ರೊನಾಲ್ಡೋ ವಿರುದ್ಧ ಅತ್ಯಾಚಾರ ಆರೋಪ: ಯುವೆಂಟಸ್ ಶೇರು ಕುಸಿತ!

ಲಿಸ್ಬನ್, ಅಕ್ಟೋಬರ್ 6: ಪೋರ್ಚುಗಲ್ ಸ್ಟಾರ್ ಕ್ರಿಸ್ಚಿಯಾನೊ ರೊನಾಲ್ಡೋ ವಿರುದ್ಧ ಮಹಿಳೆಯೊಬ್ಬರು ಮಾಡಿರುವ ಅತ್ಯಾಚಾರ ಆರೋಪ, ರೊನಾಲ್ಡೋ ಪ್ರತಿನಿಧಿಸುತ್ತಿರುವ ಇಟಲಿಯ ಯುವೆಂಟಸ್ ತಂಡದ ಶೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಯುವೆಂಟಸ್ ಶೇರು ಮಾರುಕಟ್ಟೆ ಕುಸಿದಿದೆ.
ಅಮೆರಿಕಾದ ನೆವಡಾದ ಕ್ಯಾಥರಿನ್ ಮಯೋರ್ಗಾ ಎನ್ನುವ 34ರ ಹರೆಯದ ಮಹಿಳೆ, 2009ರಲ್ಲಿ ಅಮೆರಿಕಾದ ಲಾಸ್ ವೇಗಸ್ ನ ಹೊಟೇಲ್ ರೂಮೊಂದರಲ್ಲಿ ರೊನಾಲ್ಡೋ ತನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಿದ್ದರು. ಜರ್ಮನಿಯ ಮ್ಯಾಗಜಿನ್ 'ಡೆರ್ ಸ್ಪೀಗೆಲ್' ಈ ಬಗ್ಗೆ ವರದಿ ಪ್ರಕಟಿಸಿತ್ತು.
ಮಯೋರ್ಗಾ ಮಾಡಿರುವ ಆರೋಪವನ್ನು ರೊನಾಲ್ಡೋ ಮತ್ತವರ ಲಾಯರ್ ಸುಳ್ಳೆದು ತಳ್ಳಿ ಹಾಕಿದ್ದರು. ಆದರೆ ಆರೋಪದಿಂದ ಸ್ಟಾರ್ ಫುಟ್ಬಾಲಿಗನ ಘನತೆಗೆ ಧಕ್ಕೆಯಾಗಿದ್ದಂತೂ ಸುಳ್ಳಲ್ಲ.

ಮುಚ್ಚಿಡಲು ಯತ್ನ
ಆರೋಪಿಸುತ್ತಿರುವ ಮಯೋರ್ಗಾ ಅವರು, ಅತ್ಯಾಚಾರ ಮಾಡಿದ ಬಳಿಕ ರೊನಾಲ್ಡೋ ಪ್ರಕರಣವನ್ನು ಮುಚ್ಚಿಡುವಂತೆ ತನಗೆ 375,000 ಯುಎಸ್ ಡಾಲರ್ ನೀಡಿದ್ದಾಗಿ ಹೇಳಿಕೊಂಡಿದ್ದರು. ಆದರೆ ರೊನಾಲ್ಡೋ ಅವರ ಲಾಯರ್ ಸ್ಕರ್ಟ್ಜ್ ಬರ್ಗ್ಮಾನ್ ರೆಕ್ಸಾನ್ವಾಲ್ಟ್ ಅವರು 'ಸುಳ್ಳು ಸುದ್ದಿ' ಎಂದು ಈ ಆರೋಪವನ್ನು ನಿರಾಕರಿಸಿದ್ದರು.

ಪಾರ್ಟಿಯಲ್ಲಿ ಜೊತೆಯಾಗಿದ್ದರು
ತನ್ನ ಸಂಬಂಧಿಕರೊಂದಿಗೆ ರಜೆ ಕಳೆಯಲು ಲಾಸ್ ವೇಗಸ್ ಗೆ ತೆರಳಿದ್ದ ರೊನಾಲ್ಡೋ ಸಂಜೆ ಪಾರ್ಟಿಯೊಂದರಲ್ಲಿ ಮಯೋರ್ಗಾ ಅವರೊಂದಿಗೆ ಕಳೆದಿದ್ದರಂತೆ. ಈ ವೇಳೆ ರೊನಾಲ್ಡೋ ತನ್ನನ್ನು ಅತ್ಯಾಚಾರ ಮಾಡಿದ್ದರು ಎಂದು ಘಟನೆಯ 9 ವರ್ಷಗಳ ಬಳಿಕ ಕ್ಯಾಥರಿನ್ ಮಾಧ್ಯಮಗಳ ಮುಂದೆ ನಿಂತಿದ್ದರು.

ಮೊಣಕಾಲೂರಿ ಹೀಗಂದಿದ್ದ!
ಘಟನೆಯನ್ನು ಮತ್ತೂ ವಿವರಿಸುತ್ತ ಮಯೋರ್ಗಾ, 'ಆ ಸಂದರ್ಭ ನನ್ನ ಮುಂದೆ ಮೊಣಕಾಲೂರಿದ್ದ ರೊನಾಲ್ಡೋ, ನಾನು ಇದೊಂದು ಪರ್ಸೆಂಟ್ ಗೆ ಹೊರತಾಗಿ ಉಳಿದ 99 ಪರ್ಸೆಂಟ್ ಒಳ್ಳೆಯ ವ್ಯಕ್ತಿಯೇ ಎಂದು ಹೇಳಿದ್ದರು' ಎಂದಿದ್ದರು.

ಕೆಳಗಿಳಿದ ಶೇರು
ಯುವೆಂಟಸ್ ತಂಡದ ವೆಬ್ ಸೈಟ್ ಗೆ ಪ್ರಾಯೋಜಕತ್ವ ನೀಡುತ್ತಿದ್ದ ಕೆಲ ಪ್ರಾಯೋಜಕರು ಆರೋಪ ಪ್ರಕರಣದ ಬಳಿಕ ಪ್ರಾಯೋಜಕತ್ವದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಶುಕ್ರವಾರ (ಅ.5) ಹೊತ್ತಿಗೆ ಯುವೆಂಟಸ್ ತಂಡದ ಸ್ಟಾಕ್ ಪ್ರೈಸ್ ಸುಮಾರು ಶೇಕಡಾ 10ರಷ್ಟು ಕೆಳಗಿಳಿದಿದೆ. ಅದ್ಹಾಗೆ ಆರೋಪಕ್ಕೆ ಸಂಬಂಧಿಸಿ ಯುಎಸ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications