Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ 2018: ಮೊರಾಟಾ, ಫ್ಯಾಬ್ರಿಗೇಸ್ ಇಲ್ಲದ ಸ್ಪೇನ್ ತಂಡ

Spain squad: Chelseas Morata, Fabregas, Pedro and Marcos Alonso miss out on World Cup selection

ಮ್ಯಾಡ್ರೀಡ್, ಮೇ 22: ಚೆಲ್ಸಿ ಪರ ಆಡುವ ಆಲ್ವಾರೋ ಮೊರಾಟ, ಸೆಸ್ಕ್ ಫ್ಯಾಬ್ರಿಗೇಸ್ ಅವರು ಈ ಬಾರಿಯ ವಿಶ್ವಕಪ್ ಆಡಲಿರುವ ಸ್ಪೇನ್ ತಂಡಕ್ಕೆ ಆಯ್ಕೆಯಾಗಿಲ್ಲ. ಮೊರಾಟಾ ಬದಲಿಗೆ ಅಟ್ಲೆಟಿಕೋ ಮ್ಯಾಡ್ರಿಡ್ ನ ಡಿಯಾಗೋ ಕೋಸ್ಟಾ, ವೆಲೆನ್ಸಿಯಾದ ರೊಡ್ರಿಗೋ ಮೊರೆನೋ ಹಾಗೂ ಸೆಲ್ಟಾ ವಿಗೋ ತಂಡದ ಲಗೋ ಆಸ್ಪಾಸ್ ಆಯ್ಕೆಯಾಗಿದ್ದಾರೆ.

ರಷ್ಯಾದಲ್ಲಿ ನಡೆಯಲಿರುವ ಫೀಫಾ ವಿಶ್ವಕಪ್ 2018ರ ಜಾಗತಿಕ ಸಮರದಲ್ಲಿ ಸ್ಪೇನ್ ಪ್ರಶಸ್ತಿ ಗೆಲ್ಲಬಹುದಾದ ನೆಚ್ಚಿನ ತಂಡಗಳ ಪೈಕಿ ಒಂದೆನಿಸಿದೆ.

ವಿಶ್ವಕಪ್ ಫುಟ್ಬಾಲ್ 2018 : ಸಂಪೂರ್ಣ ವೇಳಾಪಟ್ಟಿ

ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಉತ್ತಮವಾಗಿ ಆಡಿದರೂ ಮೊರಾಟಾ ಆಯ್ಕೆಯಾಗಿಲ್ಲ. ಎರಡು ವರ್ಷಗಳ ಕಾಲ ತಂಡದಿಂದ ಹೊರಗುಳಿದಿದ್ದ ಫ್ಯಾಬ್ರಿಗೇಸ್ ಗೆ ಮತ್ತೆ ಅದೃಷ್ಟ ಕೈಗೂಡಿಲ್ಲ. ಇವರಿಬ್ಬರಲ್ಲದೆ ಪೆಡ್ರೋ, ಮಾರ್ಕೊಸ್ ಅಲಾನ್ಸೋ ಕೂಡಾ ತಂಡಕ್ಕೆ ಆಯ್ಕೆಯಾಗಿಲ್ಲ.

ಬಾರ್ಸಿಲೋನಾ ತೊರೆದ ಹಿರಿಯ ಆಟಗಾರ ಆಂಡ್ರೆ ಇನಿಯಸ್ಟಾ ಅವರು ಸ್ಪೇನ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆರ್ಸೆನಲ್ ನ ನಾಚೋ ಮೊನ್ರಿಯಾಲ್ ಅಚ್ಚರಿಯ ಸೇರ್ಪಡೆ ಎನ್ನಬಹುದು.

ರಷ್ಯಾದ ಸೋಚಿಯಲ್ಲಿ ಜೂನ್ 15ರಂದು ಪೋರ್ಚುಗಲ್ ವಿರುದ್ಧ ಮೊದಲ ಪಂದ್ಯವಾಡಲಿರುವ ಸ್ಪೇನ್, ಜೂನ್ 20ರಂದು ಕಜಾನ್ ನಲ್ಲಿ ಇರಾನ್ ತಂಡವನ್ನು ಹಾಗೂ ಜೂನ್ 25ರಂದು ಕಲಿನ್ನಿನ್ಗಾರ್ಡ್ ನಲ್ಲಿ ಮೊರಾಕೊ ತಂಡವನ್ನು ಎದುರಿಸಲಿದೆ.

