ಏಕಕಾಲಕ್ಕೆ ಇಬ್ಬಿಬ್ಬರನ್ನು ವರಿಸುವ ಸುದ್ದಿ ಸುಳ್ಳು: ರೊನಾಲ್ಡಿನೋ

ಬ್ರೆಸಿಲಿಯಾ, ಮೇ 25: ಏಕಕಾಲಕ್ಕೆ ಒಂದೇ ವೇದಿಕೆಯಲ್ಲಿ ಇಬ್ಬಿಬ್ಬರು ಗೆಳತಿಯರನ್ನು ಬ್ರೆಸಿಲ್ ಮಾಜಿ ಫುಟ್ಬಾಲಿಗ ರೊನಾಲ್ಡಿನೋ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸುಳ್ಳು ಎನ್ನಲಾಗಿದೆ. ಸ್ವತಃ ರೊನಾಲ್ಡಿನೋ ಅವರೇ ಇದೊಂದು ಸುಳ್ಳು ಸುದ್ದಿ ಎಂದಿದ್ದಾರೆ.
ಬ್ರೆಸಿಲ್ ನ ಮಾಜಿ ಸ್ಟಾರ್ ಫುಟ್ಬಾಲಿಗ ರೊನಾಲ್ಡಿನೋ ಅವರು ತನ್ನ ಇಬ್ಬಿಬ್ಬರು ಗೆಳತಿಯರನ್ನು ಏಕಕಾಲಕ್ಕೆ ವರಿಸುವುದರಲ್ಲಿದ್ದಾರೆ ಎಂದು ಅಮೆರಿಕಾ ಯೂಎಸ್ಎ ಟುಡೇ ಪತ್ರಿಕೆ ವರದಿ ಮಾಡಿತ್ತು. ಇದು ಸುಳ್ಳು ಸುದ್ದಿ ಎಂದು ರೊನಾಲ್ಡಿನೋ ತಳ್ಳಿಹಾಕಿದ್ದಾರೆ.
ಬ್ರೆಸಿಲ್ ನ ರೊನಾಲ್ಡೊ ಡೆ ಅಸಿಸ್ ಮೊರೆರಾ ಅವರು ಇಬ್ಬಿಬ್ಬರನ್ನು ಗೆಳತಿಯರನ್ನು ವರಿಸಲು ನಿರ್ಧರಿಸಿದ್ದಾರೆ. ರಿಯೋ ಡಿ ಜನೈರೋದಲ್ಲಿರುವ ರೊನಾಲ್ಡಿನೋ ನಿವಾಸದಲ್ಲಿ ಆಗಸ್ಟ್ ತಿಂಗಳಲ್ಲಿ ಮದುವೆ ನಡೆಯುವುದರಲ್ಲಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು.
ರೊನಾಲ್ಡಿನೋ ಅವರು ತನ್ನ ಪ್ರಿಯತಮೆಯರಾದ ಪ್ರಿಸಿಲ್ಲಾ ಕೊಯೆಲೊ ಮತ್ತು ಬೀಟ್ರಿಜ್ ಸೌಜಾ ಅವರನ್ನು ವಿವಾಹವಾಗುವುದಾಗಿ ಹೇಳಿಕೊಂಡಿದ್ದರು. ಅವರಿಬ್ಬರಿಗೆ ನಿಶ್ಚಿತಾರ್ಥ ಉಂಗುರವನ್ನೂ ನೀಡಿದ್ದರು. ಇದನ್ನೇ ಪತ್ರಿಕೆಯವರು ಸುದ್ದಿ ಮಾಡಿದ್ದರು.
ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ರೊನಾಲ್ಡಿನೋ, 'ಒಂದೇ ವೇದಿಕೆಯಲ್ಲಿ ಇಬ್ಬರು ಗೆಳತಿಯರನ್ನು ವರಿಸುವ ಸುದ್ದಿ ಅತಿ ದೊಡ್ಡ ಸುಳ್ಳು' ಎಂದಷ್ಟೇ ಹೇಳಿದ್ದಾರೆ.
ರಾಷ್ಟ್ರೀಯ ತಂಡವಾಗಿ ಬ್ರೆಸಿಲ್ ಅನ್ನು 97 ಬಾರಿ ಪ್ರತಿನಿಧಿಸಿರುವ ರೊನಾಲ್ಡಿನೋ 33 ಗೋಲ್ ಗಳನ್ನು ಬಾರಿಸಿದ್ದರು. 2002ರಲ್ಲಿ ಇಂಗ್ಲೆಂಡ್ ವಿರುದ್ಧ ವಿಶ್ವ ಕಪ್ ಜಯಿಸಿದ್ದ ಬ್ರೆಸಿಲ್ ತಂಡದಲ್ಲಿ ರೊನಾಲ್ಡಿನೋ ಪ್ರಮುಖರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications