Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ಜೆಮ್ಷೆಡ್ಪುರ ವಿರುದ್ಧ ನಿರಾಸೆ ಕೊನೆಗೊಳಿಸಲು ಈಸ್ಟ್ ಬೆಂಗಾಲ್ ಸಜ್ಜು

SC East Bengal put belief in turnaround against resurgent Jamshedpur

ಗೋವಾ, ಡಿಸೆಂಬರ್,9 : ಜೆಮ್ಷೆಡ್ಪುರ ವಿರುದ್ಧ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಜಯ ಗಳಿಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಖುಷಿಯ ಕ್ಷಣಗಳನ್ನು ಸೃಷ್ಟಿಸಲು ಎಸ್ ಸಿ ಈಸ್ಟ್ ಬೆಂಗಾಲ್ ಸಜ್ಜಾಗಿದೆ. ಕೋಚ್ ರಾಬಿ ಫ್ಲವರ್ ಅವರ ಪಡೆ ಇನ್ನೂ ಖಾತೆ ತೆರೆಯಬೇಕಾಗಿದೆ. ಸತತ ನಾಲ್ಕನೇ ಸೋಲುನ್ನು ತಪ್ಪಿಸಿಕೊಳ್ಳಬೇಕಾದರೆ ಅಲ್ಲಿ ಪ್ರಮಾದಗಳಿಗೆ ಯಾವುದೇ ಅವಕಾಶ ಇರಬಾರದು ಎಂದು ಇಂಗ್ಲೆಂಡಿನ ಕೋಚ್ ಹೇಳಿದ್ದಾರೆ.

"ನಮಗೆ ನಮ್ಮ ಬಗ್ಗೆ ನಂಬಿಕೆ ಇರಬೇಕು. ಜೆಎಫ್ ಸಿ ವಿರುದ್ಧ ಕಠಿಣ ಪಂದ್ಯವನ್ನು ಆಡಬೇಕಾಗಿದೆ. ನಾವು ಉತ್ತಮ ಪ್ರದರ್ಶನ ನೀಡುತ್ತಿದ್ದೇವೆ, ಸುಧಾರಣೆಯನ್ನೂ ಕಾಣುತ್ತಿದ್ದೇವೆ. ಆದರೆ ಫಲಿತಾಂಶ ನಮ್ಮ ಪರವಾಗಿ ಇಲ್ಲ." ಎಂದು ಫ್ಲವರ್ ಹೇಳಿದ್ದಾರೆ.

ಉತ್ತಮ ರೀತಿಯಲ್ಲಿ ಗೋಲು ಗಳಿಕೆಯ ವಾತಾವರಣವನ್ನು ಸೃಷ್ಟಿಸಿದರೂ, ಎಸ್‌ಸಿಇಬಿ ಇನ್ನೂ ಗೋಲಿನ ಖಾತೆ ತೆರೆದಿಲ್ಲ. ಲೀಗ್ ನಲ್ಲಿ ಶಾಟ್ ನೀಖರತೆ (12.51%)ಯಲ್ಲಿ ಅತ್ಯಂತ ಕಳಪೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಬೆಂಗಾಲ್ ಬಾಕ್ಸ್ ಒಳಗಡೆ ಕೇವಲ 17 ಶಾಟ್ ಗುರಿ ಇಟ್ಟಿದೆ, (ಇದು ಲೀಗ್ ನಲ್ಲಿಯೇ ಎರಡನೇ ಅತಿ ಕಡಿಮೆ). ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫ್ಲವರ್, "ಇದು ಯಾವಾಗಲೂ ಸ್ಟ್ರೈಕರ್ ಗಳ ಜವಾಬ್ದಾರಿ ಆಗಿರುವುದಿಲ್ಲ. ಇತರರರು ಕೂಡ ಗೋಲು ಗಳಿಸುವ ಬಗ್ಗೆ ಯೋಚಿಸಬೇಕು. ಆಟಗಾರರು ಅವಕಾಶಗಳನ್ನು ಸೃಷ್ಟಿಸುವಲ್ಲಿ ವಿಫಲವಾದಾಗ ಚಿಂತೆಯಾಗುತ್ತದೆ, ನಾವು ಗೋಲು ಗಳಿಸಲು ಅವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ," ಎಂದರು.

