ಸಿಮಿಯೋನ್ ಸಂಭ್ರಮಾಚರಣೆ ಅನುಕರಿಸಿದ್ದ ರೊನಾಲ್ಡೋಗೆ ಭಾರೀ ದಂಡ

ನವದೆಹಲಿ, ಮಾರ್ಚ್ 22: ಸ್ಟಾರ್ ಫುಟ್ಬಾಲಿಗ ಕ್ರಿಸ್ಚಿಯಾನೊ ರೊನಾಲ್ಡೋ ಅವರಿಗೆ ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಷನ್ (ಯುಇಎಫ್‌ಎ) ಗುರುವಾರ (ಮಾರ್ಚ್ 22) 20,000 ಯೂರೋಸ್ (ಸುಮಾರು 15,67,910 ರೂ.) ದಂಡ ವಿಧಿಸಿದೆ.
ಅರ್ಜೆಂಟೀನಾ ಮಾಜಿ ಆಟಗಾರ ಮತ್ತು ಮ್ಯಾನೇಜರ್ ಆಗಿದ್ದ, ಸದ್ಯ ಅಟ್ಲೆಂಟಿಕೋ ಮ್ಯಾಡ್ರಿಡ್ ಕೋಚ್ ಆಗಿರುವ ಡಿಯಾಗೋ ಸಿಮಿಯೋನ್ ಅವರನ್ನು ಅನುಕರಣೆ ಮಾಡಿದ್ದಕ್ಕಾಗಿ ರೊನಾಲ್ಡೋಗೆ ದಂಡ ವಿಧಿಸಲಾಗಿದೆ. ಯುವೆಂಟಸ್ ಪ್ರತಿನಿಧಿಸಿದ್ದ ಕ್ರಿಸ್ಚಿಯಾನೊ, ಚಾಂಪಿಯನ್ಸ್ ಲೀಗ್‌ನಲ್ಲಿ ಅಂತಿಮ 16ರ ಪಂದ್ಯ ಗೆದ್ದಾಗ ವಿಚಿತ್ರ ವರ್ತನೆ ತೋರಿದ್ದರು.
34ರ ಹರೆಯದ ರೊನಾಲ್ಡೋ ಮಾರ್ಚ್ 13ರಂದು ನಡೆದ ಪಂದ್ಯದಲ್ಲಿ ಸೆಕೆಂಡ್ ಲೆಗ್ ಹ್ಯಾಟ್ರಿಕ್ ಗೋಲ್ ಬಾರಿಸಿದ್ದರು. ಹೀಗಾಗಿ ಪಂದ್ಯದಲ್ಲಿ ಅಟ್ಲೆಂಟಿಕೋ ಮ್ಯಾಡ್ರಿಡ್ ವಿರುದ್ಧ ಯುವೆಂಟಸ್ 3-0ಯ ಗೆಲುವು ದಾಖಲಿಸಿತ್ತು. ಆಗ ರೊನಾಲ್ಡೋ ಸಿಮಿಯೋನ್ ಅವರನ್ನು ನಕಲಿ ಮಾಡಿದ್ದರು. ರೊನಾಲ್ಡೋ ಈ ಹದ್ದುಮೀರಿದ ವರ್ತನೆಗೆ ಫುಟ್ಬಾಲ್ ವಲಯದಲ್ಲಿ ಆಕ್ರೋಶವೂ ವ್ಯಕ್ತವಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications