For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮಿಲನ್ ಸೋಲಿಸಿ 6ನೇ ಯುರೋಪಾ ಲೀಗ್ ಟ್ರೋಫಿಗೆ ಮುತ್ತಿಕ್ಕಿದ ಸೆವಿಲ್ಲಾ

Sevilla beat Inter Milan 3-2 to lift sixth Europa League title

ಕಲೋನ್: ರೋಚಕ ಪಂದ್ಯದಲ್ಲಿ ಇಂಟರ್ ಮಿಲನ್ ತಂಡವನ್ನು 3-2ರ ಅಂತರದಿಂದ ಸೋಲಿಸಿರುವ ಸೆವಿಲ್ಲಾ 6ನೇ ಬಾರಿಗೆ ಯುರೋಪಾ ಲೀಗ್ ಟ್ರೋಫಿಗೆ ಮುತ್ತಿಕ್ಕಿದೆ. ಲುಕ್ ಡಿ ಜೊಂಗ್ ಜೋಡಿ ಗೋಲುಗಳ ನೆರವಿನಿಂದ ಶುಕ್ರವಾರ (ಆಗಸ್ಟ್ 21) ನಡೆದ ಫೈನಲ್ ಪಂದ್ಯದಲ್ಲಿ ಸೆವಿಲ್ಲ ಗೆಲುವು ತನ್ನದಾಗಿಸಿಕೊಂಡಿತು.

ಪಂದ್ಯದ ಆರಂಭದಲ್ಲಿ ಇಂಡರ್ ಮಿಲಾನ್ ಗೋಲ್ ಬಾರಿಸಿ 1-0ಯ ಮುನ್ನಡೆಯಲ್ಲಿತ್ತು. ರೊಮೊಲು ಲುಕಾಕು 5ನೇ ನಿಮಿಷದಲ್ಲಿ ಗೋಲ್ ಬಾರಿ ಮುನ್ನಡೆ ಕೊಟ್ಟರು. ಅದಾಗಿ 12ನೇ ನಿಮಿಷದಲ್ಲಿ ಸೆವಿಲ್ಲಾದಿಂದ ಲುಕ್ ಡಿ ಜೊಂಗ್ ಗೋಲ್ ಸಿಡಿಸಿ ಅಂಕವನ್ನು 1-1ಕ್ಕೆ ತಂದರು.

ಪಂದ್ಯದ ಮೊಲಾರ್ಧದಲ್ಲೆ ಸೆವಿಲ್ಲಾದಿಂದ ಡಿ ಜೊಂಗ್ 33ನೇ ನಿಮಿಷದಲ್ಲಿ ಎರಡನೇ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಅದಾಗಿ ಇಂಟರ್ ಮಿಲನ್‌ನ ಡಿಯಾಗೋ ಗೊಡಿನ್ 35ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಹುರುಪು ತುಂಬಿದರು.

ಪ್ರಥಮಾರ್ಧದಲ್ಲಿ ತಂಡಗಳ ಗೋಲ್ 2-2ರಿಂದ ಸಮಬಲಗೊಂಡಿದ್ದರಿಂದ ಪಂದ್ಯ ರೋಚಕವೆನಿಸಿತ್ತು. ಆದರೆ ದ್ವಿತೀಯಾರ್ಧದ ಕೊನೆ ಘಳಿಗೆಯಲ್ಲಿ ಅಂದರೆ 74ನೇ ನಿಮಿಷದಲ್ಲಿ ಸೆವಿಲ್ಲಾದ ರೊಮೊಲು ಲುಕಾಕು (ಈ ತಂಡದಲ್ಲೂ ಒಂದೇ ಹೆಸರಿನ ಆಟಗಾರರಿದ್ದಾರೆ) ಗೋಲ್ ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.

Story first published: Saturday, August 22, 2020, 17:23 [IST]
Other articles published on Aug 22, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+