ನಾಲ್ಕು ಪಂದ್ಯಗಳಲ್ಲಿ ಎದುರಾಳಿ ತಂಡಕ್ಕೆ 7 ಗೋಲುಗಳನ್ನು ಗಳಿಸಲು ಅವಕಾಶ ಕಲ್ಪಿಸಿರುವ ತಂಡ ನೆರಿಜಸ್ ವಾಸ್ಕಿಸ್ (4 ಪಂದ್ಯ 7 ಗೋಲು) ಅವರಂಥ ಸ್ಟ್ರೈಕರ್ ಗಳನ್ನು ಹೊಂದಿರುವ ಜೆಮ್ಷೆಡ್ಪುರ ತಂಡವನ್ನು ನಿಯಂತ್ರಿಸಬೇಕಾಗಿದೆ. " ಪ್ರತಿಯೊಂದು ಪಂದ್ಯಕ್ಕೂ ಇರುವಂತೆ ನಾವು ಯೋಜನೆಗಳನ್ನು ರೂಪಿಸಿದ್ದೇವೆ. ಅವರನ್ನು ಗೋಲು ಗಳಿಸುವಿಕೆಯಿಂದ ತಡೆಯುವುದು ನಮ್ಮ ಉದ್ದೇಶವಾಗಬೇಕು," ಎಂದು ಹೇಳಿದರು.

ಎಟಿಕೆ ಮೂಹನ್ ಬಾಗನ್ ವಿರುದ್ಧ 2-1 ಗೋಲಿನಿಂದ ಜಯ ಗಳಿಸಿದ ನಂತರ ಜೆಮ್ಷೆಡ್ಪುರ ತಂಡದ ಮನೋಬಲ ಹೆಚ್ಚಿದೆ. ಹಿಂದಿನ ಮೂರೂ ಪಂದ್ಯಗಳಲ್ಲಿ ತಂಡ ಕ್ಲೀನ್ ಶೀಟ್ ಶಾಧನೆ ಮಾಡಿತ್ತು. ಫ್ಲವರ್ ಅವರ ಆಟದ ಸಿದ್ಧಾಂತಗಳನ್ನು ಚೆನ್ನಾಗಿ ಅರಿತಿರುವ ಓವನ್ ಕೊಯ್ಲ್, ಈಸ್ಟ್ ಬೆಂಗಾಲ್ ವಿರುದ್ಧ ಆಡುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ. "ಇದು ಅತ್ಯಂತ ಕಠಿಣ ಪಂದ್ಯ ಎನಿಸಲಿದೆ. ಎದುರಾಳಿ ತಂಡ ಎಟಿಕೆ ಎಂಬುದನ್ನು ಮರೆಯುವಂತಿಲ್ಲ. ನಾವು ಸಜ್ಜಾಗಿದ್ದೇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅವರು ಅತ್ಯಂತ ಅಪಾಯಕಾರಿ ತಂಡ," ಎಂದು ಕೊಯ್ಲ್ ಹೇಳಿದ್ದಾರೆ.

ಡಿಫೆನ್ಸ್ ವಿಭಾಗದಲ್ಲಿ ಟಿಪಿ ರೆಹನೇಶ್ ಉತ್ತಮ ರೀತಿಯಲ್ಲಿ ಮಿಂಚಿದ್ದಾರೆ. ಜೆಎಫ್ ಸಿ ಕಳೆದ ನಾಲ್ಕು ಪಂದ್ಯಗಳಲ್ಲಿ ಆರು ಗೋಲುಗಳನ್ನು ಗಳಿಸಿದೆ. ಅದರಲ್ಲಿ ಐದು ಗೋಲುಗಳನ್ನು ವಾಸ್ಕಿಸ್ ಗಳಿಸಿದ್ದಾರೆ. ಋತುವಿನ ಮೊದಲ ಜಯವನ್ನು ಗಳಿಸಬೇಕಾದರೆ ಎಸ್ ಸಿ ಇ ಬಿ ಸರ್ವಾಂಗೀಣ ಪ್ರದರ್ಶನವನ್ನು ತೋರಬೇಕಾಗಿದೆ.

Story first published: Thursday, December 10, 2020, 10:28 [IST]
Other articles published on Dec 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+