23 ಸದಸ್ಯರ ಸ್ಪೇನ್ ತಂಡ ಇಂತಿದೆ:
ಗೋಲ್ ಕೀಪರ್ಸ್ : ಕೆಪಾ ಅರಿಜಾಬಲಗ (ಅಥ್ಲೆಟಿಕೋ ಬಿಲ್ಬೋ), ಡೇವಿಡ್ ಡೆ ಗಿಯಾ (ಮ್ಯಾಂಚೆಸ್ಟರ್ ಯುನೈಟೆಡ್), ಪೆಪೆ ರೈನಾ (ನಪೋಲಿ)

ಡಿಫೆಂಡರ್ಸ್: ಜೋರ್ಡಿ ಆಲ್ಬಾ (ಬಾರ್ಸಿಲೋನಾ), ಸೆಸರ್ ಅಲ್ಪಿಕ್ಯೂಟಾ (ಚೆಲ್ಸಿಯಾ), ಡಾನಿ ಕರ್ವಾಲ್(ರಿಯಲ್ ಮ್ಯಾಡ್ರಿಡ್), ನಾಚೋ ಫರ್ನಾಂಡೀಸ್ (ರಿಯಲ್ ಮ್ಯಾಡ್ರಿಡ್), ನಾಚೊ ಮೊನ್ರಿಯಾಲ್ (ಆರ್ಸೆನಲ್), ಅಲ್ವಾರೋ ಒಡ್ರಿಯೊಜೊಲಾ (ರಿಯಲ್ ಸೊಷಿಯಾಡಾಡ್), ಗೆರಾಡ್ ಪೀಕೆ (ಬಾರ್ಸಿಲೋನಾ), ಸರ್ಗಿಯೋ ರಮೋಸ್ (ರಿಯಲ್ ಮ್ಯಾಡ್ರೀಡ್)

ಮಿಡ್ ಫೀಲ್ಡರ್ಸ್ : ಥಿಯಾಗೋ ಅಲ್ಕಾಂತರಾ(ಬಯಾ ಮ್ಯೂನಿಚ್), ಸರ್ಗಿಯೋ ಬುಸ್ಕೆಟ್ಸ್ ( ಬಾರ್ಸಿಲೋನಾ), ಆಂಡ್ರೆ ಇನಿಯಾಸ್ಟಾ (ಬಾರ್ಸಿಲೋನಾ), ಇಸ್ಕೊ (ರಿಯಲ್ ಮ್ಯಾಡ್ರಿಡ್), ಕೊಕೆ (ಅಟ್ಲೆಟಿಕೋ ಮ್ಯಾಡ್ರಿಡ್), ಸಾವುಲ್ ನಿಗ್ವೇಜ್ (ಅಟ್ಲೆಟಿಕೋ ಮ್ಯಾಡ್ರಿಡ್), ಡೇವಿಡ್ ಸಿಲ್ವಾ (ಮ್ಯಾಂಚೆಸ್ಟರ್ ಸಿಟಿ)

ಫಾರ್ವರ್ಡ್ಸ್ : ಮಾರ್ಕೋ ಅಸೆನ್ಸಿಯೋ(ರಿಯಲ್ ಮ್ಯಾಡ್ರಿಡ್), ಲಗೋ ಆಸ್ಪಾಸ್ (ಸೆಲ್ಟಾ ವಿಗೋ), ಡಿಯಾಗೋ ಕೋಸ್ಟಾ (ಅಟ್ಲೆಟಿಕೋ ಮ್ಯಾಡ್ರಿಡ್), ರೋಡ್ರಿಗೋ ಮೊರೆನೊ (ವೆಲನ್ಸಿಯಾ), ಲೂಕಾಸ್ ವಾಜ್ಕ್ವೇಜ್ (ರಿಯಲ್ ಮ್ಯಾಡ್ರಿಡ್)

Story first published: Friday, June 8, 2018, 18:18 [IST]
Other articles published on Jun 8, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+