ಭಾರತದಲ್ಲಿ ಸದ್ದು ಮಾಡುತ್ತಿರುವ ಲೇಡಿ ಬುಮ್ರಾ: ವಿಡಿಯೋ ಸಖತ್ ವೈರಲ್
ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್ ಖ್ಯಾತಿಯ ಜಸ್ಪ್ರಿತ್ ಬುಮ್ರಾ. ಇವರಿಗೆ ವಿಶ್ವದಲ್ಲೆ ಹಲವು ಅಭಿಮಾನಿಗಳಿದ್ದಾರೆ. ಇವರ ಮಾರಕ ದಾಳಿಯನ್ನು ಎದುರಿಸಲು ಬ್ಯಾಟರ್‌ಗಳು ಒದ್ದಾಡುತ್ತಾರೆ. ಇಂತಹ ಒಬ್ಬ ಬೌಲರ್ ನಮ್ಮ ತಂಡದಲ್ಲಿ ಇದ್ದರೆ ಒಳ್ಳೆಯದು ಎಂಬ ಭಾವನೆ ಎಲ್ಲ ತಂಡಗಳದ್ದಾಗಿದೆ. ಇನ್ನು ಮಹಿಳಾ ಕ್ರಿಕೆಟ್ ನಲ್ಲೂ ಹಲವು ತಮ್ಮ ವೇಗದ ದಾಳಿಯಿಂದ ಆಟಗಾರ್ತಿಯರು ಹೆಸರುವಾಸಿ ಆಗಿದ್ದಾರೆ. ಸದ್ಯ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋ ನೋಡಿದರೆ, ಟೀಮ್ ಇಂಡಿಯಾಕ್ಕೆ ಒಬ್ಬ ಲೇಡಿ ಪೇಸರ್ ಸಿಗುವ ಲಕ್ಷಣಗಳು ಕಾಣುತ್ತಿವೆ.
ಜಸ್ಪ್ರಿತ್ ಬುಮ್ರಾ ಅವರ ಮಾರಕ ದಾಳಿಯ ಆಕ್ಷನ್ ಅನ್ ಅರ್ಥೋಡಾಕ್ಸ್ ಆಗಿದೆ. ಇವರ ಕೈಯಿಂದ ರಿಲೀಸ್ ಆಗುವ ಚೆಂಡನ್ನು ಗುರುತಿಸುವುದೇ ಕಷ್ಟ. ಇವರ ವಿಶಿಷ್ಠ ಬೌಲಿಂಗ್ ಆಕ್ಷನ್‌ನನ್ನು ವಿಶ್ವದಲ್ಲಿ ಹಲವು ಆಟಗಾರರು ಫಾಲೋ ಮಾಡುತ್ತಾರೆ. ಬುಮ್ರಾ ಅವರಂತೆ ಬೌಲಿಂಗ್ ಕಲಿಯಲು ಹಲವರು ಶ್ರಮಿಸುತ್ತಾರೆ. ಇವರ ಆಕ್ಷನ್‌ನಲ್ಲಿ ಮಹಿಳಾ ಪೇಸರ್ ಒಬ್ಬಳು ಬೌಲ್ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬುಮ್ರಾ ಅವರ ರೀತಿ ಬೌಲಿಂಗ್ ಮಾಡುವ ಮಹಿಳೆಯನ್ನು ನೀವು ಈ ಹಿಂದೆ ನೋಡಿರಲು ಸಾಧ್ಯವೇ ಇಲ್ಲ. ಈ ಆಟಗಾರ್ತಿಯ ಬೌಲಿಂಗ್ ನೋಡಿದರೆ, ಎಲ್ಲರೂ ಮತ್ತೆ ಮತ್ತೆ ನೋಡುವಂತೆ ಮಾಡುತ್ತದೆ.
ವೈರಲ್ ವಿಡಿಯೋ
ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಶಾಲಾ ಬಾಲಕಿ ಬೌಲಿಂಗ್ ಮಾಡುವುದನ್ನು ಕಾಣಬಹುದು. ಶಾಲಾ ಯುನಿಫಾರ್ಮ್ ತೊಟ್ಟ ಬಾಲಕಿ ಕನ್ನಡಕ ಹಾಕಿಕೊಂಡು ಬುಮ್ರಾ ಆಕ್ಷನ್‌ನಲ್ಲಿ ಬೌಲ್ ಮಾಡುತ್ತಿದ್ದರೆ, ನೋಡುವವರು ಕಂಗಾಲು. ಈ ವಿಡಿಯೋಗೆ ಸಾಮಾಜಿಕ ತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬಿಳಿಯ ಟಾಪ್ ಹಾಗೂ ಕಪ್ಪು ಸ್ಕರ್ಟ್ ಹಾಕಿಕೊಂಡ ಬಾಲೆ ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ಮಾಡುವುದನ್ನು ಕಾಣಬಹುದು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಪ್ರತಿಭೆಯನ್ನು ಬಳಸಿಕೊಳ್ಳುವಂತೆ ಬಿಸಿಸಿಐಗೆ ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ.
ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಆಡುವುದು ಡೌಟ್?
ಜಸ್ಪ್ರಿತ್ ಬುಮ್ರಾ ಅವರ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಇವರು ಬಾಂಗ್ಲಾದೇಶ ವಿರದ್ಧದ ಸರಣಿಯಲ್ಲಿ ಅಂಗಳಕ್ಕೆ ಇಳಿಯುವುದು ಅನುಮಾನ ಎಂದು ಹೇಳಲಾಗುತ್ತದೆ. ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಬುಮ್ರಾ ಅವರಿಗೆ ವಿಶ್ರಾಂತಿ ಸಿಗುವ ಸಾಧ್ಯತೆ ಇದೆ. ಏಕೆಂದರೆ ಟೀಮ್ ಇಂಡಿಯಾ ಮುಂದಿನ ದಿನಗಳಲ್ಲಿ ಸಾಲು ಸಾಲು ಟೆಸ್ಟ್ ಪಂದ್ಯಗಳನ್ನು ಹೊಂದಿದ್ದು, ಬುಮ್ರಾ ಅವರ ಅವಶ್ಯಕತೆ ತುಂಬ ಇದೆ.
ಅಬ್ಬರದ ಸಾಧನೆ
ಇತ್ತೀಚಿಗೆ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಬುಮ್ರಾ ಅಮೋಘ ದಾಳಿಯನ್ನು ನಿರ್ವಹಿಸಿದ್ದಾರೆ. ಟೀಂ ಇಂಡಿಯಾ ಪರ ಬುಮ್ರಾ 8 ಇನ್ನಿಂಗ್ಸ್‌ಗಳಲ್ಲಿ 15 ವಿಕೆಟ್ ಕಬಳಿಸಿದ್ದಾರೆ. ಅರ್ಷದೀಪ್ ಸಿಂಗ್ ನಂತರ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಖ್ಯಾತಿ ಇವರದ್ದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications