ಫೀಫಾ ವಿಶ್ವಕಪ್ ನಿಂದ ಸೋನಿಗೆ 200 ಕೋ.ರೂ. ಜಾಹೀರಾತು ಆದಾಯ

ನವದೆಹಲಿ, ಜುಲೈ 27: ಸರಿಸುಮಾರು 110.5 ಮಿಲಿಯನ್ ವೀಕ್ಷಕರು ಭಾರತದಲ್ಲಿ ಫೀಫಾ ವಿಶ್ವಕಪ್ ಪಂದ್ಯಾಟವನ್ನು ವೀಕ್ಷಿಸಿದ್ದರು. ಪ್ರತಿಷ್ಠಿತ ಪಂದ್ಯಾಟ ಆರಂಭವಾದ ಜೂನ್ 14ರಿಂದ ಹಿಡಿದು ಮುಕ್ತಾಯದವರೆಗೆ 64 ಪಂದ್ಯಗಳನ್ನು ಸೋನಿ ಟೆನ್ 2, ಸೋನಿ ಟೆನ್ 3 ಮತ್ತು ಇಎಸ್ಪಿಎನ್ ಚಾನೆಲ್ ಗಳು ಪ್ರಸಾರಿಸಿದ್ದವು ಎಂದು ಸೋನಿ ಪಿಕ್ಚರ್ ನೆಟ್ವರ್ಕ್ಸ್ ಇಂಡಿಯಾ (ಎಸ್ಪಿಎನ್) ಹೇಳಿದೆ.
ಫೀಫಾ ವಿಶ್ವಕಪ್ ಪಂದ್ಯಾಟದ ವೇಳೆ ಸೋನಿ ಚಾನೆಲ್ ಒಟ್ಟು ಸುಮಾರು 40 ಜಾಹೀರಾತುದಾರರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಸೋನಿಗೆ ಜಾಹೀರಾತು ಆದಾಯವಾಗಿ ವಿವಿಧ ಜಾಹೀರಾತುದಾರರಿಂದ 200 ಕೋ.ರೂ. ಲಭಿಸಲಿದೆ. 2014ರ ಫೀಫಾ ಪ್ರಸಾರಕ್ಕಾಗಿ ಸೋನಿ ಕೇವಲ 100 ಕೋ.ರೂ ಜಾಹೀರಾತು ಆದಾಯ ಗಳಿಸಿತ್ತು.

ಸೋನಿ ಬ್ರಾಡ್ ಕಾಸ್ಟರ್ ಹೇಳುವಂತೆ, ಜುಲೈ 15ರಂದು ನಡೆದ ಫ್ರಾನ್ಸ್ vs ಕ್ರೊವೇಷಿಯಾ ನಡುವಿನ ಫೈನಲ್ ಪಂದ್ಯಾಟವನ್ನು ಒಟ್ಟು 51.2 ಮಿಲಿಯನ್ ಕ್ರೀಡಾಭಿಮಾನಿಗಳು ಭಾರತದಲ್ಲಿ ವೀಕ್ಷಿಸಿದ್ದರು. ಅಲ್ಲದೆ 70 ಮಿಲಿಯನ್ ವೀಕ್ಷಕರು ಎಸ್ಪಿಎನ್, ಸೋನಿ ಲೈವ್ ಮೂಲಕ ಪ್ರಸಾರಿಸಿದ್ದ ವಿಡಿಯೋವನ್ನು ವೀಕ್ಷಿಸಿದ್ದರು.
ಲೈವ್ ಪಂದ್ಯಗಳು, ಗ್ರೌಂಡ್ ಶೋಗಳು, ಫೀಫಾ ವಿಶ್ವಕಪ್ ಆವರಣದಲ್ಲಿ ನಡೆದ ಕಾರ್ಯಕ್ರಮಗಳ ಕವರೇಜ್ ಗಳನ್ನು ಸೇರಿಸಿ ಎಸ್ಪಿಎನ್ ಮೂಲಕ 2018ರ ಫೀಫಾ ವಿಶ್ವಕಪ್, ಒಟ್ಟಿಗೆ 254 ಮಿಲಿಯನ್ ವೀಕ್ಷಣೆ ದಾಖಲೆ ಹೊಂದಿತ್ತು.
ಇದೇ ಮೊದಲಬಾರಿಗೆ ಸೋನಿ ಕಾರ್ಯಕ್ರಮ ಪ್ರಸಾರಕ್ಕಾಗಿ ಮಲೆಯಾಳಂ, ಬೆಂಗಾಲಿ, ತಮಿಳ್ ಮತ್ತು ತೆಲುಗು ಈ ಸ್ಥಾನಿಕ ಭಾಷೆಗಳನ್ನು ಪರಿಚಯಿಸಿದ್ದು, ಅವರುಗಳಿಗೂ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಸೋನಿ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications