Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಿಯಲ್ ತೊರೆದು ಜುವೆಂಟಸ್ ಸೇರಲು ರೊನಾಲ್ಡೋಗೆ ಆಫರ್!

ಮ್ಯಾಡ್ರಿಡ್ ತೊರೆದು ಜುವೆಂಟಸ್ ಸೇರಲು ರೊನಾಲ್ಡೋಗೆ ಆಫರ್! | Oneindia Kannada
Ronaldo Has Received Offer to Sign for Juventus: Source

ಮ್ಯಾಡ್ರಿಡ್, ಜು. 4: ರಿಯಲ್ ಮ್ಯಾಡ್ರಿಡ್ ತೊರೆದು ತಮ್ಮ ತಂಡವನ್ನು ಸೇರಿಕೊಳ್ಳುವಂತೆ ಸ್ಟಾರ್ ಫುಟ್ಬಾಲಿಗ ಕ್ರಿಸ್ಚಿಯಾನೊ ರೊನಾಲ್ಡೋಗೆ ಇಟಾಲಿಯನ್ ಚಾಂಪಿಯನ್ ಜುವೆಂಟಸ್ ಆಫರ್ ಮಾಡಿದೆ. ಹೀಗೆಂದು ರೊನಾಲ್ಡೋ ಅವರ ತೀರಾ ಆಪ್ತ ಮೂಲವೊಂದು ಬುಧವಾರ ರಾಯಿಟರ್ಸ್ ಗೆ ತಿಳಿಸಿದೆ.

80 ಮಿಲಿಯನ್ ಪೌಂಡ್ಸ್ ವಿಶ್ವ ದಾಖಲೆ ಬೆಲೆಗೆ ರೊನಾಲ್ಡೋ 2008ರಂದು ಮ್ಯಾನ್ಚೆಸ್ಟರ್ ಯುನೈಟೆಡ್ ನಿಂದ ರಿಯಲ್ ಮ್ಯಾಡ್ರಿಡ್ ಗೆ ಸೇರಿಕೊಂಡಿದ್ದರು. ಸ್ಪ್ಯಾನಿಶ್ ಕ್ಲಬ್ ರಿಯಲ್ ಮ್ಯಾಡ್ರಿಡ್ ಪ್ರತಿನಿಧಿಸಿ ಎಲ್ಲಾ ಪಂದ್ಯಗಳು ಸೇರಿ ಒಟ್ಟು 451 ಗೋಲ್ ದಾಖಲೆಗಳನ್ನು ಹೊಂದಿರುವ ರೊನಾಲ್ಡೋ ಎರಡು 'ಲಾ ಲಿಗಾ' ಮತ್ತು ನಾಲ್ಕು 'ಚಾಂಪಿಯನ್ಸ್ ಲೀಗ್ ಟ್ರೋಫಿ' ಜಯಿಸಿರುವ ಹೆಗ್ಗಳಿಕೆ ಪಾತ್ರರಾಗಿದ್ದರು.

ಐದು ಬಾರಿ ವರ್ಷದ ವಿಶ್ವದ ಆಟಗಾರನಾಗಿಯೂ ಗುರುತಿಸಿಕೊಂಡಿರುವ ರೊನಾಲ್ಡೋ ರಿಯಲ್ ತಂಡದಲ್ಲಿದ್ದು, ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದರು. ಈ ನಡುವೆ ರಿಯಲ್ ಮ್ಯಾಡ್ರಿಡ್ ಕೂಡ ರೋನಾಲ್ಡೋ ತಂಡ ತೊರೆಯಲು ಬಯಸಿದ್ದಾರೆ ಎಂದು ಸಾಕಷ್ಟು ಸಾರಿ ಹೇಳಿಕೊಂಡಿತ್ತು. ಅದರಂತೆ ಈಗ ರೊನಾಲ್ಡೋ ರಿಯಲ್ ತೊರೆಯುಯುವುದು ಬಹುತೇಕ ಖಚಿತವಾದಂತಿದೆ.

ರಿಯಲ್ ಮ್ಯಾಡ್ರಿಡ್ ತಂಡ ಕಳೆದ ಮೇ 26ರಂದು ಲಿವರ್ ಪೂಲ್ ತಂಡವನ್ನು 3-1ರಿಂದ ಸೋಲಿಸಿ ಸತತ ಮೂರನೇ ಬಾರಿಗೆ ಚಾಂಪಿಯನ್ಸ್ ಲೀಗ್ ಟ್ರೋಫಿ ಜಯಿಸಿದ್ದ ವೇಳೆ ಮಾಧ್ಯಮವೊಂದಕ್ಕೆ ರೊನಾಲ್ಡೋ ರಿಯಲ್ ಮ್ಯಾಡ್ರಿಡ್ ತಂಡವನ್ನು ತೊರೆಯಲು ಈಗಾಗಲೇ ನಿರ್ಧರಿಸಿದ್ದೇನೆ ಎಂಬಂತೆ ಹೇಳಿಕೆ ನೀಡಿದ್ದರು.

ಕೊನೆಯ ಚಾಂಪಿಯನ್ಸ್ ಲೀಗ್ ಟ್ರೋಫಿ ಗೆಲುವಿನ ವೇಳೆ 'ರಿಯಲ್ ಮ್ಯಾಡ್ರಿಡ್ ಗೆ ಆಡಿದ್ದಕ್ಕಾಗಿ ತುಂಬಾ ಖುಷಿಯಾಗಿದೆ' ಎಂದು ವಿದಾಯ ರೀತಿಯಲ್ಲಿ ರೊನಾಲ್ಡೋ ಮಾತನಾಡಿದ್ದರು. ಜೊತೆಗೆ ರಿಯಲ್ ಮ್ಯಾಡ್ರಿಡ್ ನಲ್ಲಿ ಮುಂದುವರೆಯುವ ಬಗ್ಗೆ ಮುಂದಿನ ದಿನಗಳಲ್ಲಿ ನನ್ನ ಪ್ರಮುಖ ನಿರ್ಧಾರವನ್ನು ತಿಳಿಸಲಿದ್ದೇನೆ ಎಂದು ರಿಯಲ್ ವಿದಾಯದ ಮುನ್ಸೂಚನೆಯನ್ನೂ ಆ ಸಂದರ್ಭ ನೀಡಿದ್ದರು ರೊನಾಲ್ಡೊ.

Story first published: Wednesday, July 4, 2018, 20:06 [IST]
Other articles published on Jul 4, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+