Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲಾ ಲೀಗಾ: ರೊನಾಲ್ಡೊ ಹ್ಯಾಟ್ರಿಕ್, ಮ್ಯಾಡ್ರಿಡ್ ಡರ್ಬಿ 'ರಿಯಲ್' ಪಾಲು

ಬೆಂಗಳೂರು, ನವೆಂಬರ್ 20: ಸ್ಪೇನಿನ ಫುಟ್ಬಾಲ್ ಲೀಗ್ ಲಾ ಲೀಗಾದ 12ನೇ ವಾರದಲ್ಲಿ ಮ್ಯಾಡ್ರಿಡ್ ಸಿಟಿ ಡರ್ಬಿ ಎಲ್ಲರ ಗಮನ ಸೆಳೆಯಿತು. ರೊನಾಲ್ಡೊ ಹ್ಯಾಟ್ರಿಕ್ ಗೋಲು ಎಲ್ಲರ ಗಮನ ಸೆಳೆಯಿತು.

12 ನೇ ವಾರದಲ್ಲಿ 10 ಪಂದ್ಯಗಳ ಪೈಕಿ 6 ಪಂದ್ಯಗಳು ಶನಿವಾರ(ನವೆಂಬರ್ 19) ರಂದು ನಡೆಯಿತು. ರಿಯಲ್ ಮ್ಯಾಡ್ರಿಡ್ ಹಾಗೂ ಅಟ್ಲೆಟಿಕೊ ಮ್ಯಾಡ್ರಿಡ್ ಪಂದ್ಯದಲ್ಲಿ ಸಂಪೂರ್ಣವಾಗಿ ರಿಯಲ್ ಮ್ಯಾಡ್ರಿಡ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮಿಂಚಿದರು.

La Liga game week 12: Roundup and results

ಪೋರ್ಚುಗೀಸ್ ಅಟಗಾರ ರೊನಾಲ್ಡೊ ಮತ್ತೆ ಲಯ ಕಂಡುಕೊಂಡು ತಮ್ಮ 39 ನೇ ಹ್ಯಾಟ್ರಿಕ್ ಗೋಲು ಬಾರಿಸಿ ರಿಯಲ್ ಮ್ಯಾಡ್ರಿಡ್ ಗೆ ಜಯ ತಂದರು. ಗರೇತ್ ಬೇಲ್ ಹಾಗೂ ರೊನಾಲ್ಡೊ ಅವರನ್ನು ಸಮರ್ಥವಾಗಿ ಕಣದಲ್ಲಿ ಬಳಸಿಕೊಂಡ ಮ್ಯಾನೇಜರ್ ಜಿದಾನೆ, ಅಟ್ಲೆಟಿಕೊಗೆ ಆಘಾತ ನೀಡಿದರು.

ಈ ಗೆಲುವಿನೊಂದಿಗೆ ರಿಯಲ್ ಮ್ಯಾಡ್ರಿಡ್ ಅಜೇಯವಾಗಿ ಉಳಿದಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬದ್ಧವೈರಿ ಬಾರ್ಸಿಲೋನಾ ತಂಡ ನಾಲ್ಕು ಅಂಕ ಕಡಿಮೆ ಗಳಿಸಿ ಎರಡನೇ ಸ್ಥಾನದಲ್ಲಿದೆ.

ಇನ್ನೊಂದೆಡೆ ಮಲಗಾ ವಿರುದ್ಧ ಬಾರ್ಸಿಲೋನಾ ತಂಡ ಡ್ರಾ ಸಾಧಿಸಿದ್ದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿತು. ಮೆಸ್ಸಿ ಹಾಗೂ ಸ್ವಾರೇಜ್ ಇಲ್ಲದೆ 0-0 ಡ್ರಾಗೆ ತೃಪ್ತಿಪಡಬೇಕಾಯಿತು.

ಶನಿವಾರದ ಪಂದ್ಯಗಳ ಫಲಿತಾಂಶ
* ರಿಯಲ್ ಬೆಟಿಸ್ 2-0 ಲಾಸ್ ಪಾಲ್ಮಸ್
* ಡೆಪಾರ್ಟಿವೋ 2-3 ಸೆವಿಲಾ
* ಎಫ್ ಸಿ ಬಾರ್ಸಿಲೋನಾ 0-0 ಮಲಗಾ
* ಐಬಾರ್ 1-0 ಸೆಲ್ಟಾ ವಿಗೋ
* ಅಟ್ಲೆಟಿಕೋ ಮ್ಯಾಡ್ರಿಡ್ 0-3 ರಿಯಲ್ ಮ್ಯಾಡ್ರಿಡ್

ಭಾನುವಾರದ ಪಂದ್ಯಗಳು
* ಆಲ್ವೇಸ್ Vs ಎಸ್ಪಾನ್ಯೊಲ್
* ವಲ್ಸೇನಿಯಾ Vs ಗ್ರನಡಾ
* ಸ್ಫೋರ್ಟಿಂಗ್ Vs ರಿಯಲ್ ಸೋಷಿಡಾಡ್

ಸೋಮವಾರದ ಪಂದ್ಯಗಳು
* ಅಟ್ಲೆಟಿಕ್ ಬಿಲ್ಬೋ Vs ವಿಲ್ಲಾರ್ ರಿಯಲ್

ಮಂಗಳವಾರದ ಪಂದ್ಯಗಳು
* ಲೆಗಾನೆಸ್ Vs ಓಸಾಸುನಾ

(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:06 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+