Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊರೊನಾ ವೈರಸ್‌ನಿಂದ ಸೌತಾಂಪ್ಟನ್‌ನ ಎಫ್‌ಎ ಕಪ್‌ ಪಂದ್ಯ ರದ್ದು

Southampton’s FA Cup game called off because of virus

ಸೌತಾಂಪ್ಟನ್: ಕೊರೊನಾವೈರಸ್ ಪ್ರಕರಣಗಳು ಏಕಾಯೇಕಿ ಏರುತ್ತಿರುವ ಬಗ್ಗೆ ಥರ್ಡ್ ಡಿವಿಶನ್ ತಂಡ ವರದಿ ಮಾಡಿದ ಬಳಿಕ ಶ್ರೂಸ್‌ಬರಿ ವಿರುದ್ಧದ ಸೌತಾಂಪ್ಟನ್ ಪಂದ್ಯ ಗುರುವಾರ (ಜನವರಿ 7) ರದ್ದಾಗಿದೆ. ಮೂರನೇ ಸುತ್ತಿನ ಪಂದ್ಯ ಶನಿವಾರ ಸೇಂಟ್‌ ಮೇರೀಸ್ ಸ್ಟೇಡಿಯಂನಲ್ಲಿ ನಡೆಯುವುದರಲ್ಲಿತ್ತು.

ಶನಿವಾರ ನಡೆಯಬೇಕಿದ್ದ ಶ್ರೂಸ್‌ಬರಿ ವಿರುದ್ಧದ ಪಂದ್ಯ ಮುಂದೂಡಲ್ಪಟ್ಟು ಬೇರೆ ದಿನಗಳಲ್ಲಿ ನಡೆಯಲಿದೆಯೋ ಅನ್ನೋದು ಇನ್ನೂ ಸ್ಪಷ್ಟಗೊಂಡಿಲ್ಲ. 'ಶ್ರೂಸ್‌ಬರಿ ಕ್ಲಬ್‌ನ ಹಲವಾರು ಸದಸ್ಯರು ಮತ್ತು ಟೌನ್ ತಂಡದ ಸಿಬ್ಬಂದಿಗಳೂ ಹಲವಾರು ಮಂದಿ ಕೋವಿಡ್‌-19ಗೆ ಪಾಸಿಟಿವ್ ಬಂದಿದ್ದಾರೆ,' ಎಂದು ಲೀಗ್‌ ಒನ್ ಟೀಮ್ ಹೇಳಿದೆ.

ಫುಟ್ಬಾಲ್ ಅಸೋಸಿಯೇಶನ್‌ ಪಂದ್ಯ ಮುಂದೂಡಿರುವ ಬಗ್ಗೆ ಸೌತಾಂಪ್ಟನ್ ತಂಡಕ್ಕೆ ಮಾಹಿತಿ ನೀಡಿದೆ. ಮುಂದಿನ ವಾರ ಸಭೆ ಕರೆದು ಈ ಬಗ್ಗೆ ಚರ್ಚಿಸುವುದಾಗಿ ಹೇಳಿದೆ. 'ಏನು ನಡೆಯಲಿದೆ ಎಂಬುದರ ಬಗ್ಗೆ ಸಭೆಯ ಬಳಿಕ ನಿರ್ಧಾರ ಕೈಗೊಳ್ಳಲಿದ್ದೇವೆ,' ಎಂದು ಪ್ರೀಮಿಯರ್ ಲೀಗ್‌ ಕ್ಲಬ್ ಸೌತಾಂಪ್ಟನ್ ಹೇಳಿದೆ.

ಅಲ್ಲದೆ, ಶನಿವಾರ ನಿಗದಿಯಾಗಿದ್ದ ವೆಸ್ಟ್ ಹ್ಯಾಮ್ ವಿರುದ್ಧದ ಪಂದ್ಯವನ್ನು ಮುಂದೂಡಲಾಗಿದೆ ಎಂದು ಮ್ಯಾಂಚೆಸ್ಟರ್ ಸಿಟಿ ಮಹಿಳಾ ತಂಡ ಗುರುವಾರ ಖಾತರಿಪಡಿಸಿದೆ.

Story first published: Friday, January 8, 2021, 10:13 [IST]
Other articles published on Jan 8, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+