ಜೆಂಟೀನಾ, ಈಜಿಪ್ಟ್‌; ಪಂದ್ಯ ಶ್ರೇಷ್ಠ ಮಾತ್ರ ಫ್ರಾನ್ಸ್‌ನ ರೆಫ್ರಿಗಂತೆ

ಫಿಫಾ ವಿಶ್ವಕಪ್‌ ರೋಚಕ ಘಟ್ಟದತ್ತ ಮುಖಮಾಡಿದೆ. ದಿನವೂ ನಾಕೌಟ್‌ ಪಂದ್ಯಗಳು ನಡೆಯುತ್ತಿವೆ. ಸೋತ ತಂಡ ಮನೆಯ ಹಾದಿ ಹಿಡಿದರೆ, ಗೆದ್ದ ತಂಡ ಮುಂದಿನ ಹಂತ ಪ್ರವೇಶಿಸಲಿದೆ. ಬುಧವಾರ ಅಟ್ಲಾಂಟಾ ಕ್ರೀಡಾಂಗಣದಲ್ಲಿ ಅರ್ಜೆಂಟೀನಾ ಹಾಗೂ ಈಜಿಪ್ಟ್‌ ತಂಡಗಳು ರೌಂಡ್ ಆಫ್‌ 16 ಪಂದ್ಯದಲ್ಲಿ ಕಣಕ್ಕೆ ಇಳಿದವು. ಈ ಪಂದ್ಯದಲ್ಲಿ ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಈಜಿಪ್ಟ್‌, ಹಾಲಿ ಚಾಂಪಿಯನ್ನರಿಗೆ ಶಾಕ್ ನೀಡಬಹುದು ಎಂಬ ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಆದರೆ ಎಲ್ಲ ಲೆಕ್ಕಾಚಾರ ಉಲ್ಟಾ ಆಗಿದ್ದು, ಕೊನೆಯ ಕ್ಷಣದಲ್ಲಿ ಅರ್ಜೆಂಟೀನಾ ಅಬ್ಬರಿಸಿದೆ.

ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಈಜಿಪ್ಟ್‌, ಅರ್ಜೆಂಟೀನಾಗೆ ಶಾಕ್ ನೀಡಿ 2-0 ಮುನ್ನಡೆ ಸಾಧಿಸಿತ್ತು. ಆದರೆ ಕೊನೆಯ 11 ನಿಮಿಷಗಳಲ್ಲಿ ಅರ್ಜೆಂಟೀನಾ ಅಬ್ಬರಿಸಿ 3-2 ಅಂತರದಲ್ಲಿ ರೋಚಕ ಕಂಬ್ಯಾಕ್ ಮಾಡಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ರೆಫ್ರಿ ಕಾರ್ಯದ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ.

Fran ois Letexier

ಅರ್ಜೆಂಟೀನಾ ಹಾಗೂ ಈಜಿಪ್ಟ್‌ ನಡುವಣ ಪಂದ್ಯದಲ್ಲಿ ರೆಫ್ರಿಯಾಗಿ ಫ್ರಾನ್ಸ್‌ನ ಫ್ರಾಂಕೋಯಿಸ್ ಲೆಟೆಕ್ಸಿಯರ್ (François Letexier) ಕಾರ್ಯನಿರ್ವಹಿಸಿದ್ದರು. ಈ ವೇಳೆ ಇವರು ನೀಡಿದ ಕೆಲವು ತೀರ್ಪುಗಳು ಈಗ ವಿವಾದ ಹುಟ್ಟಿಸಿದೆ. ವಿಶ್ವ ಫುಟ್‌ಬಾಲ್‌ನಲ್ಲಿ ಅತ್ಯಂತ ಉತ್ತಮ ಹೆಸರನ್ನು ಹೊಂದಿರುವ ಲೆಟೆಕ್ಸಿಯರ್, ಈ ಪಂದ್ಯದ ನಂತರ ದೊಡ್ಡ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಇವರು ಈಗಾಗಲೇ ಹಲವು ಬಿಗ್‌ ಟೂರ್ನಿಗಳಲ್ಲಿ ರೆಫ್ರಿ ಆಗಿ ಕೆಲಸ ಮಾಡಿದ್ದಾರೆ.

Fran ois Letexier

ಫ್ರಾನ್ಸ್‌ನ ಫ್ರಾಂಕೋಯಿಸ್ ಲೆಟೆಕ್ಸಿಯರ್ ಯೂರೋ 2024 ರ ಫೈನಲ್ ಸೇರಿದಂತೆ ವಿಶ್ವದ ಪ್ರಮುಖ ಹೈ-ಪ್ರೊಫೈಲ್ ಫುಟ್‌ಬಾಲ್ ಪಂದ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆದರೆ ಈಜಿಪ್ಟ್‌ ಹಾಗೂ ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ ವಿಎಆರ್‌ ತೀರ್ಪಿನಿಂದ ಈಗ ಚರ್ಚೆಗೆ ಗ್ರಾಸವಾಗಿದ್ದಾರೆ. ಅಲ್ಲದೆ ಈಜಿಪ್ಟ್ ಆಟಗಾರರು, ಕೋಚ್‌ ಹಾಗೂ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪಂದ್ಯ ಶ್ರೇಷ್ಠ ರೆಫ್ರಿ

ಸಾಮಾನ್ಯವಾಗಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗುತ್ತದೆ. ಆದರೆ ಅರ್ಜೆಂಟೀನಾ ಹಾಗೂ ಈಜಿಪ್ಟ್‌ ನಡುವಣ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ರೆಫ್ರಿಗೆ ಎಂದು ಅಭಿಮಾನಿಗಳು ವ್ಯಂಗ್ಯ ಮಾಡಿದ್ದಾರೆ.

Story first published: Wednesday, July 8, 2026, 13:25 [IST]
Other articles published on Jul 8, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+