ಸಾಫ್ ಕಪ್ ಟ್ರೋಫಿ: ಮಾಲ್ಡಿವ್ಸ್ ವಿರುದ್ಧ ಭಾರತಕ್ಕೆ ಸೋಲು

ಢಾಕಾ, ಸೆಪ್ಟೆಂಬರ್ 15: ಬಾಂಗ್ಲಾದೇಶದ ಢಾಕಾದ ಮೈದಾನದಲ್ಲಿ ಇಂದು ನಡೆದ ಸಾಫ್ (SAFF) ಪುಟ್ಬಾಲ್ ಕಪ್ ಫೈನಲ್‌ನಲ್ಲಿ ಏಳು ಬಾರಿ ಚಾಂಪಿಯನ್ ಭಾರತ ತಂಡವನ್ನು ಸೋಲಿಸಿದ ಮಾಲ್ಡಿವ್ಸ್ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿತು.
ಮಾಲ್ಡಿವ್ಸ್ ತಂಡವು ಭಾರತವನ್ನು 1-2 ಗೋಲುಗಳ ಅಂತರದಲ್ಲಿ ಮಣಿಸಿದೆ. ಟೂರ್ನಿಯ ಗೆಲ್ಲುವ ಫೆವರೇಟ್ ಎನಿಸಿಕೊಂಡಿದ್ದ ಭಾರತಕ್ಕೆ ಮಾಲ್ಡಿವ್ಸ್‌ನ ಯುವಕರ ತಂಡ ಶಾಕ್ ನೀಡಿದೆ.
ಸಾಫ್ ಟೂರ್ನಿ ಗೆಲ್ಲುವ ಮೂಲಕ ಮಾಲ್ಡಿವ್ಸ್ ತಂಡ ಎರಡನೇ ಬಾರಿ ಚಾಂಪಿಯನ್ ಎನಿಸಿಕೊಂಡಿದೆ. ಈ ಹಿಂದೆ 2008ರಲ್ಲಿ ಮಾಲ್ಡಿವ್ಸ್ ಸಾಫ್ ಕಪ್ ಗೆದ್ದಿತ್ತು.
ಮಾಲ್ಡಿವ್ಸ್ ಪರ 19ನೇ ನಿಮಿಷದಲ್ಲಿ ಇಬ್ರಾಹಿಂ ಮಹುದಿ ಗೋಲು ಭಾರಿಸಿದರೆ. 65ನೇ ನಿಮಿಷದಲ್ಲಿ ಅಲಿ ಫಾಸಿರ್ ಗೋಲು ಭಾರಿಸಿದರು. 0-2ರಿಂದ ಹಿಂದೆ ಉಳಿದಿದ್ದ ಭಾರತ 90ನೇ ನಿಮಿಷದಲ್ಲಿ ಸುಮಿತ್ ಫಾಸಿ ಹೊಡೆದ ಗೋಲಿನಿಂದ ಸೋಲಿನ ಅಂತರ ತಗ್ಗಿಸಿಕೊಂಡಿತು.
Story first published: Saturday, September 15, 2018, 21:04 [IST]
Other articles published on Sep 15, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications