Santhosh Trophy: 54 ವರ್ಷಗಳ ಕಾಯುವಿಕೆ ಅಂತ್ಯ: ಸಂತೋಷ್ ಟ್ರೋಫಿ ಗೆದ್ದ ಕರ್ನಾಟಕ

ಕರ್ನಾಟಕದ 54 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ಸಂತೋಷ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಮೇಘಾಲಯವನ್ನು ಮಣಿಸಿದ ಕರ್ನಾಟಕ ಸಂತೋಷ್ ಟ್ರೋಫಿಯನ್ನು ಗೆದ್ದುಕೊಂಡಿದೆ.
ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಕಿಂಗ್ ಫಹದ್ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಕರ್ನಾಟಕ ಮೇಘಾಲಯವನ್ನು 3-2 ಗೋಲುಗಳ ಅಂತರದಲ್ಲಿ ಸೋಲಿಸಿತು. ಫೈನಲ್ ಪಂದ್ಯದ ಮೊದಲಾರ್ಧದಲ್ಲೇ ಒಟ್ಟು 4 ಗೋಲುಗಳು ದಾಖಲಾದವು.
ಮೇಘಾಲಯ ಕೊನೆಯವರೆಗೂ ಹೋರಾಡಿದರೂ, ಕರ್ನಾಟಕದ ಗೆಲುವನ್ನು ತಡೆಯಲು ಸಾಧ್ಯವಾಗಲಿಲ್ಲ. ಕರ್ನಾಟಕ 1975-76ರ ಆವೃತ್ತಿಯಲ್ಲಿ ಫೈನಲ್ ತಲುಪಿದ್ದರೂ ಗೆಲ್ಲಲು ಸಾಧ್ಯವಾಗಿರಲಿಲ್ಲ, ಅದಾದ ನಂತರ ಈ ಬಾರಿ ಫೈನಲ್ ತಲುಪಿದ್ದ ಕರ್ನಾಟಕ ಯಾವುದೇ ತಪ್ಪು ಮಾಡಲಿಲ್ಲ.
ಒಂದು ಪಿನ್ ಪಾಯಿಂಟ್ ರಾಬಿನ್ ಯಾದವ್ ಫ್ರೀಕಿಕ್ ಆಟದ ಹೈಲೈಟ್ ಆಗಿದ್ದರೆ, ಸುನಿಲ್ ಕುಮಾರ್ ಮತ್ತು ಬೇಕಿ ಓರಮ್ ಗೋಲು ಗಳಿಸುವ ಮೂಲಕ ಕರ್ನಾಟಕದ ಗೆಲುವಿಗೆ ಕಾರಣವಾದರು. ಮೇಘಾಲಯ ಪರ ಶೀನ್ ಮತ್ತು ಬ್ರಲಿಂಗ್ಟನ್ ಗೋಲು ಗಳಿಸಿದರು.
ಸುನಿಲ್ ಕುಮಾರ್ ಕರ್ನಾಟಕ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು, ಮೊದಲ ಗೋಲು ಬಾರಿಸಿದ ಅವರು ಮೈದಾನದಲ್ಲಿ ಮಿಂಚು ಹರಿಸಿದರು. ದುಬೈನಲ್ಲಿ ಪಂದ್ಯ ನಡೆದರೂ ಸಾಕಷ್ಟು ಕನ್ನಡಿಗರು ಮೈದಾನದಲ್ಲಿ ತಮ್ಮ ತಂಡವನ್ನು ಬೆಂಬಲಿಸಲು ಸೇರಿದ್ದರು.

ಗೆಲುವಿನ ಗೋಲು ಹೊಡೆದ ಬೆಕಿ ಓರಮ್
ರಾಬಿನ್ ಯಾದವ್ ಪಿನ್ ಪಾಯಿಂಟ್ ಫ್ರೀಕಿಕ್ ಮೂಲಕ ಗೋಲು ಗಳಿಸುವುದರೊಂದಿಗೆ ಕರ್ನಾಟಕ 2-1 ಮುನ್ನಡೆ ಪಡೆದುಕೊಂಡಿತು. ಮೊದಲಾರ್ಧದ ಮುಕ್ತಾಯದ ವೇಳೆಗೆ ಮೇಘಾಲಯ ಮತ್ತೊಂದು ಗೋಲು ಗಳಿಸುವ ಮೂಲಕ 2-2 ಅಂತರದಲ್ಲಿ ಸಮಬಲ ಸಾಧಿಸಿತ್ತು.
ದ್ವಿತೀಯಾರ್ಧದಲ್ಲಿ ಕರ್ನಾಟಕದ ಬೆಕಿ ಓರಮ್ ಗೋಲು ಗಳಿಸುವ ಮೂಲಕ ಕರ್ನಾಟಕ 3-2 ಮುನ್ನಡೆ ಪಡೆದುಕೊಂಡಿತು. ನಂತರ ಪಂದ್ಯದ ಮುಕ್ತಾಯದವರೆಗೂ ಬಲಿಷ್ಠ ರಕ್ಷಣಾ ಕೋಟೆಯನ್ನು ಕಟ್ಟಿದ ಕರ್ನಾಟದ ಆಟಗಾರರು ಮೇಘಾಲಯದ ಗೋಲು ಗಳಿಸುವ ಯತ್ನಗಳನ್ನು ವಿಫಲಗೊಳಿಸಿದರು.

ಕರ್ನಾಟಕ, ಮೇಘಾಲಯ ಪ್ಲೇಯಿಂಗ್ ಇಲೆವೆನ್
ಕರ್ನಾಟಕ: ಸತ್ಯಜಿತ್ ಬರ್ದಲೋಯ್, ಎಂ ಸುನಿಲ್, ರಾಬಿನ್ ಯಾದವ್, ನಿಖಿಲ್ ಜಿ, ಮನೋಜ್ ಸ್ವಾಮಿ, ಎಫ್ ಲಾಲ್ರೆಮ್‌ಟ್ಲುಂಗಾ, ಕಾರ್ತಿಕ್ ಗೋವಿಂದ್, ಬೆಕಿ ಓರಮ್, ಅಭಿಷೇಕ್ ಶಂಕರ್, ಜಾಕೋಬ್ ಜಾನ್, ಶಾಜನ್ ಫ್ರಾಂಕ್ಲಿನ್.
ಮೇಘಾಲಯ: ರಜತ್ ಪಾಲ್ ಲಿಂಗ್ಡೋಹ್, ಬನ್ಸ್ಕೆಮ್ಲಾಂಗ್ ಮಾವ್ಲಾಂಗ್, ಅಲೆನ್ ಕ್ಯಾಂಪರ್ ಲಿಂಗ್ಡೋಹ್, ಡೊನಾಲ್ಡ್ ಡೈಂಗ್ಡೋಹ್, ಫಿಗೋ ಸಿಂಡೌ, ನಿಕೆಲ್ಸನ್ ಬಿನಾ, ಫುಲ್ಮೂನ್ ಮುಖಿಮ್, ವಾನ್ಬೋಕ್ಲಾಂಗ್ ಲಿಂಗ್ಖೋಯ್, ದಾವಾಂಚ್ವಾ ಕಾರ್ಲೋಸ್, ಬ್ರೋಲಿಂಗ್ಟನ್ ವಾರ್ಲಾರ್ಪಿಹ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications