ವ್ಯಾಲೆಟ್ಟಾ ಎಫ್‌ಸಿ ಆಫರ್ ನಿರಾಕರಿಸಿದ ಮಿಂಚಿನ ಓಟಗಾರ ಉಸೇನ್ ಬೋಲ್ಟ್

ಸಿಡ್ನಿ, ಅಕ್ಟೋಬರ್ 18: ವೇಗದ ಓಟದಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಉಸೇನ್ ಬೋಲ್ಟ್, ಮಾಲ್ಟೀಸ್ ಚಾಂಪಿಯನ್ಸ್ 'ವ್ಯಾಲೆಟ್ಟಾ ಎಫ್‌ಸಿ' ತಮ್ಮ ತಂಡ ಸೇರುವಂತೆ ನೀಡಿದ್ದ ಆಫರನ್ನು ನಿರಾಕರಿಸಿದ್ದಾರೆ. ಈಗವರು ಆಸ್ಟ್ರೇಲಿಯಾದ ಸೆಂಟ್ರಲ್ ಕೋಸ್ಟ್ ಮರೀನರ್ಸ್ ತಂಡದಲ್ಲಿದ್ದಾರೆ.
ವೇಗದ ಓಟದಲ್ಲಿ ಎಂಟು ಬಾರಿ ಒಲಿಂಪಿಕ್ ಚಾಂಪಿಯನ್ ಎನಿಸಿದ್ದ ಬೋಲ್ಟ್, ಓಟದಲ್ಲಿ ಹಿನ್ನಡೆ ಕಾಣುತ್ತಲೇ ಫುಟ್ಬಾಲ್ ಮೈದಾನಕ್ಕೆ ಜಿಗಿದ್ದಿದ್ದರು. ತಾನೊಬ್ಬ ವೃತ್ತಿಪರ ಫುಟ್ಬಾಲ್ ಆಟಗಾರನಾಗಬೇಕೆಂದು ಕನಸುಕಂಡಿದ್ದ ವಿಶ್ವ ದಾಖಲೆಯ ಓಟಗಾರ ಉಸೇನ್, ಸೆಂಟ್ರಲ್ ಕೋಸ್ಟ್ ಮರೀನರ್ಸ್ ತಂಡ ಸೇರಿಕೊಂಡಿದ್ದರು.
ದೂರದ ಓಟಗಾರ ಫುಟ್ಬಾಲ್ ಗೆ ಕೊಂಚ ಬೇಗನೆ ಹೊಂದಿಕೊಳ್ಳುತ್ತಾನೆ. ಆದರೆ ವೇಗದ ಓಟಗಾರನಿಗೆ ಫುಟ್ಬಾಲ್ ಗೆ ಹೊಂದಿಕೊಳ್ಳೋದು ಸುಲಭವಿಲ್ಲ. ಬೋಲ್ಟ್ ಆರಂಭದಲ್ಲಿ ಫುಟ್ಬಾಲ್ ಮೈದಾನದಲ್ಲಿ ಸುಸ್ತಾಗಿದ್ದೂ ಇದೆ. ಆದರೆ ಇತ್ತೀಚೆಗೆ (ಅ.12) ನಡೆದಿದ್ದ ಸೌಹಾರ್ದ ಪಂದ್ಯದಲ್ಲಿ ಮ್ಯಾಕ್ಥರ್ಥರ್ ಸೌತ್ ಯುನೈಟೆಡ್ ಎಫ್‌ಸಿ ವಿರುದ್ಧ ಬೋಲ್ಟ್ ಎರಡು ಗೋಲ್ ಬಾರಿಸಿದ್ದರು. ಪಂದ್ಯದಲ್ಲಿ ಮರೀನರ್ಸ್ 4-0ಯಿಂದ ಗೆದ್ದಿತ್ತು.
ಫುಟ್ಬಾಲ್ ನಲ್ಲಿ ಬೋಲ್ಟ್ ಸುಧಾರಣೆ ಕಾಣುತ್ತಿರುವುದರಿಂದ ವ್ಯಾಲೆಟ್ಟಾ ಎಫ್‌ಸಿ, ತಂಡ ಸೇರಲು ಬೋಲ್ಟ್ ಗೆ ಆಫರ್ ಮಾಡಿತ್ತು. ಆದರೆ ಬೋಲ್ಟ್ ಆಫರ್ ನಿರಾಕರಿದ್ದಾರೆ ಎಂದು ಉಸೇನ್ ಏಜೆಂಟ್ ರಿಕಿ ಸಿಮ್ಸ್ ತಿಳಿಸಿದ್ದಾರೆ. 'ನಾವು ದಿನನಿತ್ಯ ಇಂಥ ಸಾಕಷ್ಟು ಆಫರ್ ಗಳನ್ನು ಪಡೆಯುತ್ತಿದ್ದೇವೆ. ಆದರೆ ಸದ್ಯದ ಮಟ್ಟಿಗೆ ಬೋಲ್ಟ್ ಮಾಲ್ಟೀಸ್ ಸೇರುತ್ತಿಲ್ಲ ಎಂದು ಖಾತರಿ ಪಡಿಸುತ್ತಿದ್ದೇನೆ' ಎಂದು ರಿಕಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications