ಇಟಲಿಯ ಲೀಗ್ 12ನೇ ವಾರದ ರಿಸಲ್ಟ್ : ಟೊರಿನೊಗೆ ಜಯ
ಬೆಂಗಳೂರು, ನವೆಂಬರ್ 06: ಇಟಲಿಯ ಲೀಗ್ ಸೇರಿ ಎನ 12 ನೇ ವಾರದಲ್ಲಿ ಮೊದಲ ದಿನ ಎರಡು ಪಂದ್ಯಗಳು ಮಾತ್ರ ನಡೆದಿದ್ದು, ಟೊರಿನೊ ತಂಡಕ್ಕೆ ಕಗಲಿಯಾರಿ ವಿರುದ್ಧ 5-1 ಭರ್ಜರಿ ಜಯ ಲಭಿಸಿದೆ. ನಪೋಲಿ ತಂಡದ ವಿರುದ್ಧ ಲಾಜಿಯೊ 1-1 ಡ್ರಾ ಸಾಧಿಸಿತು.
ಟೊರಿನೊ ತಂಡ ಪಂದ್ಯದ ಮೊದಲರ್ಧದಲ್ಲೇ 3-1 ಮುನ್ನಡೆ ಸಾಧಿಸಿತು. ಎರಡನೇ ಅವಧಿಯಲ್ಲಿ ಮತ್ತೆರಡು ಗೋಲು ಬಾರಿಸಿ ಪಂದ್ಯದಿಂದ ಸುಲಭವಾಗಿ ಮೂರು ಅಂಕಗಳನ್ನು ಸಂಪಾದಿಸಿತು.

ನಪೊಲಿ ಹಾಗೂ ಲಾಜಿಯೋ ನಡುವಿನ ಪಂದ್ಯ ಕುತೂಹಲಕಾರಿಯಾಗಿತ್ತು. ನಪೋಲಿ ಪರ ಮಾರೆಕ್ ಹಮ್ಸಿಕ್ ಮೊದಲ ಗೋಲು ಬಾರಿಸಿದರೆ, ಬಾಲ್ಡೆ ಕೈಟಾ ಗೋಲು ಬಾರಿಸಿ ಲಾಜಿಯೋಗೆ ಡ್ರಾ ಸಾಧಿಸುವ ಅವಕಾಶ ನೀಡಿದರು.
ಇಟಲಿಯ ಸೇರಿ ಎ ಲೀಗ್ ನ 12ನೇ ವಾರದ ಫಲತಾಂಶ
* ಟೊರಿನೋ 5-1 ಕಗಲಿಯಾರಿ
* ನಪೋಲಿ 1-1 ಲಾಜಿಯೋ
ಇಟಲಿಯ ಸೇರಿ ಎ ಲೀಗ್ ನ 12ನೇ ವಾರದ ಭಾನುವಾರದ ಪಂದ್ಯಗಳು:
* ಪೆಸ್ಕಾರಾ 0-4 ಎಂಪೋಲಿ
* ಜೆನೊವಾ 1-1 ಉಡಿನೆಸೆ
* ಪಲೆರ್ಮೊ 1-2 ಎಸಿ ಮಿಲಾನ್
* ಚಿವಿವೋ 1-2 ಯುವೆಂಟಸ್
* ಸಸುಯೊಲೊ 0-3 ಅಟ್ಲಾಂಟಾ
* ಫಿಯೊರೆಂಟಿನಾ 1-1 ಸಂಪಾಡೊರಿಯಾ
* ಇಂಟರ್ ಮಿಲಾನ್ 3-0 ಕ್ರೊಟೊನೆ
ಇಟಲಿಯ ಸೇರಿ ಎ ಲೀಗ್ ನ 12ನೇ ವಾರದ ಸೋಮವಾರದ ಪಂದ್ಯ:
* ಎಸಿ ರೋಮಾ 3-0 ಬೊಲೊನ್ಯಾ (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications