Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

16 ವರ್ಷಗಳ ಬಳಿಕ ರಿಯಲ್ ಮ್ಯಾಡ್ರಿಡ್ ತೊರೆಯಲಿದ್ದಾರೆ ಸರ್ಜಿಯೊ ರಾಮೋಸ್

Sergio Ramos to leave Real Madrid after 16 years of service

ಮ್ಯಾಡ್ರಿಡ್: 671 ಪಂದ್ಯಗಳು, 101 ಗೋಲ್‌ಗಳು, 22 ಟ್ರೋಫಿಗಳು ಮತ್ತು 26 ರೆಡ್‌ ಕಾರ್ಡ್‌ಗಳ ಬಳಿಕ ಸರ್ಜಿಯೊ ರಾಮೋಸ್ ರಿಯಲ್ ಮ್ಯಾಡ್ರಿಡ್ ತೊರೆಯಲಿದ್ದಾರೆ. 16 ವರ್ಷಗಳ ಕಾಲ ರಿಯಲ್ ಮ್ಯಾಡ್ರಿಡ್‌ಗೆ ಸೇವೆ ಸಲ್ಲಿಸಿದ್ದ ರಾಮೋಸ್ ಕ್ಲಬ್‌ ಪಾಲಿಗೆ ಶ್ರೇಷ್ಠ ನಾಯಕರಾಗಿದ್ದವರು.

ಬುಧವಾರ (ಜೂನ್ 16) ರಿಯಲ್ ಮ್ಯಾಡ್ರಿಡ್ ತನ್ನ ಕ್ಲಬ್‌ನ ಶ್ರೇಷ್ಠ ಆಟಗಾರನೊಬ್ಬನ ನಿರ್ಗಮನದ ಬಗ್ಗೆ ಮಾಹಿತಿ ನೀಡಿದೆ. ಗುರುವಾರ (ಜೂನ್ 17) ಕ್ಲಬ್‌ನ ಅಧ್ಯಕ್ಷ ಫ್ಲೋರೆಂಟಿನೊ ಪೆರೆಜ್ ಅವರ ಉಪಸ್ಥಿತಿಯಲ್ಲಿ ರಾಮೋಸ್‌ಗೆ ಗೌರವಿಸಿ ಬೀಳ್ಕೊಡುಗೆ ನೀಡಿಲಾಗುತ್ತದೆ ಎಂದು ಮ್ಯಾಡ್ರಿಡ್ ತಿಳಿಸಿದೆ.

ಸ್ಪ್ಯಾನಿಶ್ ನ್ಯೂಸ್‌ ಪೇಪರ್ ಮಾರ್ಕಾ ಪ್ರಕಾರ, 35ರ ಹರೆಯದ ರಾಮೋಸ್ ಕ್ಲಬ್ ಜೊತೆಗಿನ ತನ್ನ ಒಪ್ಪಂದ ಮುಂದುವರೆಸಲು ಒಪ್ಪಿಲ್ಲ ಎಂದು ತಿಳಿದು ಬಂದಿದೆ. 10 ಶೇಕಡಾ ವೇತನ ಕಡಿತದೊಂದಿಗೆ ಒಂದು ವರ್ಷ ಒಪ್ಪಂದ ಮುಂದುವರೆಸಲು ರಿಯಲ್, ರಾಮೋಸ್‌ಗೆ ಆಫರ್ ನೀಡಿತ್ತು. ಆದರೆ ಈ ಆಫರ್ ಅನ್ನು ರಾಮೋಸ್ ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.

'ಯಾವುದೇ ಅನುಮಾನವಿಲ್ಲದೆ ರಿಯಲ್ ಮ್ಯಾಡ್ರಿಡ್‌ನ ಪ್ರಮುಖ ಡಿಫೆಂಡರ್ ಆಗಿದ್ದ ಸರ್ಜಿಯೊ ರಾಮೋಸ್ ತೊರೆಯುತ್ತಿದ್ದಾರೆ,' ಎಂದು ಮಾಜಿ ಸ್ಟ್ರೈಕರ್ ಪ್ರಿಡ್ರಾಗ್ ಮಿಜಾಟೊವಿಕ್ ಹೇಳಿದ್ದಾರೆ.

Story first published: Thursday, June 17, 2021, 9:20 [IST]
Other articles published on Jun 17, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+